ರಸ್ತೆ ಅಪಘಾತ : ಬೈಕ್ ಸವಾರ ಸಾವು

Source: sonews | By Staff Correspondent | Published on 11th February 2018, 11:36 PM | Coastal News | Don't Miss |

ಮುಂಡಗೋಡ : ಬೈಕ್ ಗೆ ಕಾರ ಹಾಗೂ ವೆಗೆನಾರ ವಾಹನ ಅಪಘಾತ ಪಡಿಸಿದ್ದರಿಂದ ಬೈಕ್ ಸವಾರ ಮೃತಪಟ್ಟ ಘಟನೆ ತಾಲೂಕಿನ ಕಾತೂರ ಗ್ರಾಮದ ಫಾರೆಸ್ಟ ವಸತಿ ಗೃಹಗಳ ಹತ್ತಿರ, ಹುಬ್ಬಳ್ಳಿ-ಶಿರಸಿ(ರಾ.ಹೆ69) ರಸ್ತೆಯಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದೆ
ಮೃತಪಟ್ಟ ಬೈಕ್ ಸವಾರನನ್ನು  ಮುಂಡಗೋಡ ಪಟ್ಟಣದ ಕಲಾಲ ಓಣಿ ನಿವಾಸಿ ಜಹಾಂಗೀರ ಮಕ್ತುಂಸಾಬ ನಂದಿಗಟ್ಟಿ(52) ಎಂದು ಗುರುತಿಸಲಾಗಿದೆ. ಈತ ವೃತ್ತಿಯಿಂದ ಚಾಲಕನಾಗಿದ್ದ.

ಅಪಘಾತ ಪಡಿಸಿದ  ಚಾಲಕ ( ಆರೋಪಿ)ರನ್ನು 1)ಉಮಾಪತಿ ಹೆಗಡ(58) 2) ಅರಣ್ಯ ಇಲಾಖೆ ಸಿಬ್ಬಂದಿ ಬನವಾಸಿ ನಿವಾಸಿ, ದೊಡ್ಡಬಸಯ್ಯ ಶಿವಶಂಕರಯ್ಯ ಹಿರೇಮಠ(26) ಎಂದು ಗುರುತಿಸಿಲಾಗಿದೆ.

ಬೆಳಗ್ಗೆ ಬೈಕ್ ಸವಾರ ಮುಂಡಗೋಡ ದಿಂದ ಬೈಕನ್ನು ನಿಧಾನವಾಗಿ ಚಾಲಾಯಿಸಿಕೊಂಡು ಶಿರಸಿ ದಿಕ್ಕಿಗೆ ಹೊರಟಿದ್ದ ಎನ್ನಲಾಗಿದೆ. ಹೋಗುತ್ತಿದ್ದಾಗ ಶಿರಸಿಯಿಂದ ಮುಂಡಗೋಡ ಬರುತ್ತಿದ್ದ  ಮೊದಲೆನೇ ಚಾಲಕ ಕೆ.ಎ 27 ಎಮ್ 3956 ಕಾರನ್ನು ಅತಿವೇಗವಾಗಿ ನಿಷ್ಕಾಳಜಿಯಿಂದ ಚಾಲಯಿಸಿಕೊಂಡು ಬಂದು ಬೈಕ್ ಗೆ ಅಪಘಾತ ಪಡಿಸಿದ್ದಾನೆ ಇದರಿಂದ ಬೈಕ್ ಸವಾರ ಬೈಕ್ ಸಮೇತವಾಗಿ ಕೆಳಗೆ ಬಿದ್ದಿದ್ದಾನೆ ಇದೇ ಸಮಯಕ್ಕೆ 2ನೇ ವಾಹನ ಚಾಲಕ ಕೆ.ಎ-04 ಎಮ್.ಆರ್-1150 ನೇ ನಂಬರಿನ ವಾಹನವನ್ನು ನಿಷ್ಕಾಳಜಿ ಹಾಗೂ ಅವಿವೇಗವಾಗಿ ಚಾಲನೆ ಮಾಡಿಕೊಂಡು ಬಂದು ವಾಹನದ  ವೇಗ ವನ್ನು ನಿಯಂತ್ರಿಸದೇ ಕೆಳಗೆ ಬಿದ್ದ ಬೈಕ್ ಸವಾರನಿಗೆ ಅಪಘಾತ ಪಡಿಸಿ ಬೈಕ್ ಸವಾರನನ್ನು ಸುಮಾರು 20 ಫೂಟುಗಳವರೆಗೆ ಮುಂದಕ್ಕೆ  ಎಳೆದುಕೊಂಡು ಹೋಗಿದ್ದಾನೆ ಎಂದು ಹೇಳಲಾಗುತ್ತಿದ್ದು ಇದರಿಂದ ಬೈಕ್ ಸವಾರನಿಗೆ ಮುಖಕ್ಕೆ, ತಲೆಗೆ, ಎದೆಗೆ ಹಾಗೂ ಪಕ್ಕೆಲುಬಿಗೆ ಭಾರಿ ಮಾರಣಾಂತಿಕ ಗಾಯವಾಗಿದೆ. ಗಾಯಳುನನ್ನು ಆತನಿಗೆ ಅಪಘಾತ ಪಡಿಸಿದ(2ನೇ ಚಾಲಕ) ವಾಹನದಲ್ಲಿಯೇ ಚಿಕಿತ್ಸೆಗೆ ಮುಂಡಗೋಡಿನ ಖಾಸಗಿ ಆಸ್ಪತ್ರೆಗೆ ಕರೆದೋಯ್ಯಲಾಗಿದ್ದು ಎಂದು ಹೇಳಲಾಗಿದ್ದು ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಕೆರೆದು ಹೋಗಲು ಸೂಚಿಸಿದ್ದರಿಂದ ಹುಬ್ಬಳ್ಳಿಗೆ ಸಾಗುತ್ತಿರುವಾಗ ಮಾರ್ಗ ಮಧ್ಯ ಬೈಕ್ ಸವಾರನ ಪ್ರಾಣ ಪಕ್ಷಿ ಹಾರಿಹೋಗಿದೆ ಎಂದು  ಫಿರ್ಯಾದಿಯು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಪೊಲೀಸರು ಎರಡು ಜನ ಚಾಲಕರ ಮೇಲೆ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...