ಮುರ್ಡೇಶ್ವರ:ಪಾಲಕರ ಸ್ನೇಹಕೂಟ ಹಾಗೂ ಉದಯೋನ್ಮುಖ ಮಕ್ಕಳ ಪ್ರತಿಭಾ ಸಂಭ್ರಮ  

Source: so english | By Arshad Koppa | Published on 27th May 2017, 10:22 AM | Coastal News | Special Report |

ಮುರ್ಡೇಶ್ವರ ಗ್ರಾಮೀಣ ಶಿಕ್ಷಣ ಪ್ರತಿಷ್ಠಾನ (ರಿ.), ಮುರ್ಡೇಶ್ವರದ ವಿದ್ಯಾರ್ಥಿಗಳ ಪಾಲಕರ ಸ್ನೇಹಕೂಟ, ಉದಯೋನ್ಮುಖ ಮಕ್ಕಳ ಪ್ರತಿಭಾ ಸಂಭ್ರಮ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ, ಬೇಸಿಗೆ ಶಿಬಿರ 2017 ರ ಸಮಾರೋಪ ಸಮಾರಂಭವು, ಶಿಕ್ಷಣಪ್ರೇಮಿಗಳ ಆಶೀರ್ವಾದದಲಿ,್ಲ ಪ್ರತಿಷ್ಠಾನದ ಆವರಣದಲ್ಲಿ, ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಶ್ರೀ ದಯಾನಂದ ಕರ್ಕೀಕರ್ ರವರು, ಅಥಿತಿಗಳಾಗಿ, ಜಿಲ್ಲಾ ಪಂಚಾಯತದ ಸದಸ್ಯರಾದ ಶ್ರೀಮತಿ ಸಿಂಧು ಭಾಸ್ಕರ ನಾಯ್ಕ, ಮಾವಳ್ಳಿ -2 ಗ್ರಾಮಪಂಚಾಯತದ ಅಧ್ಯಕ್ಷರಾದ ಶ್ರೀಮತಿ ನಾಗರತ್ನ ಪಡಿಯಾರ್, ರಂಜನ್ ಇಂಧನ್ ಗ್ಯಾಸ್ ಭಟ್ಕಳದ ಶ್ರೀಮತಿ ಶಿವಾನಿ, ಶಿಕ್ಷಣ ನಿರ್ದೇಶಕರಾದ ಶ್ರೀ ಎಂ. ವಿ. ಹೆಗಡೆ, ಹೊನ್ನಾವರದ ಉದ್ಯಮಿಗಳಾದ ಶ್ರೀ ಜೀವೋತ್ತಮ ನಾಯಕ, ಸಿಂಡ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ, ಕುಮಟಾದ ನಿರ್ದೇಶಕರಾದ ಶ್ರೀ ನಾರಾಯಣ ನಾಯ್ಕ ರವರು ಆಗಮಿಸಿದ್ದರು. 
 
ಬೇಸಿಗೆ- ಶಿಬಿರದಲ್ಲಿ ಶಿಬಿರರ್ಥಿಗಳಿಂದ ತಯಾರಿಸಲ್ಪಟ್ಟ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ “ಉಚಿತ ಹೊಲಿಗೆ ತರಬೇತಿ” ಯ 6 ನೇ ಬ್ಯಾಚಿನ ಉದ್ಘಾಟನೆಯ ನಂತರ ಶ್ರೀ ಗಣಪತಿ ಕಾಯ್ಕಿಣ ಯವರ ‘ಯಕ್ಷ ಪ್ರಾರ್ಥನೆ’ ಯೊಂದಿಗೆ ಆರಂಭವಾದ ಈ ಕಾರ್ಯಕ್ರಮದಲ್ಲಿ, ಸಂಸ್ಥೆಯ ಸಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್‍ರವರು ತಮ್ಮ ಪ್ರಾಸ್ಥಾವಿಕ ನುಡಿಗಳೊಂದಿಗೆ, ಕಾರ್ಯಕ್ರಮದ ಉದ್ಧೇಶಗಳನ್ನು ವಿವರಿಸಿ, ಎಲ್ಲರನ್ನು ಕಾರ್ಯಕ್ರಮಕ್ಕೆ ಸ್ವಾಗತಿಸಿದರು. ನಂತರ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಸಾಧಕರಿಗೆ ಸನ್ಮಾನ. 12 ಪ್ರೌಢಶಾಲೆಗಳಲ್ಲಿ, ಎಸ್. ಎಸ್. ಎಲ್. ಸಿ. ಪರೀಕ್ಷೆಯಲ್ಲಿ  ಪ್ರತೀ ಶಾಲೆಯಲ್ಲಿ, ಪ್ರಥಮ ಮೂರು ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಗೌರವ ಮತ್ತು ಪುರಸ್ಕಾರ. ಸಂಸ್ಥೆಯ ಕಾರ್ಯವ್ಯಾಪ್ತಿಯಲ್ಲಿನ ಆಯ್ದ ಸ್ತ್ರೀ-ಶಕ್ತಿ ಗುಂಪುಗಳಿಗೆ ಪುರಸ್ಕಾರ, ಅಂಗನವಾಡಿ ಪುಟಾಣ ಗಳಿಗಾಗಿ ‘ಉದಯೋನ್ಮುಖ ಮಕ್ಕಳ ಪ್ರತಿಭಾ ಸಂಭ್ರಮ’, ಪ್ರಾಥಮಿಕ ಶಾಲೆಗೆ ವರ್ಗಾವಣೆ ಹೊಂದುವ ಅಂಗನವಾಡಿ ಪುಟಾಣ ಗಳಿಗೆ ಬೀಳ್ಕೊಡುವ ಸಮಾರಂಭ, ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಬೆಂಗಳೂರು ರವರು ನಡೆಸುವ ಕಂಪ್ಯೂಟರ್ ಪರೀಕ್ಷೆಗಳಲ್ಲಿ ಉತ್ತೀರ್ಣ ರಾದವರಿಗೆ ಪ್ರಮಾಣ ಪತ್ರ ವಿತರಣೆ, ಈ ಎಲ್ಲಾ ಕಾರ್ಯಕ್ರಮಗಳು ಜರುಗಿದವು. 
 
ಈ ಕಾರ್ಯಕ್ರಮದ ಅಂಗವಾಗಿ, ಸಭಾಗಣ್ಯರೆಲ್ಲರು, ಮೆಚ್ಚುಗೆ ವ್ಯಕ್ತಪಡಿಸಿ, ಸಂಸ್ಥೆಗೆ ಶುಭ ಹಾರೈಸಿದರು. ನಂತರ ಸಂಸ್ಥೆಯ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಮನೋರಂಜನಾ ಕಾರ್ಯಕ್ರಮಗಳು ನಡೆಯುತ್ತಿರುವಾಗಲೇ, ಪ್ರತೀ 2 ಮನೋರಂಜನಾ ಕಾರ್ಯಕ್ರಮದ ನಂತರ ಕಾರ್ಯಕ್ರಮಕ್ಕೆ ಆಗಮಿಸಿರುವ ಪಾಲಕ ಮತ್ತು ಪ್ರೇಕ್ಷಕ ವೃಂದದವರಿಗೆ ಲಾಟರಿ ಎತ್ತುವುದರ ಮೂಲಕ 20 ಪ್ರೋತ್ಸಾಹಕರ ಬಹುಮಾನಗಳನ್ನು  ನೀಡಲಾಯಿತು. 
 
ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಶ್ರೀ ಎಸ್. ಎಸ್. ಕಾಮತ್ ರವರು, ಯೋಜನಾ ನಿರ್ದೇಶಕರಾದ ಶ್ರೀಮತಿ ಆಶಾ ಕಾಮತ್ ರವರು ಹಾಗೂ ವ್ಯವಸ್ಥಾ ನಿರ್ದೇಶಕಿ ಶ್ರೀಮತಿ ಚಂದ್ರಕಲಾ ಕಾಮತ್ ರವರು ಮತ್ತು ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದು, ಸಹಕರಿಸಿದರು. 
 
ಈ ಕಾರ್ಯಕ್ರಮವನ್ನು ಸಂಸ್ಥೆಯ ಪ್ರಾಚಾರ್ಯೆ ಲತಾ ನಾಯ್ಕ ನಿರೂಪಿಸಿದರು. ಸಂಸ್ಥೆಯ ಸಿಬ್ಬಂದಿ ಗುಲಾಬಿ ದೇವಡಿಗ ಆಭಾರ ಮನ್ನಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...