ರಾಜಧಾನಿ ಬೆಂಗಳೂರಲ್ಲಿ ಕನ್ನಡ ನಶಿಸುತ್ತಿದೆ-ಮಾಜಿ ಶಾಸಕ ವಿ.ಎಸ. ಪಾಟೀಲ್

Source: sonews | By Staff Correspondent | Published on 2nd December 2018, 11:46 PM | Coastal News | Don't Miss |

ಮುಂಡಗೋಡ : ಕನ್ನಡ ಭಾಷೆ ಉಳಿಯಬೇಕಾದರೆ ರಾಜ್ಯದ ಪತ್ರಿಯೊಬ್ಬರು ಕನ್ನಡ ಭಾಷೆಯನ್ನು ಬಳಸಿದಾಗ ಹಾಗೂ ಮನೆಗಳಲ್ಲಿ ಕನ್ನಡ ಭಾಷೆಯನ್ನು ನುಡಿದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯ.  ಎಂದು ಮಾಜಿ ಶಾಸಕ ವಿ.ಎಸ. ಪಾಟೀಲ್ ಹೇಳಿದರು.
ಅವರು ರವಿವಾರ ದೈವಜ್ಞ ಕಲ್ಯಾಣ ಮಂಟಪದ ಸಭಾಭವನದಲ್ಲಿ ರಾಷ್ಟ್ರ ಕವಿ ಕುವೆಂಪು ವೇದಿಕೆ ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯ ಮಟ್ಟದ  ಪ್ರಥಮ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ನಮ್ಮ ರಾಜ್ಯದ ರಾಜಧಾನಿ ಬೆಂಗಳೂರಲ್ಲಿ ಕನ್ನಡ ಭಾಷೆಯನ್ನು ಸಾಕಷ್ಟು ಮಂದಿ ಬಳಸುವುದಿಲ್ಲ. ಕನ್ನಡ ಬಳಕೆ ಹೆಚ್ಚು ಹೆಚ್ಚು ಕಾಣಬೇಕಾದರೆ ಉತ್ತರಕರ್ನಾಟಕದ ಜಿಲ್ಲೆಗಳಲ್ಲಿ ಕಾಣಬಹುದಾಗಿದೆ.

ನಾವುಗಳು ಎಷ್ಟೇ ಶ್ರೀಮಂತರಾಗಲಿ ಬಡವರೇಯಾಗಿರಲಿ ನಮ್ಮ ಮಕ್ಕಳಿಗೆ ಕನ್ನಡ ಶಿಕ್ಷಣ ನೀಡಬೇಕು. ನಮ್ಮ ರಾಜ್ಯದ ಶಿಕ್ಷಣ ಸಚಿವರಾಗಿದ್ದ ವೇಳೆ ವಿಶ್ವೇಶ್ವರ ಹೆಗಡೆ ಕಾಗೇರಿ ಯವರು ತಮ್ಮ ಮಕ್ಕಳಿಗೆ ಸರಕಾರಿ ಕನ್ನಡ ಶಾಲೆಗಳಿಗೆ ಸೇರಿಸಿದ್ದು ಎಲ್ಲರಿಗೂ ಮಾದರಿ   ಕನ್ನಡವನ್ನು ಕೇಂದ್ರ ಸರಕಾರವಾಗಲಿ ರಾಜ್ಯ ಸರಕಾರವಾಗಲಿ ಇಲ್ಲವೆ ಸಂಘಟನೆಗಳಿಂದ ಕನ್ನಡ ಉಳಿಸುವುದು ಅಸಾಧ್ಯ ಜನಸಮಾನ್ಯರು ಸೇರಿದಾಗಲೇ ಕನ್ನಡ ಉಳಿಯಲು ಸಾಧ್ಯ. ಕನ್ನಡಕ್ಕೆ ಪ್ರಥಮ ಪ್ರಾಶಸ್ತ್ಯ ನೀಡಿ ಉಳಿದ ಭಾಷೆ ಕಲಿತರು ಅಭ್ಯಂತರವಿಲ್ಲ ಎಂದರು

ಜಿ.ಪಂ ಸದಸ್ಯ ಎಲ್.ಟಿ. ಪಾಟೀಲ್ ಮಾತನಾಡಿ, ಪ್ರತಿಯೊಬ್ಬರು ಕನ್ನಡ ಉಳಿಸಲು ಬೆಳೆಸಲು ಜವಾಬ್ದಾರಿ ಇದ್ದು ಇದಕ್ಕೆ ಪಾಲಕರು ತಮ್ಮ ಮನೆಯಲ್ಲಿ ತಮ್ಮ ಮಕ್ಕಳಿಗೆ ಕನ್ನಡ ಭಾಷೆ ಮಾತನಾಡಲು ಅಳವಡಿಸಿಕೊಂಡರೆ ರಾಜ್ಯದಲ್ಲಿ ನೂರಕ್ಕೆ ನೂರು ಕನ್ನಡ ಮಾತನಾಡಲು ಸಾಧ್ಯವಾಗುತ್ತದೆ ಎಂದರು. ಕನ್ನಡ ಭಾಷೆಯಲ್ಲಿ ರದ ಕಡತಗಳಿಗೆ ರುಜು ಹಾಕುವುದಿಲ್ಲ ಎಂದು ಮಾನ್ಯ ಮುಖ್ಯಮಂತ್ರಿಗಳು ಹೇಳಿದ್ದು ತಾವು ಪಕ್ಷಾತೀತವಾಗಿ ಅಭಿನಂದಿಸುತ್ತೇನೆ ಎಂದರು. ಇಂತಹ ಮನಸ್ಥಿತಿ ಎಲ್ಲರಲ್ಲೂ ಬರಬೇಕು ಎಂದರು

ಕೆ.ಆರ್. ಬಾಳೆಕಾಯಿ ಮಾತನಾಡಿ,  ನಮ್ಮ ತಾಲೂಕಿನಲ್ಲಿ ರಾಜ್ಯ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಒಂದು ಪುಣ್ಯದ ಕಾರ್ಯಕ್ರಮ. ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕ್ರಮ ಪಕ್ಷಾತೀತವಾಗಿದ್ದು ಇದರಲ್ಲಿ ಎಲ್ಲಪಕ್ಷದವರು, ಸಂಘಟನೆಯವರು, ಊರಿನ ಜನರು   ಭಾಗವಹಿಸಬೇಕು. ಈ ಕಾರ್ಯಕ್ರಮಕ್ಕೆ ತಾಲೂಕಿನ ಮುಖಂಡರು ಧುರಿಣರು ಗೈರಾಗಿದ್ದು ಬಹಳ ನೋವಿನ ಸಂಗತಿಯಾಗಿದೆ ಎಂದರು. 

ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯ ಮಟ್ಟದ ಪ್ರಥಮ ಸಾಹಿತ್ಯ ಸಮ್ಮೇಳನದ ಮಹಾದ್ವಾರದ ಉದ್ಘಾಟನೆಯನ್ನು ಎ.ಪಿ.ಎಮ್.ಸಿ.ಮಾಜಿ ಅಧ್ಯಕ್ಷ ಎಂ.ಬಿ.ಕುಟ್ರಿ ನೆರವೇರಿಸಿದರು.

ಕನ್ನಡ ದ್ವಜಾರೋಹಣವನ್ನು ಕಸ್ತೂರಿ ಸಿರಿಗನ್ನಡ ವೇದಿಕೆಯ ರಾಜ್ಯಾಧ್ಯಕ್ಷ ಪೋತೇರ ಮಹಾದೇವು ನೆರವೇರಿಸಿದರು.
ಸಮ್ಮೇಳನಾಧ್ಯಕ್ಷ ಜಾನಪದ ಕಲಾವಿದ ಸಹದೇವಪ್ಪ ನಡಗೇರ, ರಾಜ್ಯ ಉಪಾಧ್ಯಕ್ಷ ರಾಧಾಬಾಯಿ ಶಿರಾಲಿ, ಭಾರತೀಯ ಸೇವಾ ಸಮಿತಿ ಸಂಸ್ಥಾಪಕ ರಾಜ್ಯಧ್ಯಕ್ಷ ಎಚ್.ಎಂ. ರಾಮಚಂದ್ರಪ್ಪ, ಎಂ.ಬಿ.ಕುಟ್ರಿ, ಡಾ. ಪಿ.ಪಿ.ಛಬ್ಬಿ, ಮತ್ತು ಬಸವರಾಜ ಸಂಗಮೇಶ್ವರ ಮಾತನಾಡಿದರು.
ಶಿಕ್ಷಕ ಪಿ.ನಾಗೇಂದ್ರ ಪ್ರಾಸ್ತವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿಚಾರಗೋಷ್ಠಿ ಮತ್ತು ಕವಿಗೋಷ್ಠಿಗಳು ನಡೆದವು. ಮತ್ತು ಅನೇಕ ರಂಗದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಾಧನೆ ಮಾಡಿದಂತಹ ವ್ಯಕ್ತಿಗಳಿಗೆ ಸನ್ಮಾನಿಸಲಾಯಿತು. 

ಇದೇ ಸಮಯದಲ್ಲಿ ಶಿಕ್ಷಕರಾದ ರಮೇಶ ಅಂಬಿಗೇರ ಬರೆದ “ಭಾವನೆಯ ಕಡಲಲ್ಲಿ” ಎಲ್.ಟಿ.ಪಾಟೀಲ ಬಿಡುಗಡೆ ಮಾಡಿದರು  ಮತ್ತು ನಾಗರಾಜ ಅರ್ಕಸಾಲಿ ರಚಿಸಿದ “ಭಾವಯಾನ” ಎಂಬ ಪುಸ್ತಕವನ್ನು ಉಪನಿರ್ದೇಶಕ ಕಚೇರಿ ಶಿರಸಿ ಶಿಕ್ಷಣಾಧಿಕಾರಿ ಎಚ್.ಬಿ.ನದಾಫ ವೇದಿಕೆಯ ಮೇಲೆ ಬಿಡುಗಡೆ ಮಾಡಿದರು. 

ಕಸ್ತೂರಿ ಸಿರಿಗನ್ನಡ ವೇದಿಕೆಯ ಗೌರವಾಧ್ಯಕ್ಷ ಮಂಜುನಾಥ ಅಣ್ವೇಕರ, ಎಸ್.ಫಕ್ಕೀರಪ್ಪ, ತಾಲೂಕಾ ಪಂಚಾಯತ ಅಧ್ಯಕ್ಷೆ ದಾಕ್ಷಯಣಿ ಸುರಗೀಮಠ ಎಸ್ಸಿ.ಎಸ್ಟಿ, ಶಿಕ್ಷಕರ ನೌಕರದ ಸಂಘದ ಅಧ್ಯಕ್ಷ ಹನಮಂತ ತಳವಾರ, ವಿ ಎಸ್ ಕೊಣಸಾಲಿ, ಎಸ್ ಕೆ ಬೋರಕರ, ನಾಗರಾತ್ನ ಧಾರವಾಡಕರ, ವೀಣಾ ಓಶಿಮಠ, ಸುಮನ್ ಕುಲಕರ್ಣಿಸೇರಿದಂತೆ ಮುಂತಾದವರು ವೇದಿಕೆ ಮೇಲಿದ್ದರು. ಜಿಲ್ಲಾಧ್ಯಕ್ಷ ಎಸ್.ಡಿ.ಮುಡೆಣ್ಣವರ ಸ್ವಾಗತಿಸಿದರು. ಎಸ್.ಎ.ದೊಡ್ಡಮನಿ ವಂದಿಸಿದರು.

ಇದಕ್ಕೂ ಮುನ್ನ ಪ್ರವಾಸ ಮಂದಿರದಿಂದ ಸಮ್ಮೇಳನಾಧ್ಯಕ್ಷ ಸಹದೇವ ನಡಿಗೇರ ರನ್ನು ಮೆರವಣಿಗೆ ಮುಖಾಂತರ ದೈವಜ್ಞ ಕಲ್ಯಾಣ ಮಂಟಪದ ಸಭಾಕರ್ಯಕ್ರಮದ ತಲುಪಿತು ಮೆರವಣಿಗೆಯಲ್ಲಿ  ಡೋಳ್ಳು ಕುಣಿತ ಹಾಗೂ ಮಕ್ಕಳ ವೇಷಭೂಷಣ ಪಾತ್ರಗಳು ಜನಮನ ಸಳೆದವು. 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...