ಎಬಿವಿಪಿ ಯಿಂದ ಸ್ವಾಮಿ ವಿವೇಕಾನಂದ ಜಯಂತ್ಯೋತ್ಸವ 

Source: sonews | By Staff Correspondent | Published on 18th January 2018, 11:40 PM | Coastal News |

ಮುಂಡಗೋಡ :ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮುಂಡಗೋಡ ಘಟಕ ದಿಂದ ಗುರುವಾರ ‘ವೀರ ಸನ್ಯಾಸಿ ಸ್ವಾಮಿ ವಿವೇಕಾನಂದ’ ರ 155 ನೇ ಜನ್ಮದಿನೋತ್ಸವವನ್ನು ಪಟ್ಟಣದ ವಿವೇಕಾನಂದ ಬಯಲು ಮಂಟಪದಲ್ಲಿ ಆಚರಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಹುತಾತ್ಮ ವೀರಯೋಧ ಹನುಮಂತಪ್ಪ ಕೊಪ್ಪದ ರ ತಾಯಿ ಬಸಮ್ಮ ಕೊಪ್ಪದ ದೀಪ ಬೇಳಗಿಸಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜೇಶ ಗುರಾಣಿ ಮಾತನಾಡಿ ಭಾತೀಯರ ಕುರಿತು ಕಿಳುರಮೆ ಭಾವನೆ ಹೊಂದಿದ್ದ ಪಾಶ್ಚ್ಯಾಮಾತ್ಯ ದೇಶಗಳಲ್ಲಿ ಭಾರತದ ಶ್ರೇಷ್ಠತೆಯನ್ನು ಎತ್ತಿ ಹಿಡಿದವರು ಎಂದರು. ರಾಷ್ಟ್ರ ಪ್ರೇಮವನ್ನು ಬೆಳಸಿಕೊಳ್ಳವಂತ ಮಾರ್ಗವನ್ನು ತೋರಿಸಿದರು. ಅವರು ಅಮೇರಿಕದಿಂದ ಭಾರತಕ್ಕೆ ಬಂದ ತಕ್ಷಣ ಹಡಗಿನಿಂದ ಇಳಿದು ಭಾರತ ಭೂತಾಯಿತ ಮಣ್ಣನ್ನು ತಮ್ಮ ಮೇಲೆ ಹಾಕಿಕೊಂಡು ಸಂತೋಷಪಟ್ಟವರು.  ಅವರಲ್ಲಿ ರಾಷ್ಟ್ರಪ್ರೇಮ ತುಂಬಿತುಳುಕುತ್ತಿತ್ತು. ಅವರು ಮಾಡಿದ ಸಾಧನೆಯಿಂದ ಸ್ವಾತಂತ್ರ ಸಂಗ್ರಾಮ ಉಗಮವಾಗಲು ಸಾಧ್ಯವಾಯಿತು. ”ತ್ಯಾಗ ಮತ್ತು ಸೇವೆಗೆ” ಸಿದ್ದರಾದರೆ ನಾವು ನಮ್ಮ ದೇಶವನ್ನು ಉತ್ತುಂಗಕ್ಕೆ ತೆಗೆದುಕೊಂಡುಹೋಗಲು ಸಾಧ್ಯ ಎಂದು ಸ್ವಾಮಿವಿವೇಕಾನಂದರು ಹೇಳಿದ್ದಾರೆ ಎಂದರು
ಮುಖ್ಯವಕ್ತಾರ ಶಿವಾನಂದ ಬಡಿಗೇರ ಮಾತನಾಡಿ ನಾವು ಇಂಗ್ಲೀಷ ಸಂಸ್ಕøತಿಯನ್ನು ಅಳವಡಿಸಿಕೊಳ್ಳದೇ ಭಾರತೀಯ ಸಂಸ್ಕøತಿಯನ್ನು ಬೆಳಸಿಕೊಂಡು ಹೋಗಬೇಕು ಎಂದು ಯುವಕರಿಗೆ ಕರೆನೀಡಿದರು. ದುಶ್ಚಟಗಳ ದಾಸರಾಗಿ ನಮ್ಮ ಆರೋಗ್ಯವನ್ನು ಹಾಳುಮಾಡಿಕೊಳ್ಳದೆ ಸಮಾಜಪೂರಕವಾದ ಕಾರ್ಯಗಳನ್ನು ಮಾಡಬೇಕು ಎಂದರು
ಕಾರ್ಯಕ್ರಮದಲ್ಲಿ ಹಾಲಿ ಮತ್ತು ಮಾಜಿ ಸೈನಿಕರಿಗೆ ಹಾಗೂ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಸನ್ಮಾನಿಸಲಾಯಿತು
 ಪ್ರಾರ್ಥನೆಯನ್ನು ಪಟ್ಟಣದ ಅಂಧಮಕ್ಕಳ ಶಾಲೆಯ ವಿದ್ಯಾರ್ಥಿಗಳು ಹಾಡಿದರು. ಆಯ್.ಟಿ.ಆಯ್ ಉಪನ್ಯಾಸಕ ರವಿ ಭಜಂತ್ರಿ ಸ್ವಾಗತಿಸಿದರು ಕಾರ್ಯಕ್ರಮದ ನಿರೂಪಣೆಯನ್ನು ಎಲ್.ವಿ.ಕೆ ಪ್ರೌಡಶಾಲೆಯ ಶಿಕ್ಷಕ ವಿನಾಯಕ ಶೇಠ ನೇರವೇರಿಸಿದರು
ವೇದಿಕೆ ಮೇಲೆ ಶಿವಶರಣ ಸ್ವಾಮಿಗಳಾದ ಮುಂಡಗೋಡಿನ ಶ್ರೀರುದ್ರಮುನಿ ಸ್ವಾಮಿಗಳು, ಮಳಗಿ ಪದವಿಪೂರ್ವ ಕಾಲೇಜಿ ಉಪನ್ಯಾಸಕ ನರೇಂದ್ರ ನಾಯಕ, ಸಭೀಕರ ಸಾಲಿನಲ್ಲಿ ಬಿಜೆಪಿ ಧುರಿಣ ಎಲ್.ಟಿ.ಪಾಟೀಲ್, ಜೆಡಿಎಸ್ ರಾಜ್ಯ ರೈತಯುವಮೋರ್ಚಾ ಕಾರ್ಯದರ್ಶಿ ಸಂತೋಷ ರಾಯ್ಕರ  ಸೇರಿದಂತೆ ಮುಂತಾದ ಧುರಿಣರು ಉಪಸ್ಥಿತರಿದ್ದರು
ಹಿಂದು ಜಾಗರಣ ಜಿಲ್ಲಾ ಸಂಚಾಲಕ ಭರತ ಹದಳಗಿ, ಎಬಿವಿಪಿ ತಾಲೂಕಾ ಅಧ್ಯಕ್ಷ ಗೌರೀಶ ಕುಲಕರ್ಣಿ, ನಿಖಿಲ್ ರಾಣಗೇರ, ತನವೀರ್ ಶೇಖ, ವಿಜಯ ಮೋಸಳಗಿ ಕೈಲಾಸ ಗಜಕೋಶ ಮುಂತಾದವರು ಉಪಸ್ಥಿತರಿದ್ದರು
 

Read These Next