ಮುಂಡಗೋಡ : ತಾಲೂಕಿನಲ್ಲಿ ೪-೫ ದಿನಗಳಿಂದ ಉತ್ತಮ ಮಳೆ ; ಚುರುಕುಗೊಂಡ ಕೃಷಿ

Source: sonews | By Staff Correspondent | Published on 19th July 2017, 11:04 PM | Coastal News | Don't Miss |

ಮುಂಡಗೋಡ : ತಾಲೂಕಿನಲ್ಲಿ  ಬರಗಾಲದ ಛಾಯೆ ಮೂಡಿಸುವಂತ ಸನ್ನಿವೇಶ ಮೂಡುತ್ತಿದ್ದ ವೇಳೆ ಮುಸಲ ಧಾರೆ ಉತ್ತಮವಾಗಿ ಬರಲಾರಂಭಿಸಿದೆ ಬುಧವಾರ ಉತ್ತಮ ಮಳೆಯಾಗಿದೆ. ಜುಲೈತಿಂಗಳ ಮಧ್ಯಭಾಗ ತಲುಪಿದರೂ ಮುಂಗಾರು ಚುರುಕುಗೊಳ್ಳುವ ಲಕ್ಷಣಗಳು ಕಾಣದಾಗಿತ್ತು. ಆದರೆ ಕಳೆದ ನಾಲ್ಕೈದು  ದಿನಗಳಿಂದ ಸುರಿದ ಮಳೆಯಿಂದ ರೈತರ ಕೂಡ ಸಾರ್ವಜನಿಕರೂ ಸಂತಸಗೊಂಡಿದ್ದಾರೆ. 
ಬಯಲು ಸೀಮೆಯ ಛಾಯೆ ಇರುವ ಮುಂಡಗೋಡ ತಾಲೂಕಿನ ಜನವರಿ ೧ ರಿಂದ ಜುಲೈ ೧೯ ವರೆಗೆ ೭೫೨.೩ ಮಿ.ಮೀ   ಜುಲೈವರೆಗೆ ವಾಡಿಕೆ ಮಳೆಯಾಗಬೇಕಿತ್ತು ಮಳೆ೭೩೦ ಮಿ.ಮೀ ಮಾತ್ರ ಈ ವರ್ಷ ಇಲ್ಲಿಯವರೆಗೆ ೪೮೪.೨ ಮಿ.ಮೀ ಮಳೆ ಸುರಿದಿದೆ.
ಈ ವರ್ಷ ಮಳೆಗಾಲದ ಸೋಬಗು ನೋಡಲು ಕಾತುರರಾಗಿದ್ದ ಜನರಿಗೆ ಮುಸಲಧಾರೆ ಮನತಣಿಸಿದೆ.
ಜುಲೈ ೨ನೇ ವಾರ ಕೊನೆಯವರಿಗೂ ಮಳೆಗಾಲವಿದ್ದರೂ ಬೀಸಿಗೆ ಗಾಲದ ಛಾಯೆ ಹೋಗಿರಲಿಲ್ಲ ಈಗ ೪-೫ ದಿನಗಳಿಂದ ಸೂರ್ಯನ ದರ್ಶನ ಕಾಣದಾಗಿದೆ. ಪೆಟ್ಟಿಗೆ ಸೇರಿದ್ದ ಮೈ ಬೆಚ್ಚಗೆ ಇಡುವ ಉಡುಪುಗಳು ತೇವಾಂಶದಿಂದ ಕೂಡಿದ ವಾತವಾರಣದಿಂದ ಜನರ ಮೈಮೇಲೆ ರಾರಾಜಿಸುತ್ತಿವೆ.  ಮಳೆಕೋಟ್ ಇಲ್ಲದ ಹೊರಗೆ ಬರದಂತಹ ಪರಸ್ಥಿತಿ ನಿರ್ಮಾಣವಾಗಿದ್ದು ಮಳೆ ಸ್ವಲ್ಪ ನಿಂತಾಗ ಕೊಡೆಗಳ ಭರಾಟೆ ಬಲುಜೋರು

ಮುಂಡಗೋಡ : ಮಳೆ ಬಲುಜೋರು; ಚುರುಕುಗೊಂಡ ಕೃಷಿ

ಕಳೆದ ನಾಲ್ಕೈದು ದಿನಗಳಿಂದ  ಬಿದ್ದ ಮಳೆಗೆ  ಕೃಷಿ ಕಾರ್ಯ ಚುರುಕುಗೊಂಡಿದ್ದು ಇನ್ನಷ್ಟು ಮಳೆ ನಿರೀಕ್ಷೆಯಲ್ಲಿ ರೈತವರ್ಗವಾಗಿದ್ದರೆ, ಈ ಮಳೆಯು ಎದಕ್ಕೂ ಸಾಲದೂ ಈ ಮಳೆಯು ಬರಗಾಲದ ಸಂಶಯವನ್ನು ದೂರಮಾಡದು ಎಂದು ಕೆಲರೈತರು ಹೇಳುತ್ತಿರುವುದು ಕೇಳಿ ಬರುತ್ತಿದೆ ಮಳೆಯು ಹೀಗೆ ಜುಲೈ ಕೊನೆಭಾಗದವರಿಗೆ  ಸುರಿದರೆ ಕೆರೆ ಕಟ್ಟೆಗಳು ತುಂಬುವ ಆಶಾಭಾವನೆ ವ್ಯಕ್ತವಾಗಿದೆ. ಕೆರೆ ಕಟ್ಟೆಗಳು ತುಂಬಿದರೆ ನಾಟಿ ಮಾಡಲು ಸಹಕಾರಿಯಾಗಲಿದೆ.

ಬೆಳೆ ಪರಿಸ್ಥಿತಿ : ೧೪೫೦೦ ಹೆಕ್ಟರ ಪ್ರದೇಶ ಬೆಳೆ ಬೆಳೆಯಲು ಗುರಿ ಹೊಂದಲಾಗಿದ್ದು ಆದರೆ ಶೇ,೮೯ ಮಾತ್ರ ಬಿತ್ತನೆಯಾಗಿದೆ.
ಗೋವಿನ ಜೋಳ ಬೆಳವಣಿಗೆ ಹಂತದಲ್ಲಿದ್ದು ಬೆಳೆ ಉತ್ತಮವಾಗಿದೆ.ಕೊರ್ಗಿ ಬತ್ತ ಬೆಳವಣಿಗೆ ಹಂತದಲ್ಲಿದ್ದು ಕಳೆದ ೩-೪ ದಿನಗಳಿಂದ ಸುರಿದ ಮಳೆಯಿಂದಾಗಿ ಗದ್ದೆಗಳಲ್ಲಿ ದೋಣಿ ತಿಕ್ಕುವುದು(ಪ್ಯಾಡಲಿಂಗ್),ಹೊರಗೊಡತಾ ನಡೆದಿದ್ದು ಇರುತ್ತದೆ. ಕೂರ್ಗಿ ಬತ್ತಕ್ಕೆ ಮಳೆ ಅವಶ್ಯ ಬಹಳವಿದೆ
ಹತ್ತಿ : ಬೆಳವಣಿಗೆ ಹಂತದಲ್ಲಿದ್ದು ಬೆಳೆ ಉತ್ತಮವಾಗಿದೆ. 
ಜನವರಿ ಒಂದರಿಂದ ಜುಲೈ ೧೯ ವರೆಗೆ ೭೫೨.೩ ಮಿ.ಮೀ ಮಳೆಯಾಗಬೇಕಾಗಿತ್ತು ಆಗಿದ್ದು ೪೮೪.೨ ಮಿ.ಮೀ ಆಗಿದೆ. 
ಹೊಬಳಿ ಮಟ್ಟದಲ್ಲಿ ಮಳೆ : ಮುಂಡಗೋಡ ಹೊಬಳಿಯಲ್ಲಿ  ಜನವರಿಯಿಂದ ಜುಲೈ ೧೯ ವರೆಗೆ ೭೮೯.೨ ಮಿ.ಮೀ ಮಳೆಯಾಗಬೇಕಾತ್ತು ಆಗಿದ್ದು ೪೬೯.೯ ಮಳೆಯಾಗಿದೆ. ಪಾಳಾ ಹೊಬಳಿಯಲ್ಲಿ ೬೯೪.೪ ಮಿ.ಮೀ ಮಳೆಯಾಗಬೇಕಾಗಿತ್ತು ಆಗಿದ್ದು ೫೦೩ ಮಿ.ಮೀ ಮಳೆಯಾಗಿದೆ‌ಎಂದು ಕೃಷಿ ಸಹಾಯಕ ನಿರ್ದೇಶಕ ಎಮ್.ಎಸ್.ಕುಲಕರ್ಣಿ ಪತ್ರಿಕೆಗೆ ತಿಳಿಸಿದ್ದಾರೆ

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...