ಪುರಸಭೆ ಅಧಿಕಾರಿಗಳುದಾಳಿ:ರಸ್ತೆ ಪಕ್ಕ ಶೇಖರಿಸಿಟ್ಟಿದ್ದ ಖಾಸಗಿ ಜಲ್ಲಿ ವಶಕ್ಕೆ

Source: s o news | By MV Bhatkal | Published on 7th July 2018, 11:16 AM | Coastal News |

ಭಟ್ಕಳ:ಇಲ್ಲಿನ ಬಂದರ್‍ರೋಡ್ 2ನೇ ಕ್ರಾಸ್‍ನಲ್ಲಿರುವ ಕಟ್ಟಡವೊಂದಕ್ಕೆ ಪುರಸಭೆ ಅಧಿಕಾರಿಗಳು ಹಠಾತ್ತನೆ ದಾಳಿ ನಡೆಸಿ ಜಲ್ಲಿ, ಲಿಂಟೆಲ್ ಸೇರಿದಂತೆ ಕಟ್ಟಡ ನಿರ್ಮಾಣದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಮಾಲಿಕರ ವಿರುದ್ದ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂದರ ರಸ್ತೆಯ ರಾಜು ಶೇಟ್ ಎನ್ನುವವರಿಗೆ ಸೇರಿದ ಅಪಾರ್ಟಮೆಂಟ್‍ವೊಂದಕ್ಕೆ ಶುಕ್ರವಾರ ಪರಸಭೆ ಅಧಿಕಾರಿಗಳು ದಾಳಿನಡೆಸಿದ್ದಾರೆ. ಈ ಹಿಂದೆ ಹಲವು ಬಾರಿ ನೊಟಿಸ್ ನೀಡಿ ಕಲುಷಿತ ನೀರು ತೆರಳಲು ಚೆಂಬರ್ ನಿರ್ಮಿಸಿಕೊಳ್ಳಿ, ಚರಂಡಿಯಲ್ಲಿ ನೀರು ಸರಾಗವಾಗಿ ಹರಿದು ಹೋಗಲು ತಡೆಒಡ್ಡಬೇಡಿ ಎಂದು ಸೂಚಿಸಿದ್ದರು. ಆದರೂ ಅಪಾರ್ಟಮೆಂಟ್ ಮಾಲಿಕರು ನಿರ್ಲಕ್ಷ ವಹಿಸಿದ್ದರು. ಮಳೆಗಾಲದ ನೀರು ಹರಿದು ಹೋಗಬೇಕಾದ ಚರಂಡಿಯಲ್ಲಿ ಕಟ್ಟಡ ನಿರ್ಮಾಣದ ಸಾಮಾಗ್ರಿ, ಮಣ್ಣು ತುಂಬಿಸಿ ನೀರು ಹರಿದು ಹೋಗದಂತ ಸ್ಥಿತಿ ನಿರ್ಮಾಣವಾಗಿತ್ತು. ಇದರಿಂದ ಅಕ್ಕಪಕ್ಕದ ಮನೆಗೆÉ ನೀರು ನುಗ್ಗಿ ಅವರು ಹಿಂಸೆ ಅನುಭವಿಸುವಂತಾಗಿತ್ತು.. ವಿಚಾರ ತಿಳಿದ ಪುರಸಭೆ ಇದನ್ನು ತೆರವುಗೊಳಿಸುವಂತೆ ತಿಳಿಸಿದರು ಕಟ್ಟಡದ ಮಾಲಿಕ ಯಾವುದೆ ಕ್ರಮ ಕೈಗೊಂಡಿಲ್ಲ. ಇದರಿಂದ ಪುರಸಭೆಯ ಮುಖ್ಯಾಧಿಕಾರಿ ವೆಂಕಟೇಶ ನಾವುಡ ಮಾರ್ಗದರ್ಶನದಲ್ಲಿ ಹಿರಿಯ ಆರೋಗ್ಯ ನೀರಿಕ್ಷಕಿ ಸೋಜಿಯಾ ಸುಮನ್, ಆರೋಗ್ಯ ನೀರಿಕ್ಷಕ ವೆಂಕಟೇಶ ಭಂಡಾರಕರ್, ಇಂಜೀನೀಯರ ಉಮೇಶ ಮಡಿವಾಳ ನೇತೃತ್ವದಲ್ಲಿ ದಾಳಿ ನಡೆಸಿದ್ದಾರೆ. ಸಾರ್ವಜನಿಕರಿಗೆ ಉಪದ್ರವ, ಸಾರ್ವಜನಿಕ ಸ್ವಾಸ್ಥ್ಯ ಹಾನಿ ಪ್ರಕರಣದ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಪರವಾನಿಗೆ ಇಲ್ಲದೆ ಕಟ್ಟಡ ನಿರ್ಮಾಣವಾಗುತ್ತಿದ್ದು ಇದರ ವಿರದ್ದವೂ ಸೂಕ್ತ ಕ್ರಮ ಕೈಗೊಳ್ಳಲಾಗುವದು ಎಂದು ಅಧಿಕಾರಿಗಳು ತಿಳಿಸಿದ್ದು ಅವರು ದಾಸ್ತಾನು ಇರಿಸಿಕೊಂಡಿದ್ದ ಜಲ್ಲಿ, ಲಿಂಟೆಲ್ ಸೇರಿದಂತೆ ಕಟ್ಟಡ ನಿರ್ಮಾಣದ ಸಾಮಾಗ್ರಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣದಾಖಲಿಸಿಕೊಂಡಿದ್ದಾರೆ.

 

Read These Next

ಕೇಂದ್ರದಲ್ಲಿ ನಮ್ಮದೇ ಸರ್ಕಾರ, ನಮ್ಮದೇ ಪ್ರಧಾನಿ ಡಾ. ಅಂಜಲಿ ನಿಂಬಾಳ್ಕರ್ ಮಂತ್ರಿಯಾಗ್ತಾರೆ- ಸಚಿವ ಮಾಂಕಾಳ್ ಭವಿಷ್ಯ

ಭಟ್ಕಳ: ನಾವು ಸುಳ್ಳು ಹೇಳುವುದಿಲ್ಲ. ಹೇಳಿದನ್ನು ಮಾಡಿ ತೋರಿಸಿದ್ದೇವೆ. ನುಡಿದಂತೆ ನಡೆದಿದ್ದೇವೆ. ರಾಜ್ಯದಲ್ಲಿ ಐದು ...