ಮುರುಡೇಶ್ವರ ಹಲ್ಲೆ ಪ್ರಕರಣ ಸುಳ್ಳಿನ ಕಂತೆ: ಗ್ರಾಮಸ್ಥರಿಂದ ಪ್ರತ್ಯಾರೋಪ

Source: S O News Service | By I.G. Bhatkali | Published on 19th March 2019, 2:48 PM | Coastal News | Don't Miss |

ಭಟ್ಕಳ: ತಾಲೂಕಿನ ಮುರುಡೇಶ್ವರ ಹೀರೇದೋಮಿಯಲ್ಲಿ ಸೈನಿಕರೀರ್ವರ ತಂದೆ ತಾಯಿಗಳ ಮೇಲೆ ಹಲ್ಲೆ ನಡೆಸಲಾಗಿದೆ ಎನ್ನುವ ಆರೋಪ ಸುಳ್ಳಿನ ಕಂತೆಯಾಗಿದೆ ಎಂದು ಆ ಭಾಗದ ಗ್ರಾಮಸ್ಥರು ಪ್ರತ್ಯಾರೋಪ ಮಾಡಿದ್ದಾರೆ.

ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿರುವ ಮಂಜುನಾಥ ನಾಯ್ಕ ಅಥವಾ ಅವರ ಪತ್ನಿಯವರ ಮೇಲೆ ಯಾರೂ ಹಲ್ಲೆ ಮಾಡಿಲ್ಲ. ದೂರುದಾರರು ಹೆಸರಿಸಿರುವ ಆರೋಪಿಗಳಿಗೆ ಸೇರಿದ ಜಾಗದಲ್ಲಿ ತಮಗೆ ಮನೆಗೆ ಹೋಗಲು ರಸ್ತೆ ನಿರ್ಮಾಣಕ್ಕೆ ಅವಕಾಶ ನೀಡಲಿ ಎಂಬ ಕಾರಣಕ್ಕೆ ದೂರುದಾರರು ಇಂತಹ ಬೆದರಿಕೆಯ ತಂತ್ರವನ್ನು ಹೆಣೆದಿದ್ದಾರೆ. ಅವರು ರಸ್ತೆಯ ಬೇಡಿಕೆಯನ್ನು ಜನರ ಮುಂದೆ ಇಟ್ಟಿದ್ದರೆ ಮಾತುಕತೆಯ ಮೂಲಕ ಪರಿಹಾರ ಕಂಡುಕೊಳ್ಳಬಹುದಾಗಿತ್ತು. ಆದರೆ ಇಂತಹ ಮಾರ್ಗ ಅನುಸರಿಸಿರುವುದು ಸರಿಯಲ್ಲ.

ಈ ಹಿಂದೆಯೂ ಸದರಿ ವ್ಯಕ್ತಿಗಳು ಇದೇ ರೀತಿ ಸುಳ್ಳು ಆರೋಪ ಮಾಡಿ ದೂರು ದಾಖಲಿಸಿದ್ದು, ಕೊನೆಗೂ ಜಿಲ್ಲಾ ನ್ಯಾಯಾಲಯದಲ್ಲಿ ನಿರಪರಾಧಿಗಳಿಗೆ ನ್ಯಾಯ ಸಿಕ್ಕಿದೆ. ಪೊಲೀಸ್ ಹಿರಿಯ ಅಧಿಕಾರಿಗಳು ಈ ಬಗ್ಗೆ ಸಮಗ್ರ ವಿಚಾರಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಇವರು ಇಂತಹ ಸಂದರ್ಭದಲ್ಲಿ ಯೋಧರ ತಂದೆ ತಾಯಿಗಳು ಎಂದು ಹೇಳಿಕೊಳ್ಳುತ್ತಾರೆ. ನಮಗೆ ಯೋಧರ ಬಗ್ಗೆ ಗೌರವ ಇದೆ. ಯೋಧರಾಗಿ ದುಡಿಯುತ್ತಿರುವ ಅವರ ಮಕ್ಕಳನ್ನು ನಾವು ಊರವರ ಪರವಾಗಿ ಸನ್ಮಾನಿಸಿ ಗೌರವಿಸಿದ್ದೇವೆ.

ಯೋಧರ ವಿಷಯವನ್ನು ಇಲ್ಲಿ ಪ್ರಸ್ತಾಪಿಸುವ ಅಗತ್ಯ ಇಲ್ಲ ಎಂದು ಅಸಮಾಧಾನವನ್ನು ಹೊರ ಹಾಕಿರುವ ಗ್ರಾಮಸ್ಥರು ಈ ಸಂಬಂಧ ಪೊಲೀಸ್ ಹಿರಿಯ ಅಧಿಕಾರಿಗಳ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸತೀಶ ಮೊಗೇರ, ವೆಂಕಟ್ರಮಣ, ಪ್ರಕಾಶ ನಾಯ್ಕ, ಮಹೇಶ ನಾಯ್ಕ, ವಿಷ್ಣು ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...