ನುಡಿದಂತೆ ನಡೆಯುವದು ಕಾಂಗ್ರೆಸ್ ಸರಕಾರ : ಶಿವರಾಮ ಹೆಬ್ಬಾರ

Source: sonews | By Staff Correspondent | Published on 19th November 2017, 7:10 PM | Coastal News | Don't Miss |

ಮುಂಡಗೋಡ: ನನ್ನ ಅಧಿಕಾರವಧಿಯಲ್ಲಿ ಏನು ಕೆಲಸ ಮಾಡಿದ್ದೇನೆ ಎಂದು ತೋರಿಸುತ್ತೇನೆ ನಾವು ಚುನಾವಣೆ ಪೂರ್ವದಲ್ಲಿ ಗುದ್ದಲಿ ಪೂಜೆ ಮಾಡಿ ಜನರಿಗೆ ಮೋಸ ಮಾಡುವವಂತವರು ಕಾಂಗ್ರೆಸಿಗರಲ್ಲಾ. ಕೆಲವೇ ದಿನಗಳಲ್ಲಿ ನನ್ನ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ದಿ ಕಾರ್ಯಗಳು ಕ್ಷೇತ್ರಕ್ಕೆ ತಂದ ಯೋಜನೆಗಳು ಹಾಗೂ ಅನುದಾನದ ಕುರಿತು ಅಂಕಿ ಅಂಶ ಸಮೇತ ಪಟ್ಟಿ ಬಿಡುಗಡೆ ಮಾಡುವುದಾಗಿ ಶಾಸಕ ಶಿವರಾಮ ಹಬ್ಬಾರ ಹೇಳಿದರು.
ತಾಲೂಕಿನ ಕಲಕೇರಿ ಗ್ರಾಮದ ಮಾರಿಕಾಂಬಾ ದೇವಾಲಯದಲ್ಲಿ ಮನೆ ಮನೆಗೆ ಕಾಂಗ್ರೆಸ್ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಭಾ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. 
ನವೆಂಬರ 16 ರಂದು ಮುಂಡಗೋಡಗೆ ಬಂದಿದ್ದ ಬಿಜೆಪಿ ರಾಜ್ಯಧ್ಯಕ್ಷ ಯಡ್ಯೂರಪ್ಪ  ನವರಿಗೆ ಕ್ಷೇತ್ರದಲ್ಲಿ ಯಾವುದೇ ಅಭಿವೃದ್ದಿಯಾಗಿಲ್ಲ ಎಂದು ಅವರಿಂದ ಭಾಷಣ ಮಾಡಿಸಿದ್ದಾರೆ ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಂಡಗೋಡಗೆ ಆಗಮೀಸಿಲಿದ್ದು ಯಡ್ಯೂರಪ್ಪ ನವರಿಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ಟಾಂಗ್ ನೀಡಿದರು.  
ಚುನಾವಣೆ ಬಂದಾಗ ಎಲ್ಲ ಪಕ್ಷದವರು ಭರವಸೆಗಳನ್ನು ನೀಡುತ್ತಾರೆ. ಅದರಂತೆ ನಮ್ಮ ಪಕ್ಷವು ಅಧಿಕಾರಕ್ಕೆ ಬಂದು ನೀಡಿದ ಭರವಸೆಯನ್ನು ಈಡೇರಿಸಿದ್ದು, ನುಡಿದಂತೆ ನಡೆದುಕೊಂಡಿದೆ.165 ಭರವಸೆಗಳಲ್ಲಿ ಇಲ್ಲಿಯವರಗೆ 159 ಭರವಸೆಗಳನ್ನು ಇಡೇರಿಸಿದೆ ಮುಂದಿನ ದಿನಗಳಲ್ಲಿ ಉಳಿದಿರುವಂತ ಭರವಸೆಗಳನ್ನು ನಮ್ಮ ಸರ್ಕಾರ ಪೂರ್ಣಗೊಳಿಸಿ ನುಡಿದಂತೆ ನಡೆದು ಕೊಳ್ಳುತ್ತದೆ ಎಂದು ತೋರಿಸುತ್ತದೆ ಎಂದರು
ಬಿಜೆಪಿ ಕೇಂದ್ರ ಸರಕಾರ ನುಡಿದಂತೆ ನಡಿದಿದ್ಯಾ ಎಂದು ಪ್ರಶ್ನೆಸಿದ ಶಾಸಕರು ಪ್ರಧಾನಿ ನರೇಂದ್ರ ಮೋದಿ ಅವರು ಭಾಷಣದಲ್ಲಿ ಹೇಳುವ ಸಬ್ ಕಾ ಸಾತ್ ಸಬ್ ಕಾ ವಿಕಾಸ ಎಲ್ಲಿದೆ, ತಲಾ ಒಬ್ಬರ ಖಾತೆಗೆ 15 ಲಕ್ಷ ಹಣ ಎಲ್ಲಿದೆ ಎಂದು ವ್ಯಂಗ್ಯವಾಡಿದರು. ರಾಜ್ಯದಲ್ಲಿ ಸಿದ್ದರಾಮಯ್ಯ ನೀಡಿದ ಕಾರ್ಯಕ್ರಮವನ್ನು ಇತಿಹಾಸದಲ್ಲಿ ಯಾವ ಮುಖ್ಯಮಂತ್ರಿಗಳು ನೀಡಿಲ್ಲ. ಬಡವರು ಹಸಿವು, ಅಕ್ಷರ ಹಾಗೂ ಸೂರು ಈ ಮೂರರಿಂದ ವಂಚಿತರಾಗದಿರಲೆಂಬುವುದೇ ನಮ್ಮ ಸರ್ಕಾರದ ಉದ್ದೇಶವಾಗಿದ್ದು, ಬಡವರಿಗೆ ಎಲ್ಲ ಸೌಲಭ್ಯಗಳನ್ನು ಉಚಿತವಾಗಿ ನೀಡುತ್ತಿದೆ. ರಾಜ್ಯ ಸರ್ಕಾರ ರೈತರ ಸಾಲ ಮನ್ನಾ ಮಾಡಿತು. ಕೇಂದ್ರ ಸರ್ಕಾರದಿಂದ ಇದು ಏಕೆ ಸಾದ್ಯವಾಗಿಲ್ಲ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಸರ್ಕಾರ ಮಾಡಿದ ಜನಪರ, ಜನ ಸ್ನೇಹಿ ಯೋಜನೆಗಳ  ಕಾರ್ಯಕ್ರಮಗಳ ಬಗ್ಗೆ ಮನೆ ಮನೆಗೆ ತೆರಳಿ ಹೇಳಿಕೊಳ್ಳುವ ಕೆಲಸ ಕಾರ್ಯಕರ್ತರಿಂದ ನಿರಂತರವಾಗಿ ನಡೆಯಬೇಕಿದೆ ಎಂದು ಹೇಳಿದರು.
ಅತಿಕ್ರಮಣ ಹೋರಾಟದ ಹೆಸರು ಹೇಳಿಕೊಂಡು ಒಬ್ಬರು ಚುನಾವಣೆಗೆ ನಿಲ್ಲಲು ಬರುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿಯೇ ಅವರ ಸಾಮಥ್ರ್ಯ ಏನು ಎಂಬುವುದು ಜನರಿಗೆ ಗೊತ್ತಾಗಿದೆ ಎಂದು ಶಾಸಕರು ಗುಡುಗಿದರು. ಹಿಂದೆ ಯಾವ ಸರ್ಕಾರ ಕೂಡ ಮಾಡದ ಅರಣ್ಯ ಅತಿಕ್ರಮಣ ಸಕ್ರಮ ಜಿ.ಪಿ.ಎಸ್ ನಮ್ಮ ಸರ್ಕಾರ ಮಾಡಿದೆ. ನಮ್ಮ ಸರ್ಕಾರದ ಅವದಿಯಲ್ಲಿ ಯಾರನ್ನು ಕೂಡ ಒಕ್ಕಲೆಬ್ಬಿಸುವ ಕೆಲಸ ಮಾಡಲಾಗಿಲ್ಲ. ಮತ ಹಾಕೋದು ಜನರ ಕೆಲಸ ಸೋಲು ಗೆಲುವು ಇದ್ದದ್ದೆ ಅಧಿಕಾರ ಬರುತ್ತೆ ಹೋಗುತ್ತೆ ಆದರೆ ಮಾನವಿಯತೆ ಆದಾರದ ತಳಹದಿ ಮೇಲೆ ಅಧಿಕಾರ ನಡೆಸಬೇಕು ಎಂದರು. 
ಧುರೀಣ ಕೃಷ್ಣ ಹಿರೇಹಳ್ಳಿ, ಅರ್ಜುನ ಸಿಂಗನಳ್ಳಿ, ಗೋಪಾಲ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.


 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...