ಬಯಲು ಸೀಮೆಯ ಕುರಿಗಳು ಅರೆಮಲೆನಾಡಿನತ್ತ

Source: sonews | By Staff Correspondent | Published on 26th October 2018, 5:24 PM | Coastal News |

ಮುಂಡಗೋಡ : ಭತ್ತ ಕಟಾವು  ಮುಗಿಯುತ್ತಾ ಬರುತ್ತಿದ್ದಂತೆ  ಬೆಳಗಾವಿ ಜಿಲ್ಲೆಯ ತಾಲೂಕುಗಳಾದ ಅಥಣಿ, ಚಿಕ್ಕೋಡಿ, ಬೆಳಗಾವಿ, ನಿಪ್ಪಾಣಿ ಸೇರಿದಂತೆ ಇನ್ನಿತರ ತಾಲೂಕಗಳಿಂದ ಕುರಿಗಾಹಿಗಳು ತಮ್ಮ ಕುರಿಗಳನ್ನು ತಾಲೂಕಿನ ಹೊಲಗದ್ದೆಗಳಲ್ಲಿ ಮೇಯಲು ಬರುತ್ತಿವೆ ಆದರೆ ಈ ಸಲ ಭತ್ತ ಕಟಾವು ಆಗುವಕ್ಕಿಂತ ಮುಂಚೆಯೇ ಮುಂಡಗೋಡಿನ ಹೊಲಗದ್ದೆಗಳಿಗೆ ಲಗ್ಗೆ ಇಟ್ಟಿವೆ.

ಮೇವು ಮೇಯಲು  ಕುರಿಗಳ ಹಿಂಡು ಅರೆ ಮಲೆನಾಡಿನತ್ತ ಬಂದಿವೆ. ಬಯಲು ಪ್ರದೇಶ, ಡ್ಯಾಮ್‍ಗಳ ಕೆಳಭಾಗದ ಹಸಿರಿನ ಬಯಲಿನಲ್ಲಿ ಮೇಯುತ್ತಿವೆ ಒಂದೊಂದು ಕುರಿ ಹಿಂಡಿನಲ್ಲಿ  ಸುಮಾರು 300- 400 ಕುರಿಗಳಿರುವುದು  ಸಾಮನ್ಯ ಬಯಲು ಸೀಮೆಯ ಪ್ರದೇಶಗಳಲ್ಲಿ ಅರ್ಧವರ್ಷ ಕಳೆಯುವ ಕುರಿಗಳು ಉಳಿದ ತಿಂಗಳು ಅರೆಮಲೆನಾಡು, ಮಲೆನಾಡು ತಾಲೂಕನಲ್ಲಿ ಸಂಚಾರ ನಡೆಸುತ್ತವೆ. ಪ್ರಸಕ್ತ ವರ್ಷ ಬಯಲು ಸೀಮೆಯಲ್ಲಿ ಮಳೆ ಅಭಾವದಿಂದ ಮುಂಗಾರು ಬೆಳೆ ಕೈಕೊಟ್ಟಿದೆ ಇದರಿಂದ ಮುಂಗಾರು ಬೆಳೆ ಇಲ್ಲದೆ ಇರುವ್ಯದರಿಂದ ಕುರಿಗಳಿಗೆ ಮೇವಿಲ್ಲದೇ ಅರೆಮಲೆನಾಡಿನ ತಾಲುಕಿನತ್ತ ಒಂದು ತಿಂಗಳ ಮೊದಲೇ ವಲಸೆ ಬಂದಿವೆ ಎಂದು ಹೇಳಲಾಗುತ್ತಿದೆ.

ಈಗಾಗಲೇ ತಾಲೂಕಿಗೆ ಆಗಮಿಸಿದ್ದು ಟಿಬೆಟಿಯನ್ ಇರುವ ಹೊಲಗದ್ದೆಗಳಿಗೆ  ಹುಬ್ಬಳ್ಳಿ  ರಸ್ತೆ ಬಾಚ ಣಕಿ ಸೇರಿದಂತೆ ವಿವಿಧ ಕಡೆ ಬಿಡಾರ ಹೂಡಿವೆ. ರಸ್ತೆ ಪಕ್ಕ  ಹಸಿರು ಹುಲ್ಲು ಮೇಯುತ್ತಾ  ಬಯಲು ಪ್ರದೇಶಗಳತ್ತ ಮುನ್ನುಗಿವೆ. ಜಲಾಶಯದ ದಡಭಾಗದಲ್ಲಿ ಸದ್ಯ ಬಿಡಾರ ಹೂಡಿ ಕೊಯ್ಲು  ಆದ ನಂತರ ಮತ್ತೆ ಸಂಚಾರ ನಡೆಸಲಿವೆ ಎಂದು ಕುರಿಗಾಹಿಗಳು ಪತ್ರಿಕೆಗೆ ಹೇಳಿದರು.

ಕುರಿಗಾಹಿಗಳು ತಮ್ಮ ಕುಟುಂಬ ಸಮೇತ ಸಂಚಾರ ಮಾಡುತ್ತಾರೆ ತಾಲೂಕಿನ ವಿವಿಧ ಕಡೆಗಳಲ್ಲಿ ಕುರಿಗಳನ್ನು ಮೇಯಿಸುಕೊಂಡು ಎಲ್ಲಿ ಬೀಡಾರ ಹೂಡಬೇಕೋ ಅಲ್ಲಿ ತಮ್ಮ ಪರಿವಾರವನ್ನು ಬಿಟ್ಟಿತ್ತಾರೆ. ಅಲ್ಲಿಯೇ ಅವರ ಊಟ ಉಪಚಾರ.

ಕೊಯ್ಲಿಗೆ ಬಂದ ಬೆಳೆ : ತಾಲೂಕನಲ್ಲಿ ಇನ್ನು ಬೆಳೆ ಕಟಾವು ಆರಂಭವಾಗಿಲ್ಲ. ಆದರೆ ಕುರಿಗಳ ಹಿಂಡು ವಾಡಿಕೆಗಿಂತ ಮೊದಲೇ ಬಂದು ಗದ್ದೆಗಳ ಬದಲು ಬಯಲು ಪ್ರದೇಶಗಳಲ್ಲಿ ಠೀಕಾಣಿ ಹೂಡಿವೆ. ಗದ್ದೆಗಳು ಖಾಲಿಯಾದಂತೆ ಮೇಯುತ್ತ ಕುರಿಗಳ ಹಿಂಡು ಶಿರಸಿ, ಜಡೆ ಭಾಗದವರೆಗೆ ಹೋಗಿ ಮರಳುತ್ತವೆ ಸುಮಾರು ತಿಂಗಳು ಕಾಲ ತಾಲೂಕಿನಲ್ಲಿ ಸಂಚಾರ ನಡೆಸುವ ಕುರಿಗಳು ಮರಳಿ ಬಯಲು ಸೀಮೆಯತ್ತ ಮುಖ ಮಾಡುತ್ತವೆ

ಕುರಿಗಳ ಹಿಂಡನ್ನು ಗದ್ದೆಗಳಲ್ಲಿ ಒಂದು ದಿನ , ಎರಡು ದಿನ ಅಂತ ಮೇಯಲು ಬಿಟ್ಟರೆ ಆ ಜಮೀನಿನ ಮಾಲೀಕರು ಕುರಿಗಾಯಿ ಅವರಿಗ ಇಂತಿಷ್ಟು ಅಂತ ದುಡ್ಡು,  ದವಸ ಧಾನ್ಯ , ಬಟ್ಟೆ ನೀಡಿ ತಾಂಬೂಲು ಖರ್ಚಿಗೆ ನೀಡುತ್ತಾರೆ. ಶಿರಸಿ ಭಾಗದಲ್ಲಿ ಅಡಿಕೆ ತೋಟದಲ್ಲಿ ಕುರಿಗಳ ಹಿಂಡು ದಿನ ಕಳೆದರೆ ಒಂದು ದಿನಕ್ಕೆ ಸಾವಿರ ರೂಪಾಯಿ ನೀಡುತ್ತಾರೆ ಎಂದು ಕುರಿಗಾಹಿಗಳಿಂದ ಮಾತು ಕೇಳಿಬರುತ್ತದೆ
 

*ನಜೀರುದ್ದಿನ ತಾಡಪತ್ರಿ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...