ಮುರ್ಡೇಶ್ವರ: “ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆ" ಜುಲೈ 28ರೊಳಗೆ ನೋಂದಣಿ ಮಾಡಿಕೊಳ್ಳಲು ಕರೆ

Source: mariswami | By Arshad Koppa | Published on 24th July 2017, 8:38 AM | Coastal News | Guest Editorial |

ಪ್ರಾಥಮಿಕ, ಪ್ರೌಢ ಡಿಪ್ಲೋಮ, ಪದವಿ ಪೂರ್ವ ವಿದ್ಯಾರ್ಥಿಗಳಿಗೆ  ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆಗೆ ಜುಲೈ 28 ರವೊಳಗೆ ನೊಂದಣಿಗೆ ಅವಕಾಶ
          ಜೀವನದ ಮೌಲ್ಯಗಳು ಕುಸಿಯುತ್ತಿರುವ ಇಂದಿನ ಆಧುನಿಕ ಜಗತ್ತಿನಲ್ಲಿ ಮಾನವೀಯ ಮೌಲ್ಯಗಳನ್ನು ವಿದ್ಯಾರ್ಥಿಗಳಲ್ಲಿ, ಯುವಜನರಲ್ಲಿ ಹಾಗೂ ಸಾರ್ವಜನಿಕರಲ್ಲಿ ಬಿತ್ತುವ ಉದ್ದೇಶದಿಂದ ಗಾಂಧೀ ರಿಸರ್ಚ್ ಫೌಂಡೇಶನ್ ಜಲಗಾಂವ್,ಕರ್ನಾಟಕ ಗಾಂಧೀ ಸ್ಮಾರಕ ನಿಧಿ ಬೆಂಗಳೂರು, ರಾಷ್ಟ್ರೀಯ ಸೇವಾ ಯೋಜನೆ ಬೆಂಗಳೂರು, ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ  “ಗಾಂಧೀ ವಿಚಾರ ಸಂಸ್ಕಾರ ಪರೀಕ್ಷೆ”ಯನ್ನು ರಾಜ್ಯಾದಾದ್ಯಂತ ನಡೆಸಲಾಗುತ್ತದೆ.
         ಹಿರಿಯ ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ, ಡಿಪ್ಲೊಮಾ, ಐ.ಟಿ. ಐ ವಿದ್ಯಾರ್ಥಿಗಳಿಗಾಗಿ ಒಂದು ಹಂತದಲ್ಲಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ಮತ್ತೊಂದು ಹಂತದಲ್ಲಿ ಈ ಪರೀಕ್ಷೆಯನ್ನು ನಡೆಸಲಾಗುವುದು.

      ಈ ಪರೀಕ್ಷೆಯು ಮೊದಲಿಗೆ ತಾಲೂಕಾ ಹಂತದಲ್ಲಿ ನಡೆಯುತ್ತದೆ. ಹಿರಿಯ ಪ್ರಾಥಮಿಕ 5 ನೇ ತರಗತಿಯಿಂದ 7 ನೇ ತರಗತಿಯವರಿಗೆ “ನಮ್ಮ ಗಾಂಧಿ ತಾತ ” ಪುಸ್ತಕವನ್ನು ರೂ.20/- ನೊಂದಣ  ಫಿನೊಂದಿಗೆ ನೀಡಲಾಗುವುದು. 8 ನೇ ತರಗತಿಯಿಂದ 12 ನೇ ತರಗತಿಯವರಿಗೆ “ನನ್ನ ಜೀವನ ಕತೆ” ಪುಸ್ತಕವನ್ನು ರೂ.40/- ನೊಂದಣ  ಫಿನೊಂದಿಗೆ ನೀಡಲಾಗುವುದು.


       ಈ ಪರೀಕ್ಷೆಗಾಗಿ ನೊಂದಾಯಿಸಿಕೊಳ್ಳಲು ಜಿಲ್ಲೆಯ ಎಲ್ಲಾ ಶಾಲೆ, ಕಾಲೇಜುಗಳಿಂದ ಮುಖ್ಯೋಪಾದ್ಯಾಯರು, ಪ್ರಾಚಾರ್ಯರ ಮೂಲಕ ಆಸಕ್ತಿ ಇರುವ ವಿದ್ಯಾರ್ಥಿಗಳು ನೊಂದಣ  ಫಿಯನ್ನು ದಿನಾಂಕ :-28/07/2017  ರವೊಳಗೆ ಸಲ್ಲಿಸಬೇಕು, ನಂತರ ಪರೀಕ್ಷೆಗೆ ಸಂಬಂಧಿಸಿದ ವಿದ್ಯಾರ್ಥಿಗಳಿಗೆ ಅವರ ಮಟ್ಟಕ್ಕೆ ಹೊಂದುವ ಗಾಂಧೀಜಿಯವರನ್ನು ಕುರಿತ ಪುಸ್ತಕ ಒದಗಿಸಲಾಗುವುದು. ಪುಸ್ತಕದ ಬೆಲೆಯನ್ನು ಮಾತ್ರ ನೊಂದಣ  ಶುಲ್ಕವಾಗಿ ಸಂಗ್ರಹಿಸಲಾಗುತ್ತದೆ. ನೂರು ವಿದ್ಯಾರ್ಥಿಗಳಿರುವ ಹತ್ತಿರದ ಶಾಲೆಯಲ್ಲಿ  ಒಂದು ಪರೀಕ್ಷೆ ಕೇಂದ್ರ ತೆರೆಯಲಾಗುವುದು. 16 ಶನಿವಾರ ಸಪ್ಟೆಂಬರ್ 2017 ರಂದು ಪರೀಕ್ಷೆಯನ್ನು ನಡೆಸಲಾಗುವುದು, ವಿದ್ಯಾರ್ಥಿಗಳು ಆ ಪುಸ್ತಕವನ್ನು ಓದಿ ನಿಗದಿಪಡಿಸಿದ  ದಿನಾಂಕದಂದು ಪರೀಕ್ಷೆಗೆ ಹಾಜರಾಗಬೇಕೆಂದು ತಿಳಿಸಲಾಗಿದೆ. ಪರೀಕ್ಷೆ ಅವಧಿ 1 ಗಂಟೆ ಇದ್ದು ಪ್ರಾಥಮಿಕ ವಿಭಾಗಕ್ಕೆ 50 ಅಂಕಗಳು, ಫ್ರೌಢ ಶಾಲೆ ಮತ್ತು ಪದವಿ ಪೂರ್ವ ವಿಭಾಗಕ್ಕೆ 60 ಅಂಕಗಳು ಇದರಲ್ಲಿ ಅಬ್ಜೆಕ್ಟೀವ್ 40,50 ಅಂಕಗಳು ಮತ್ತು 10 ಅಂಕ ವಿವರಿಸಿ ಬರೆಯುವುದು ಇರುತ್ತದೆ.
          ಪರೀಕ್ಷೆಯಲ್ಲಿ ಪಾಸಾದವರಿಗೆ ಪ್ರಮಾಣ ಪತ್ರ ಜೊತೆಗೆ ಕೇಂದ್ರಕ್ಕೆ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರಥಮ , ದ್ವಿತೀಯ , ತೃತೀಯ  ಬಹುಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ಹಾಗೂ ಪರೀಕ್ಷೆಗೆ ಕುಳಿತ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ನೀಡಲಾಗುವುದು. ಪರೀಕ್ಷೆಯು ಕನ್ನಡ, ಇಂಗ್ಲೀಷ ,ಉರ್ದು ಹಾಗೂ ಹಿಂದಿ ಭಾಷೆಗಳಲ್ಲಿ ಬರೆಯಬಹುದು.
          ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಅಹ್ವಾನಿಸಿ ಗೌರವಿಸಲಾಗುವುದು. ಪರೀಕ್ಷಗೆ ಸಬಂಧಿಸಿದಂತೆ ಆನ್‍ಲೈನ್ ನಲ್ಲಿ ನೊಂದಣ   ಮಾಹಿತಿಗಾಗಿ ವೆಬ್‍ಸೈಟ್ www.gandhifoundation.net  ನೋಡಿರಿ. 
        ಹೆಚ್ಚಿನ ಮಾಹಿತಿಗಾಗಿ ತಾಲೂಕಾ ಹಾಗೂ ಜಿಲ್ಲಾ ಸಂಚಾಲಕರಾದ ಕೆ.ಮರಿಸ್ವಾಮಿ (9448235284) ಇವರನ್ನು ಸಂಪರ್ಕಿಸಲು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
 

Read These Next

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...

ಪ್ರಜಾಸತ್ತೆಯ ಬಂಧನ!

ಭಾರತದಲ್ಲಿ ಮತ್ತೆ ಬ್ರಿಟಿಷ್ ಕ್ರೌರ್ಯದ ಕಾಲಕ್ಕೆ ಮರಳಿದೆ. ಮನುವಾದಿ ಶಕ್ತಿಗಳು ಆ ಕಾಲವನ್ನು ನಿಯಂತ್ರಿಸುತ್ತಿದೆ. ಏಕಲವ್ಯನ ಬೆರಳು ...

ಚಿಂದಿ ಆಯುವ ಹಕ್ಕು

ಗಂಭೀರವಾಗಿ ಚರ್ಚಿಸುವುದಾದಲ್ಲಿ ಒಂದು ಸಾಮಾಜಿಕವಾಗಿ ತಿರಸ್ಕಾರಕ್ಕೊಳಪಟ್ಟ ವೃತ್ತಿಯಾದ ಚಿಂದಿ ಆಯುವುದು ನೈತಿಕವಾಗಿ ...

ನಿಜಕ್ಕೂ ಸಾದಿಯಾ ಯಾರು?

ಗಣರಾಜೋತ್ಸವದಂದು ಕಾಶ್ಮೀರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ನಡೆಸಿರುವಳೆಂದು ಶಂಕಿಸಿ ಬಂಧಿಸಲಾಗಿದ್ದ ಯುವತಿಯನ್ನು ಪೊಲೀಸರು ಫೆ. ...