ರೋಟರಿ ಕ್ಲಬ್ ಹೆರಿಟೇಜ್ ನೂತನ ಅಧ್ಯಕ್ಷರಾಗಿ ಸೀತಾರಾಮ ಬೋರ್ಕರ

Source: sonews | By Sub Editor | Published on 17th July 2017, 7:45 PM | Coastal News |

ಮುಂಡಗೋಡ: ೨೦೧೭-೧೮ ನೇ ಸಾಲಿನ ಮುಂಡಗೋಡ ರೋಟರಿ ಕ್ಲಬ್ ಹೆರಿಟೇಜ್ ನೂತನ ಅಧ್ಯಕ್ಷರಾಗಿ ಸೀತಾರಾಮ ಬೋರ್ಕರ, ಕಾರ್ಯದರ್ಶಿ ವಸಂತ ಕೊಣಸಾಲಿ, ಕೋಶಾಧ್ಯಕ್ಷ ಪಿ.ಪಿ ಛಬ್ಬಿ ಪಟ್ಟಣದ ಟ್ರಿನಿಟಿ ಸಭಾಂಗಣದಲ್ಲಿ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾಗಿ ಸೀತಾರಾಮ ಬೋರ್ಕರ‌ಅವರು ನಾನು ಸಮಾಜಕ್ಕೆ ಏನು ಒಳ್ಳೆಯ ಮಾಡಿದ್ದೇನೆ ಅರಿವುದು ಮುಖ್ಯವಾಗಿದೆ ಎಂದ ಅವರು  ಮುಂದಿನ ಒಂದು ವರ್ಷಗಳ ಕಾಲ ನಿರಂತರವಾಗಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ತಾಲೂಕಿನ ಸಿದ್ದಿ, ಗೌಳಿ, ಲಂಬಾಣಿ ಸೇರಿದಂತೆ ಹಿಂದುಳಿದವರ ಬಡಾವಣೆಗಳಲ್ಲಿ ಸಭೆ ನಡೆಸಿ ಸಾರ್ವಜನಿಕ ಕುಂದು ಕೊರತೆ ಬಗ್ಗೆ ಅವಲೋಕಿಸಿ ಕಟ್ಟ ಕಡೆಯ ಜನರಿಗೂ ಅಗತ್ಯ ಮೂಲಭೂತ ಸೌಲಭ್ಯ ಗಳನ್ನು ಒದಗಿಸಿಕೊಡುವಂತಹ ಯೋಜನೆ ರೂಪಿಸಲಾಗುವುದೆಂದು ಹೇಳಿದರು.
ರೋಟರಿ ಕ್ಲಬ್ ಪದಗ್ರಹಣ ಅಧಿಕಾರಿ ಗಣೇಶ ಕುರ್ಸೆ ಮಾತನಾಡಿದರು  ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಅಶೋಕ ಹಬೀಬ ಮಾತನಾಡಿ, ಬೇರೆವರಿಗೋಸ್ಕರ ಯಾರು ಬದುಕುತ್ತಾರೊ ಅಂತಹವನ್ನು ಸಮಾಜ ಎಂದಿಗೂ ಕೈಬಿಡುವುದಿಲ್ಲ. 
ನಿಕಟಪೂರ್ವ ಅಧ್ಯಕ್ಷ ಸತೀಶ ಕುರ್ಡೇಕರ ಅಧಿಕಾರ ಹಸ್ತಾಂತರಿಸಿದರು. ನೂತನ ಕಾರ್ಯದರ್ಶಿ ವಸಂತ ಕೊಣಸಾಲಿ, ಕೋಶಾಧ್ಯಕ್ಷ ಪಿ.ಪಿ ಛಬ್ಬಿ ಉಪಸ್ಥಿತರಿದ್ದರು. ವಸಂತ ಕೊಣಸಾಲಿ ಸ್ವಾಗತಿಸಿದರು. ಸೋಮಪ್ಪ ಮುಡೆಣ್ಣವರ ನಿರೂಪಿಸಿದರು. ಸಮಾರಂಭದಲ್ಲಿ ರೋಟರಿ ಹೇರಿಟೇಜ ಸದಸ್ಯರು ಉಪಸ್ಥಿತರಿದ್ದರು

Read These Next

ಕುಂದಾಪುರ: ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಯಲ್ಲಿ ಮುಳುಗಿ ಇಬ್ಬರು ವಿದ್ಯಾರ್ಥಿಗಳ ಸಾವು

ಕುಂದಾಪುರ: ಇಲ್ಲಿಗೆ ಸಮೀಪದ ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನದ ಕೆರೆಗೆ ಸ್ನಾನಕ್ಕೆಂದು ಇಳಿದ ಈರ್ವರು ಪದವಿ ವಿದ್ಯಾರ್ಥಿಗಳು ...