ಸ್ವಚ್ಛತಾ ಕಾರ್ಯದೊಂದಿಗೆ ಮಕ್ಕಳ ಜೊತೆ ಗಾಂಧೀ ಜಯಂತಿ ಆಚರಿಸಿದ ಮುರ್ಡೇಶ್ವರ ಲಯನ್ಸ್ ಕ್ಲಬ್

Source: sonews | By Staff Correspondent | Published on 3rd October 2018, 5:39 PM | Coastal News |

ಭಟ್ಕಳ: ಲಯನ್ಸ್ ಕ್ಲಬ್ ಮುರ್ಡೇಶ್ವರದಿಂದ ಗಾಂಧೀ ಜಯಂತಿ ಪ್ರಯುಕ್ತ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ನೀರಗದ್ದೆಯ ಆವರಣವನ್ನು ಸ್ವಚ್ಛಗೊಳಿಸುವ ಮೂಲಕ “ಗಾಂಧೀ ಸ್ಮರಣೆ” ಕಾರ್ಯಕ್ರಮವನ್ನು ಆಚರಿಸಿದರು. 

ಕ್ಲಬ್‍ನ ಎಲ್ಲಾ ಸದಸ್ಯರು ಸೇರಿ ಶಾಲೆಯ ಸುತ್ತಮುತ್ತಲಿನ ಆವರಣವನ್ನು ಸ್ವಚ್ಛಗೊಳಿಸಿದರು. ಮಕ್ಕಳಿಗೆ ಕಿರಿಯ ಹಾಗೂ ಹಿರಿಯ ವಿಭಾಗಗಳಲ್ಲಿ ಗಾಂಧೀಜಿ ಕುರಿತಾದ ಭಾಷಣ ಸ್ಪರ್ಧೆಯನ್ನು ನಡೆಸಲಾಯಿತು. ವಿಜೇತರಿಗೆ ಆಕರ್ಷಕ ಟ್ರೋಫಿಯನ್ನು ವಿತರಿಸಲಾಯಿತು. ಶಾಲೆಯ ಎಲ್ಲಾ ಮಕ್ಕಳಿಗೆ ನೋಟ್‍ಪುಸ್ತಕವನ್ನು, ವಾಟರ್ ಬಾಟಲ್, ಪೆನ್ನು, ಪೆನ್ಸಲ್‍ಗಳನ್ನು ವಿತರಿಸಲಾಯಿತು. ಶಾಲೆಗೆ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಗೋಡೆ ಗಡಿಯಾರವನ್ನು ನೀಡಲಾಯಿತು.

ಮಹಾತ್ಮಾ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪನಮನವನ್ನು ಸಲ್ಲಿಸುವುದರ ಮೂಲಕ ಗಾಂಧೀಜಿಯವರ ಜೀವನದ ಆದರ್ಶದ ಕುರಿತಾಗಿ ಲಯನ್ಸ್ ಕ್ಲಬ್ ಅಧ್ಯಕ್ಷರಾದ ನಾಗರಾಜ ಭಟ್‍ರವರು ಮಾತನಾಡಿ ಶಾಲೆಗೆ ಅವಶ್ಯವಿರುವ ಅಲ್ಮೇರಾ ನೀಡುವುದಾಗಿ ತಿಳಿಸಿದರು.

ಲಯನ್ ಕಾರ್ಯದರ್ಶಿ ನಾಗೇಶ ಮಡಿವಾಳ, ಖಜಾಂಚಿ ಜಗದೀಶ ಜೈನ್, ಸದಸ್ಯರಾದ ಗೌರೀಶ್ ನಾಯ್ಕ, ಡಾ.ಆಯ್.ಆರ್.ಭಟ್, ಡಾ.ವಾಧಿರಾಜ ಭಟ್, ಡಾ.ಸುನೀಲ್ ಜತನ್, ಡಾ.ಹರಿಪ್ರಸಾದ ಕಿಣಿ, ಬಾಬು ಮೊಗೇರ್, ಎ.ಎನ್.ಶೆಟ್ಟಿ, ಸುಬ್ರಾಯ ನಾಯ್ಕ, ಗಜಾನನ ಶೆಟ್ಟಿ, ಮಂಜನಾಥ ದೇವಡಿಗ, ವಿಶ್ವನಾಥ ಕಾಮತ, ಮೋಹನ್ ನಾಯ್ಕ, ಕೃಷ್ಣ ಹೆಗಡೆ, ಗೌರೀಶ ಟಿ.ನಾಯ್ಕ, ಜಯಪ್ರಕಾಶ ಕರ್ಕಿಕರ್, ಗಜಾನನ ಭಟ್, ಕಿರಣ ಕಾಯ್ಕಿಣಿ ಮೊದಲಾದವರು ಹಾಜರಿದ್ದು ಸಹಕರಿಸಿದರು. ಎಸ್.ಡಿ.ಎಮ್.ಸಿ ಅಧ್ಯಕ್ಷರು, ಸದಸ್ಯರುಗಳು, ಊರ ನಾಗರಿಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮುಖ್ಯ ಶಿಕ್ಷಕರಾದ ಜಯಮ್ಮರವರು ಸ್ವಾಗತಿಸಿದರೆ, ಶಿಕ್ಷಕರಾದ ಸಂಧ್ಯಾ ನಾಯ್ಕರವರು ಕಾರ್ಯಕ್ರಮ ನಿರ್ವಹಿಸಿದರು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...