ಮುರ್ಡೇಶ್ವರ  ಲಯನ್ಸ್ ಕ್ಲಬ್ ವತಿಯಿಂದ ಸ್ನೇಹವಿಶೇಷ ಶಾಲೆಗೆ ಸಹಾಯ ಹಸ್ತ

Source: sonews | By sub editor | Published on 10th September 2018, 5:47 PM | Coastal News | Don't Miss |

ಭಟ್ಕಳ: ಲಯನ್ಸ್ ಕ್ಲಬ್ ಮುರ್ಡೇಶ್ವರವು ಸ್ನೇಹ ವಿಶೇಷ ಶಾಲೆಗೆ ವಿಶೇಷ ಅಗತ್ಯವುಳ್ಳ ಮಕ್ಕಳನ್ನು ಶಾಲೆಗೆ ಕರೆತರಲು ಅವಶ್ಯಕವಾದ ವಾರ್ಷಿಕ ಪ್ರಯಾಣ ಭತ್ಯೆಯಾಗಿ 6000ರೂಪಾಯಿಗಳನ್ನು ದೇಣಿಗೆಯಾಗಿ ನೀಡಿತು. 
ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಾಗರಾಜ ಭಟ್‍ರವರು ಚೆಕ್‍ನ್ನು ಶಾಲೆಯ ಮುಖ್ಯ ಶಿಕ್ಷಕಿಯಾದ ಮಾಲತಿ ಶಿರೂರ್‍ರವರಿಗೆ ಹಸ್ತಾಂತರಿಸಿದರು. 
ಈ ವೇಳೆ ಲಯನ್ಸ್ ಕಾರ್ಯದರ್ಶಿ ನಾಗೇಶ ಮಡಿವಾಳ, ಸದಸ್ಯರಾದ ಡಾ.ವಾಧಿರಾಜ ಭಟ್, ಡಾ.ಸುನೀಲ್ ಜತ್ತನ್, ಡಾ.ಹರಿಪ್ರಸಾದ ಕಿಣಿ, ತಿಲಕ್ ರಾವ್, ಎ.ಎನ್.ಶೆಟ್ಟಿ, ವಿಶ್ವನಾಥ ಕಾಮತ, ಸುಬ್ರಾಯ ನಾಯ್ಕ, ಮೋಹನ ನಾಯ್ಕ, ಕಿರಣ ಕಾಯ್ಕಿಣಿ, ಗೌರೀಶ ನಾಯ್ಕ, ಶ್ರೀಧರ ನಾಯ್ಕ, ಗಜಾನನ ಶೆಟ್ಟಿ ಹಾಜರಿದ್ದರು. ಈ ವರ್ಷ ಜೂನ್ ತಿಂಗಳಲ್ಲಿಯೂ ಕೂಡ ಲಯನ್ಸ್ ಕ್ಲಬ್ ಈ ಶಾಲೆಗೆ ಸಾರಿಗೆ ಭತ್ಯೆಯಾಗಿ 10000ರೂಪಾಯಿಗಳನ್ನು ನೀಡಿದ್ದು, ಕ್ಲಬ್‍ನ ಸಮಾಜಮುಖಿ ಕಾರ್ಯಗಳಿಗೆ ಶಾಲಾ ಶಿಕ್ಷಕರು ಹರ್ಷ ವ್ಯಕ್ತಪಡಿಸಿದರು. ಪ್ರತಿ ವರ್ಷ ಮುರ್ಡೇಶ್ವರ ಲಯನ್ಸ್ ಕ್ಲಬ್ ಈ ಶಾಲೆಯಲ್ಲಿ ಒಂದಿಲ್ಲೊಂದು ಕಾರ್ಯಕ್ರಮ ಹಮ್ಮಿಕೊಂಡು ಸಹಾಯ ನೀಡುತ್ತಿರುವುದನ್ನು ಸ್ಮರಿಸಬಹುದಾಗಿದೆ. 
 

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...