ಸಸ್ಯೋಧ್ಯಾನ ಕುರಿತು ಇಲಾಖೆ ಕಾಳಜಿ ವಹಿಸಲಿ 

Source: sonews | By sub editor | Published on 14th November 2017, 11:45 PM | Coastal News | Don't Miss |

   * ಚಿತ್ರವರದಿ: ನಜೀರುದ್ದಿನ.ಎ.ತಾಡಪತ್ರಿ

ಮುಂಡಗೋಡ : ಅರಣ್ಯ ಇಲಾಖೆಯ ನಿರ್ಲಕ್ಷ್ಯದಿಂದ ಮಳೆಗಾಲದಲ್ಲಿ ಬೆಳೆದ ಚುಪ್ಪಡ(ಹುಲ್ಲು,ಕಳೆ) ತೆರವು ಮಾಡದೇ ಇರುವುದರಿಂದ ಸಸ್ಯೋಧ್ಯಾನದ ಹತ್ತಿರ ಸಾರ್ವಜನಿಕರು ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.


ಮುಂಡಗೋಡ ಅರಣ್ಯ ಇಲಾಖೆಯಿಂದ 13 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಸಸ್ಯೋಧ್ಯಾನ ಪ್ರಾರಂಭೋತ್ಸವ ಮಾಡದಿದ್ದರೂ ಸಹಿತ ಸಾರ್ವಜನಿಕರಿಗೆ 5-00 ಪ್ರವೇಶ ಶುಲ್ಕ ವಿಧಿಸಿ ಪ್ರವೇಶ ಕಲ್ಪಿಸಲಾಗಿತ್ತು ಇದರಿಂದ ಮುಂಜಾನೆ ಹಾಗೂ ಸಂಜೆ ವಾಕಿಂಗ್ ಮಾಡುವರೂ ಸೇರಿದಂತೆ ಬಿ.ಪಿ, ಶುಗರ್ ಕಾಯಿಲೆ ಹತೋಟಿಯಲ್ಲಿಡುವಂತ ಬಯಸುವುವರಿಗೆ ತುಂಬಾ ಅನುಕೂಲವಾಗಿತ್ತು.  
ಜನ ಜಂಝಾಡದಿಂದ ದೂರವಿದ್ದು ಹಸೀರು ನಲೆಯಲ್ಲಿ ಶುದ್ದವಾದ ಗಾಳಿ ಉಂಡು ಪರಿವಾರ ಸಮೇತ ಆಗಮಿಸಿ ಮನೆಯಿಂದ ತಂದಂತಹ ಬುತ್ತಿಯನ್ನು ಸವೇದು ತಮ್ಮ ದುಃಖಗಳನ್ನು ಮರೆಯಲು ಇದ್ದಂತಹ ತಾಲೂಕಿನಲ್ಲಿ ಇದ್ದಂತಹ ಒಂದೇ ಒಂದು ಸಸ್ಯೋಧ್ಯಾನ ಹೀಗಾಯಿತಲ್ಲಾ  ಎಂದು ಮಹಿಳೆ ಹಳಹಳಿಸುವುದು ಕಾಣಬಹುದಾಗಿದೆ. ಇನ್ನೂ ಎಷ್ಟು ದಿನ ಕಾಯಬೇಕು ಎನ್ನುವ ಪ್ರಶ್ನೆ ಸಾರ್ವಜನಿಕರಿಗೆ
ಮಳೆಗಾಲ ಪ್ರಾರಂಭದಿಂದ ವಾಕಿಂಗ್ ಮಾಡುವುವರಿಗೆ ಹಾಗೂ ಜನ ಜಂಝಾಡದಿಂದ ದೂರವಿದ್ದು ಹಸೀರು ನಲೆಯಲ್ಲಿ ತಮ್ಮ ದುಃಖ ದುಮ್ಮಾನಗಳನ್ನು ಮರೆತು ಶುದ್ದವಾದ ಗಾಳಿ ಸವಿಯಲು ಬರುವಂತರಿಗೆ  ವಿಶೇಷವಾಗಿ ಮಕ್ಕಳಿಗೆ  ಪಾರ್ಕ್ ಅವ್ಯವಸ್ಥೆಯಾಗಿರುವುದು ನೋವಿನ ಸಂಗತಿಯಾಗಿದೆ..
ಮಳೆಗಾಲ ಸರಿದಿದೆಯಾದರೂ ನಡೆದಾಡುವ ಟ್ರ್ಯಾಕ್‍ಗಳಲ್ಲಿ ಹುಲ್ಲುಬೆಳದು ನಿಂತಿರುವುದು ಹಾಗೇ ಉಳಿದಿದೆ. ಇದರಿಂದ ಪಾರ್ಕ್‍ಗೆ ಬರುವಂತ ವಿಶೇಷವಾಗಿ ವಾಕಿಂಗ್ ಮಾಡಲು ಬರುವಂತರಿಗೆ ದುಃಖದ ಸಂಗತಿಯಾಗಿದೆ. 
ಯಲ್ಲಾಪುರ ಪಟ್ಟಣದಲ್ಲಿ ನಿರ್ಮಾಣಗೊಂಡಿರುವ ಸಸ್ಯೋಧ್ಯಾನದಲ್ಲಿ  ಸಾರ್ವಜನಿಕರ ಪ್ರವೇಶಕ್ಕೆ ಶುಲ್ಕ ವಿಧಿಸದಿದ್ದರೂ ಸಹಿತ ಅಲ್ಲಿನ ಅಧಿಕಾರಿಗಳು ಮುತುವರ್ಜಿವಹಿಸಿ ಟ್ರ್ಯಾಕ್‍ಗಳಲ್ಲಿಯ ಹುಲ್ಲು ತೆರವುಗೊಳಿಸಿ ಟ್ರ್ಯಾಕ್‍ಗಳಲ್ಲಿ ಮಣ್ಣುಹಾಕಿಸಿ ಸಾರ್ವಜನಿಕರಿಗೆ ಪಾರ್ಕ್‍ನಲ್ಲಿ ಓಡಾಡಲು ಅನುಕೂಲ ಮಾಡಿಕೊಟ್ಟಿರುವುದು ಸಂತೋಷದ ಸಂಗತಿ.
ಮುಂಡಗೋಡ ಅರಣ್ಯ ಇಲಾಖೆಯು ತಕ್ಷಣ ಹುಲ್ಲು ಟ್ರ್ಯಾಕ್‍ಗಳಿಂದ ತೆರವುಗೊಳಿಸಿ ಪಾರ್ಕ್‍ನಲ್ಲಿ ಓಡಾಡಲು ಉತ್ಸಕರಿರುವ ಸಾರ್ವಜನಿಕರು ಸಸ್ಯೋಧ್ಯಾನಕ್ಕೆ  ಬರುವಂತಹ ಪರಿಸ್ಥಿತಿ ನಿರ್ಮಾಣ ಮಾಡಲಿ ಎಂಬುದು ಸಾರ್ವಜನಿಕರ ಆಶಯವಾಗಿದೆ. 

ನಮಗೆ ಸಾರ್ವಜನಿಕರ ಕುರಿತು ಕಾಳಜಿ ಇದೆ ನಾವು ಈ ಮೊದಲು ಟ್ರ್ಯಾಕ್‍ನಲ್ಲಿ ಬೆಳೆದಂತಹ ಹುಲ್ಲು ತೆರವುಗೊಳಿಸಲಾಗಿತ್ತು. ಅಕಾಲಿಕ ಮಳೆಯಿಂದಾಗಿ ಹೀಗಾಗಿದೆ. ಹುಲ್ಲು ತೆಗೆಯುವ ಹಾಗೂ ಪಾರ್ಕ್ ನ ಇತರೆ ಕೆಲಸಗಳು ಮಾಡುತ್ತಾಲಿದ್ದೇವೆ. ಶೀಘ್ರದಲ್ಲಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಟ್ರ್ಯಾಕ್‍ಗಳಲ್ಲಿ ಮಣ್ಣನ್ನು ಹಾಕಿದರೆ ಮತ್ತೆ ಹುಲ್ಲು ಬೆಳೆಯುತ್ತೆ ಆದ್ದರಿಂದ ಪೇವರ್ಸ ಗಳನ್ನು ಹಾಕಿದರೆ ಸಾರ್ವಜನಿಕರಿಗೆ ಮಳೆಗಾಲದಲ್ಲಿಯೂ ಅನುಕೂಲವಾಗಲಿದೆ 
‘ಶಶಿಧರ’ “ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ”

Read These Next

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...