ಮುಂಡಗೋಡ  ಶಾಲೆಗೆ ಬೀಗಜಡಿದು ಪ್ರತಿಭಟನೆ 

Source: sonews | By sub editor | Published on 7th September 2018, 11:02 PM | Coastal News | Don't Miss |

ಮುಂಡಗೋಡ ; ಶಾಲೆಗೆ ಬೀಗ ಜಡಿದು ಪ್ರತಿಭಟನೆಗಿಳಿದ ಶಾಲಾ ಮಕ್ಕಳ ಪಾಲಕರು ಹಾಗೂ ಎಸ್.ಡಿ.ಎಮ್.ಸಿ ಅಧ್ಯಕ್ಷ, ಸದಸ್ಯರು, ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಎಮ್.ರಾಜಪ್ಪ ಭರವಸೆ ಕೊಟ್ಟನಂತರ ಪ್ರತಿಭಟನೆ ಹಿಂಪಡೆದು ಶಾಲೆಗೆ ಹಾಕಲಾಗಿದ್ದ ಪ್ರತಿಯೊಂದು ವರ್ಗದ ಬೀಗಗಳನ್ನು ತೆರೆದು ಪಾಠಗಳು ಆರಂಭವಾದ ಘಟನೆ ತಾಲೂಕಿನ ಕೆಂದಲಗೇರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.
ಶಾಲೆಗೆ ಮಂಜೂರಿಯಾದ 8 ಹುದ್ದೆಗಳಲ್ಲಿ ಕಳೆದ ಒಂದೇರಡು ತಿಂಗಳ ಹಿಂದೆ ಮುಂಬಡ್ತಿ ಪಡೆದ ಎರಡು ಶಿಕ್ಷಕರು ವರ್ಗಾವಣೆಗೊಂಡಿದ್ದರು. ಹಾಗೂ ಒಬ್ಬ ಶಿಕ್ಷಕಿಯನ್ನು ಕುಸೂರ ಶಾಲೆಗೆ ನಿಯೋಜನೆ ಮಾಡಲಾಗಿದೆ. ಮೂರು ಖಾಯಂ ಶಿಕ್ಷಕರು ಹಾಗೂ 3 ಅತಿಥಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಿರೆ ಶಾಲೆಯಲ್ಲಿ ಮಕ್ಕಳಿಗೆ ಗಣೀತ, ವಿಜ್ಞಾನ ವಿಷಯಗಳಿಗೆ ಹಾಗೂ ನಲಿಕಲಿ ವರ್ಗಕ್ಕೆ ಶಿಕ್ಷಕ  ಇರದೇ ಇರುವುದರಿಂದ ಮಕ್ಕಳು ಆಯಾ ವಿಷಯಗಳಲ್ಲಿ ಹಿನ್ನಡೆ ಸಾಧಿಸುತ್ತಿರುವುದನ್ನು ಅರಿತ ಶಾಲಾ ವಿದ್ಯಾರ್ಥಿಗಳ ಪಾಲಕರು ತಮಗೆ ಶಾಲೆಗೆ ಅಗತ್ಯವಿರುವ ಶಿಕ್ಷರನ್ನು ನೇಮಿಸಬೇಕು ಎಂದು ಕಳೆದ 15 ದಿನಗಳ ಹಿಂದೆಯೇ ಬಿ.ಇ.ಒ ರವರಿಗೆ ಮನವಿಯ ಸಲ್ಲಿಸಿ ಶಿಕ್ಷಕರನ್ನು ನೆಮಿಸದೇ ಇದ್ದರೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಲಾಗಿತ್ತು.  ಒಂದು ವಾರದಲ್ಲಿ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಬಿ.ಇ.ಒ ರಾಜಪ್ಪ ಹೇಳಿದ್ದರು ಎಂದು ಹೇಳಲಾಗಿದ್ದು ಮಾತಿನ ಪ್ರಕಾರ ನಡೆಯದೇ ಇರುವುದನ್ನು ಖಂಡಿಸಿ ಶುಕ್ರವಾರ ಎಸ್.ಡಿ.ಎಮ್.ಸಿ ಅಧ್ಯಕ್ಷರು ಸದಸ್ಯರು  ಸೇರಿದಂತೆ ಗ್ರಾಮಸ್ಥರು ಶಾಲೆಯ ಪ್ರತಿಯೊಂದು ಕೊಣೆಗೆ ಬೀಗಜಡಿದು ಪ್ರತಿಭಟನೆಗಿಳಿದರು.
ಸ್ಥಳಕ್ಕಾಗಮಿಸಿದ ಬಿಇಒ ರಾಜಪ್ಪ 7 ದಿನಗಳೊಗಾಗಿ ಅಗತ್ಯವಿರುವ ಶಿಕ್ಷಕರನ್ನು ನೇಮಿಸಲಾಗುವುದು ಎಂದು ಲಿಖಿತವಾಗಿ ಭರವಸೆ ಕೊಟ್ಟನಂತರ ಶಾಲೆಯ ಕೋಣೆಗಳಿಗೆ ಹಾಕಲಾಗಿದ್ದ ಬೀಗಗಳು ತೆರೆದು ಪಾಠಗಳು ಪ್ರಾರಂಭಗೊಂಡವು. ಶಾಲೆಯ ತರಗತಿಯ ಬೀಗಗಳು ತೆರೆದಾಗ ಸುಮಾರು 10.30 ಗಂಟೆಯಾಗಿತ್ತು
ಈ ಸಂದರ್ಭದಲ್ಲಿ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷ ಬಸವರಾಜ ಜಾಧವ, ಉಪಾಧ್ಯಕ್ಷೆ ಸೀತಾ ಸಿದ್ದಿ ಸದಸ್ಯರುಗಳಾದ ಚನ್ನಬಸಯ್ಯಾ ಹಿರೇಮಠ, ರೇಣುಕಾ ಮೇಟಿ, ಗೀತಾ ಹಿರೇಮಠ, ಮಾಬುಬಿ ಲಕ್ಷ್ಮೇಶ್ವರ, ಎಲ್ಲ ಸದಸ್ಯರು ಹಾಗೂ ಗ್ರಾ.ಪಂ.ಅಧ್ಯಕ್ಷ ಬಸಯ್ಯಾ ನಡುವಿನಮನಿ, ಗ್ರಾಮಸ್ಥರಾದ ಮಂಜುನಾಥ ಹಿರೇಮಠ, ಗುರುಪಾದಯ್ಯಾ ಹಿರೇಮಠ, ವಿಠಲ ಗಾಂವಕರ, ಕಲ್ಲಪ್ಪ ಬಡಿಗೇರ, ಮೌಲಾಲಿ ನದಾಫ, ಬಸಯ್ಯಾ ಹಿರೇಮಠ, ಈರಪ್ಪ ಹೆಬ್ಬಳ್ಳಿ, ಬೀಬಿಜಾನ ಅತ್ತಾರ  ಗ್ರಾಮದ ಹಿರಿಯರು ಮುಂತಾದವರು ಉಪಸ್ಥಿತರಿದ್ದರು.
 

ಮುಖ್ಯೋಧ್ಯಪಾಕ, ಗಣೀತ, ವಿಜ್ಞಾನ ಹಾಗೂ ನಲಿಕಲಿಗೆ ಶಿಕ್ಷಕರನ್ನು ನೇಮಿಸಿದರೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ದೊರೆತಂತಾಗುತ್ತದ್ದೆ. ನಲಿಕಲಿಗೆ ಖಾಯಂ ಶಿಕ್ಷಕರನ್ನು ನೇಮಿಸಬೇಕು ಅತಿಥಿ ಶಿಕ್ಷಕರು ಬೇಡ.
ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸದಸ್ಯರು

ಶಾಲೆಗೆ  ಮುಖ್ಯೋಧ್ಯಪಾಕರನ್ನು ಹಾಗೂ ವಿದ್ಯಾರ್ಥಿಗಳಿಗೆ ಅಗತ್ಯವಿರುವ ವಿಷಯಗಳ ಭೋದನೆ ಮಾಡುವ ಶಿಕ್ಷಕರನ್ನು ನೇಮಿಸಲಾಗುವುದು ಹಾಗು ಕುಸೂರಗೆ ನಿಯೋಜನೆಗೊಂಡ ಶಿಕ್ಷಕಿಯನ್ನು ನೇಮಿಸಲಾಗುವುದು
ಡಿ.ಎಮ್.ಬಸವರಾಜಪ್ಪ ಕ್ಷೇತ್ರ ಶಿಕ್ಷಣಾಧಿಕಾರಿ

Read These Next