ಪಟ್ಟಣದಲ್ಲಿ ಬೀಡಾಡಿದನಗಳ ಹಾವಳಿ : ಕೈಕಟ್ಟಿ ಕುಳಿತ ಇಲಾಖಾ ಸಿಬ್ಬಂದಿ

Source: sonews | By Sub Editor | Published on 10th August 2017, 11:28 PM | Coastal News | State News | Don't Miss |

ಮುಂಡಗೋಡ : ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿ ದನಗಳು ರಸ್ತೆ ಮೇಲೆ ಎಲ್ಲಂದರಲ್ಲಿ ಬಿದ್ದು ಕೊಂಡಿರುವ್ಯದರಿಂದ ವಾಹನ ಸವಾರರಿಗೆ ತುಂಬಾ ತೊಂದರೆಯಾಗುತ್ತಿದ್ದು ವಾಹನ ಚಾಲಕರು ಪಟ್ಟಣ ಪಂಚಾಯತ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿರುವುದು ನಿತ್ಯದ ಕಾಯಕವಾಗಿದೆ.
ಯಲ್ಲಾಪುರ ರಸ್ತೆಯ ಬನ್ನಿಕಟ್ಟೆ, ಬಸು ಸುಪರ ಮಾರ್ಕೇಟ್, ಬಂಕಾಪುರ ರಸ್ತೆಯ ಡಾ|| ದೇಸಾಯಿ ದವಾಖಾನೆ ಹತ್ತಿರ, ಪೊಲೀಸ ಠಾಣೆಯ ಹತ್ತಿರ, ಶಿರಸಿ ರಸ್ತೆಯ ಬಸ್ ಸ್ಯಾಂಡ್ ಹತ್ತಿರ, ಆಯ್ ಬಿ ಹತ್ತಿರ, ಹುಬ್ಬಳ್ಳಿ ರಸ್ತೆಯ ಪಟ್ಟಣ ಪಂಚಾಯತ್ ಹತ್ತಿರ, ಬಸವನಬೀದಿ ಕ್ರಾಸ್ ಹತ್ತಿರ, ಸರಕಾರ ದವಾಖಾನೆ ಹತ್ತಿರ ಹೀಗೆ ಪಟ್ಟಣದ ವಿವಿಧ ರಸ್ತೆಗಳಲ್ಲಿ ರಾಜಾರೋಶವಾಗಿ ರಸ್ತೆ ಅಡ್ಡಾಡುವುದು ಮಲಗುವುದು ಎಲ್ಲಂದರಲ್ಲಿ ಸಗಣಿ ಹಾಕಿ ಪಟ್ಟಣವನ್ನು ಗಲೀಜು ಮಾಡುತ್ತಿರುತ್ತವೆ. ಒಂದೊಂದು ಸಾರಿ ತಮ್ಮೊಳಗೆ ಗುದ್ದಾಡಿಕೊಂಡು  ಸಾರ್ವಜನಿಕರಲ್ಲಿ ಭಯವುಂಟು ಮಾಡುತ್ತವೆ ಇಷ್ಟೆಲ್ಲಾ ಆಗಿದ್ದರೂ   ಪಟ್ಟಣ ಪಂಚಾಯತ್ ಮುಂಡಗೋಡ ದವರು ಕೈ ಕಟ್ಟಿ ಕುಳಿತ್ತಿದ್ದಾರೆ ಅವರಿಗೆ ಪಟ್ಟಣದ ಕುರಿತು ಎಷ್ಟು ಕಾಳಜಿ ಇದೆ ಎನ್ನುವುದು ತೋರಿಸಿಕೊಡುತ್ತಿದೆ
ಹೀಗೆ ಬೀಡಾಡಿ ದನಗಳು ರಸ್ತೆ ಮೇಲಿರುವುದರಿಂದ ರಾತ್ರಿ ಹೊತ್ತಿನಲ್ಲಿ ವಾಹನ ಚಾಲಕರು ಡಿಕ್ಕಿ ಹೊಡೆದು ಬಿದ್ದಿರುವ ಅನೇಕ ನಿದರ್ಶನಗಳಂಟು.  ರಾತ್ರಿ ಹೊತ್ತಿನಲ್ಲಿ ದ್ವೀ ಚಕ್ರಸವಾರರು ಸಗಣಿ ಮೇಲೆ ಬ್ರೇಕ್ ಹಾಕಿ ಜಾರಿ ಬಿದ್ದಿರುವುದು ಅನೇಕರು. 
ಪಟ್ಟಣದಲ್ಲಿರುವ ಎರಡು ಕೊಂಡವಾಡಗಳು ಪಟ್ಟಣದಿಂದ ಬಹುದೂರ ಇರುವುದರಿಂದ ದನಗಳನ್ನು ಕೊಂಡವಾಡದಲ್ಲಿ ಹಾಕಲು ಸಿಬ್ಬಂದಿಗಳು ನಿಸ್ತೇಜನ ಗೊಂಡಿದ್ದಾರೆ. ದನಗಳನ್ನು ಕೊಂಡವಾಡಕ್ಕೆ ಹಾಕಿದರೆ ನಂತರ ಅದಕ್ಕೆ ಮೇವು ನೀರು ಇಡಬೇಕಲ್ಲಾ ಯಾಕೆ ಬೇಕು ನಮಗೆ ಬೀಡಾಡಿದನ ಉಸಾಬರಿ ನಮಗ್ಯಾಕೆ ಎಂದು ತೆಪ್ಪಗಿದ್ದಾರೆ ಎಂದು ಊಹಿಸಬಹುದಾಗಿದೆ
ಜನರ ಸುರಕ್ಷತೆ ಹಾಗೂ ಪಟ್ಟಣದ ಸೌಂದರ್ಯವನ್ನು ಹಾಳುಮಾಡುವ ಬೀಡಾಡಿ ದನಗಳನ್ನು ನಿಯಂತ್ರಿಸಲು ಮುಂದಾಗಲಿ. ಬೀಡಾಡಿ ದನಗಳನ್ನು ಕೊಂಡವಾಡಕ್ಕೆ ಹಾಕಿ ಬೀಡಾಡಿ ದನಗಳ ಮಾಲಿಕರಿಗೆ ದಂಡ ಹಾಕಿದರೆ ಬೀಡಾಡಿ ದನಗಳ ಹಾವಳಿ ಕಡಿಮೆ ಯಾಗಬಹುದು ಎಂದು ಊಹಿಸಬಹುದಾಗಿದೆ

Read These Next

ಮುಂಡಗೋಡ: ವಿದ್ಯಾರ್ಥಿಗಳು ಸಮಾಜದಲ್ಲಿ ಆದರ್ಶ ವ್ಯಕ್ತಿಯಾಗಿ ಮಾರ್ಪಡುವುದು ಶಿಕ್ಷಕರ ನೀಡುವ ಪಾಠದಿಂದ : ಶಿವರಾಮ ಹೆಬ್ಬಾರ

ಅವರು ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕøತಿಕ  ಕ್ರೀಡಾ ವಿಭಾಗ ಹಾಗೂ ಎನ್.ಎಸ್.ಎಸ್ ಘಟಕ ಉದ್ಘಾಟಿಸಿ ಮಾತನಾಡಿದರು.

ಮುಂಡಗೋಡ:ಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯ ನೇರಾ ನೇರ ಹಣಾಹಣಿ, ಜೆಡಿಎಸ್ ಲೆಕ್ಕಕ್ಕಿಲ್ಲಾ : ಶಿವರಾಮ ಹೆಬ್ಬಾರ

ಸರಕಾರದ ಯೋಜನೆಯಾದ ಉಜ್ವಲ ಗ್ಯಾಸ ಯೋಜನೆಯ ಗ್ಯಾಸ ಫಲಾನುಭವಿಗಳಿಗೆ ವಿತರಣೆ ಮಾಡುವ ಸ್ಥಳಿಯ ಗ್ಯಾಸ ವಿತರಕ ವಾಹನಗಳಿಗೆ ತಮ್ಮ ಕುಟುಂಬದ( ...

ಮುಂಡಗೋಡ ಕ್ಯಾಸನಕೇರಿ-ತ್ಯಾಮನಕೊಪ್ಪ ರಸ್ತೆಯಲ್ಲಿ ಹೊಂಡಗಳು ಪರದಾಡುತ್ತಿರುವ ಗ್ರಾಮಸ್ಥರು

ಈಗ ರಸ್ತೆ ಹದಗೆಟ್ಟಿರುವುದರಿಂದ ತ್ಯಾಮನಕೊಪ್ಪ ಗ್ರಾಮಸ್ಥರು ತಗ್ಗಿನಕೊಪ್ಪ ಮಾರ್ಗವಾಗಿ ಕರವಳ್ಳಿ ಬಂದು ಅಲ್ಲಿಂದ ಕುಸೂರ ಕತ್ತರಿಯ ...

ಕೋಲಾರ: ವೇತನ ತಾರತಮ್ಯ ನಿವಾರಣೆಗೆ ಪ್ರೌಢಶಾಲಾ ವೃತ್ತಿ ಶಿಕ್ಷಕರ ಮನವಿ-ಮೂಲ ವೇತನ ವ್ಯತ್ಯಾಸ ಸರಿಪಡಿಸಲು ಆಗ್ರಹ

ಬೆಂಗಳೂರಿನಲ್ಲಿ ರಾಜ್ಯ ವೇತನ ಆಯೋಗಕ್ಕೆ ಪ್ರೌಢಶಾಲಾ ವೃತ್ತಿ ಶಿಕ್ಷಕರ ಸಂಘದ ಮಂಜೇಗೌಡ ಸೇರಿದಂತೆ ಪದಾಧಿಕಾರಿಗಳು ವೇತನ ತಾರತಮ್ಯ ...

ಕೋಲಾರ: ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘಕ್ಕೆ ನೂತನ ಅಧ್ಯಕ್ಷರಾಗಿ ಕೆ.ಜಿ.ಆಂಜಿನಪ್ಪ ಆಯ್ಕೆ

ಕರ್ನಾಟಕ ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಸರ್ವಸದಸ್ಯರ ಸಭೆ ಬೆಂಗಳೂರಿನ ಮಲ್ಲೇಶ್ವರಂ ಬಾಲಕಿಯರ ಪಿಯು ಕಾಲೇಜಿನಲ್ಲಿ ...

ಕೋಲಾರ: ಸರ್ಕಾರದ ಯೋಜನೆಗಳು ಕ್ರೈಸ್ತ ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ತಲುಪಬೇಕು -ಐವನ್ ಡಿಸೋಜಾ

ರಾಜ್ಯ ಸರ್ಕಾರವು 2013-14, 2014-15, 2015-16, 2016-17, 2017 ಮತ್ತು 2017-18 ನೇ ಸಾಲುಗಳಲ್ಲಿ  ಅಲ್ಪಸಂಖ್ಯಾತರ ಸಮುದಾಯದ ಅಭಿವೃದ್ಧಿಗೋಸ್ಕರ ಪ್ರಯೋಜಿಸಿರುವ ...