ಮುರ್ಡೇಶ್ವರ: ಜನತಾ ವಿದ್ಯಾಲಯದಲ್ಲಿ ನೋಟ್- ಬುಕ್ ವಿತರಣಾ ಕಾರ್ಯಕ್ರಮ

Source: janata vidyalaya | By Arshad Koppa | Published on 24th June 2017, 8:39 AM | Coastal News | Guest Editorial |

ಮುರ್ಡೇಶ್ವರ, ಜೂ ೨೨: ಜನತಾ ವಿದ್ಯಾಲಯ, ಮುರ್ಡೇಶ್ವರದಲ್ಲಿ, “ಸದ್ಗುರು ಅನಿರುದ್ಧ ಬಾಪು ಉಪಾಸನಾ ಟ್ರಸ್ಟ್, ಮುಂಬೈ ಯ ಆಶೃಯದಲ್ಲಿ, ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ, ನೋಟ್- ಬುಕ್ ವಿತರಣಾ ಕಾರ್ಯಕ್ರಮ ಜರುಗಿತು. ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್ ರವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ  ಶ್ರೀ ವೆಂಕಟೇಶ ಪಟಗಾರ ಹಾಗೂ ಅಥಿತಿಗಳಾಗಿ ಶಿಕ್ಷಣಾಭಿಮಾನಿಗಳಾದ ಶ್ರೀ ಎಂ. ಪಿ. ಭಂಡಾರಿ  ಹಾಗೂ ಶ್ರೀ ಜನಾರ್ಧನ ಮೊಗೇರ ಆಗಮಿಸಿದ್ದರು. ಶಾಲಾವಿದ್ಯಾರ್ಥಿಗಳಿಂದ ಪ್ರಾರ್ಥನೆಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ, ಶಾಲೆಯ ಸಹಶಿಕ್ಷಕರಾದ ಶ್ರೀ ಮಹೇಶ ಹಣಬರಟ್ಟಿ ಯವರು ಸಭಾ ಗಣ್ಯರನ್ನು ಸ್ವಾಗತಿಸಿದರು. ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಕೇಶವ ಬಲ್ಸೆ ರವರು, “ಸದ್ಗುರು ಅನಿರುದ್ಧ ಬಾಪು ಉಪಾಸನಾ ಟ್ರಸ್ಟ್, ಮುಂಬೈ” ರವರ ಕಾರ್ಯಕಲಾಪಗಳನ್ನು ಹಾಗೂ ಶಿಕ್ಷಣಕ್ಕೆ ನೀಡುವ ಪ್ರೋತ್ಸಾಹವನ್ನು ವಿವರಿಸಿ, ನಮ್ಮ ಸಮಿತಿಯ ಅಧ್ಯಕ್ಷರ ವಿನಂತಿಯ ಮೇರೆಗೆ ಟ್ರಸ್ಟನ್ನು ಸಂಪರ್ಕಿಸಿ, ನಮ್ಮ ಶಾಲಾವಿದ್ಯಾರ್ಥಿಗಳಿಗಾಗಿ ನೋಟ್- ಬುಕ್‍ಗಳನ್ನು ಒದಗಿಸುವಂತೆ ಕೇಳಿಕೊಂಡಾಗ, ಒಪ್ಪಿ ನಮಗೆ ಸಹಕರಿಸಿರುವುದು ತುಂಬಾ ಸಂತೋಷದ ಸಂಗತಿಯೆಂದು ತಿಳಿಯಪಡಿಸಿ, ಟ್ರಸ್ಟಿಗೆ ಅಭಿನಂದನೆ ಸಲ್ಲಿಸಿದರು. ಹಾಗೂ ಪಾಲಕರೆಲ್ಲರಿಗೂ ಶಾಲೆಯ ಜೊತೆ ಉತ್ತಮ ಬಾಂಧವ್ಯವನ್ನಿಟ್ಟುಕೊಂಡು, ಮಕ್ಕಳ ಉತ್ತಮ ಶೈಕ್ಷಣಿಕ ಪ್ರಗತಿಗಾಗಿ ಶ್ರಮಿಸಿರಿ ಎಂದು ಕರೆ ನೀಡಿದರು. 

ಸಾಂಕೇತಿಕವಾಗಿ, 8 ನೇ ಕ್ಲಾಸಿನ 9 ವಿದ್ಯಾರ್ಥಿಗಳಿಗೆ, ಅವರ ಪಾಲಕರ ಉಪಸ್ಥಿತಿಯಲ್ಲಿ 12 ನೋಟ್‍ಬುಕ್ ಹಾಗೂ “ಸುವರ್ಣ ಮಹೋತ್ಸವ ಆಚರಣಾ ಸಮಿತಿಯ ವತಿಯಿಂದ ನೀಡಲ್ಪಟ್ಟ 1 ಕಂಪಾಸ್‍ಪೆಟ್ಟಿಗೆ, ಪೆನ್ ಮತ್ತು ಪೆನ್ಸಿಲ್‍ಗಳನ್ನು ವಿತರಿಸಲಾಯಿತು. 

ಪ್ರತೀ ವಿದ್ಯಾರ್ಥಿಗಳಿಗೆ 12 ನೋಟ್- ಬುಕ್ ಗಳಂತೆ, ಪಾಲಕರ ಸಮ್ಮುಖದಲ್ಲಿ, ಎಲ್ಲಾ ವಿದ್ಯಾರ್ಥಿಗಳಿಗೆ ವಿತರಿಸುವ ವ್ಯವಸ್ಥೆಯನ್ನು ಕಾರ್ಯಕ್ರಮದ ನಂತರ ಮಾಡಲಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಶಾಲಾಭಿವೃದ್ಧಿ ಸಮಿತಿಯ ಮಾಜಿ ಅಧ್ಯಕ್ಷರಾದ ಶ್ರೀ ವಾಸುದೇವ ಕಾಮತ್ ರವರು, ಈಗಿನ ಶಾಲಾಭಿವೃದ್ಧಿ ಸಮಿತಿಯ ಈ ಕಾಯಕ್ರಮವನ್ನು ಶ್ಲಾಘಿಸಿ, ಅಭಿನಂದಿಸಿದರು. ಶಿಕ್ಷಣಾಭಿಮಾನಿಗಳಾದ ಶ್ರೀ ಎಂ. ಪಿ. ಭಂಡಾರಿಯವರು, ಶಾಲಾ ಸುವರ್ಣ ಮಹೋತ್ಸವ ಕಾರ್ಯದಲ್ಲಿ ಸಮಿತಿಯ ಎಲ್ಲಾ ಸದಸ್ಯರು ಉತ್ಸುಕತೆಯಿಂದ ದುಡಿಯುತ್ತಿರುವುದನ್ನು ಮನಸಾರೆ ಶ್ಲಾಘಿಸಿ, ಅಭಿನಂದಿಸಿದರು. ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಸುಬ್ರಾಯ ನಾಯ್ಕ, ಶ್ರೀ ಗಜಾನನ ಶೆಟ್ಟಿಯವರು ವಿದ್ಯಾರ್ಥಿಗಳ ಶಿಕ್ಷಣ ದಲ್ಲಿ ಪಾಲಕರ ಪಾತ್ರವನ್ನು ವಿವರಿಸಿ, ಶಾಲೆಯಲ್ಲಿ ಕರೆಯುವ ಸಭೆಗೆ ಪಾಲಕರೆಲ್ಲರೂ ಹಾಜರಿದ್ದು, ಸಹಕರಿಸುವಂತೆ ಕೋರಿದರು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಎಸ್. ಡಿ. ಉಳ್ಳಿಕಾಶಿಯವರು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯನ್ನು ಪರಿಶೀಲಿಸಲು ಶಾಲೆಗೆ ಬಂದು, ವಿಷಯವಾರು ಶಿಕ್ಷಕರನ್ನು ಭೇಟಿ ಮಾಡಿ, ತಮ್ಮ ಮಕ್ಕಳ ಪ್ರಗತಿಯ ಕುರಿತಾಗಿ ಪರಿಶೀಲನೆ ನಡೆಸುವಂತೆ ಪಾಲಕರನ್ನು ವಿನಂತಿಸಿದರು. ಈ ಕಾರ್ಯಕ್ರಮದ ಕೊನೆಯಲ್ಲಿ ಅಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್ ರವರು “ಶಾಲಾ ಸುವರ್ಣ ಮಹೋತ್ಸವ” ವನ್ನು ಆಚರಿಸಿಕೊಳ್ಳುತ್ತಿರುವ ಈ ಶಾಲೆಯು ಸರ್ವತೋಮುಖ ಅಭಿವೃದ್ಧಿ ಹೊಂದುತ್ತಿರುವುದರ ಕುರಿತು, ವಿವರಿಸಿ, ಇದೇ  ನವೆಂಬರ್ ತಿಂಗಳಲ್ಲಿ  2 ದಿನಗಳ ಕಾಲಾವಧಿಯಲ್ಲಿ ಆಚರಿಸಲಿರುವ “ಸುವರ್ಣ ಮಹೋತ್ಸವ” ಕ್ಕೆ ಬಂದು ಸಹಕರಿಸಿ, ಸಂತೋಷದಲ್ಲಿ ಪಾಲ್ಗೊಳ್ಳಬೇಕಾಗಿ ನೆರೆದ ಶಿಕ್ಷಣಾಭಿಮಾನಿಗಳನ್ನು ಹಾಗೂ ಪಾಲಕರನ್ನು ವಿನಂತಿಸಿದರು. 

ಶಿಕ್ಷಕರಾದ ಶ್ರೀ ಮಹೇಶ ಹಣಬರಟ್ಟಿರವರು ಕಾರ್ಯಕ್ರಮವನ್ನು ನಿರೂಪಿಸಿದರು. ದೈಹಿಕ ಶಿಕ್ಷಕರಾದ ಶ್ರೀ ಪ್ರಹ್ಲಾದ  ರವರು ವಂದಿಸಿದರು. 

Read These Next

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...