ಪ್ಲಾಸ್ಟಿಕ್ ಬಳಕೆ ಅವ್ಯಾಹತ : ಕರ್ತವ್ಯ ಮರೆತಿರುವ ಇಲಾಖೆಗಳು : ಎಚ್ಚರಗೊಳ್ಳದ ಜನರು

Source: S O News service | By Staff Correspondent | Published on 4th December 2016, 10:42 PM | Coastal News | Don't Miss |

ಮುಂಡಗೋಡ : ಪ್ಲಾಸ್ಟಿಕ್‌ಗಳ ಬಳಕೆ ನಿಷೇಧಿಸಿ ಮೂರು ತಿಂಗಳು ಕಳೆದರೂ ಮುಂಡಗೋಡ ತಾಲೂಕಿನಲ್ಲಿ ಪ್ಲಾಸ್ಟೀಕ್ ನಿಷೇಧ ನಿಯಮ ಪರಿಣಾಮಕಾರಿಯಾಗಿ  ಜಾರಿಯಾಗದಿರುವುದು ಕಂಡು ಬರುತ್ತಿದೆ. 
ಸಂಬಂದ ಪಟ್ಟ ಇಲಾಖೆಗಳು ಪರಿಸರಕ್ಕೆ ಹಾನಿಯಾಗುವ ಪ್ಲಾಸ್ಟಿಕ್‌ಗಳನ್ನು ಬಳಸಬೇಡಿ ಇದರಿಂದ ಜನರಿಗೆ, ಪ್ರಾಣಿಪಕ್ಷೀಗಳಿಗೆ  ಮಾರಕ ಎಂದು ಘಂಟಾಘೋಷವಾಗಿ ಹೇಳಿ ಸಾರ್ವಜನಿಕ ಕಾರ್ಯಕ್ರಮ ಹಮ್ಮಿಕೊಂಡು ಬಟ್ಟೆಯ ಕೈ ಚೀಲಗಳನ್ನು ಉಪಯೋಗಿಸಿ ಎಂದು ಕೆಲ ಅಂಗಡಿಗಳಿಗೆ ತೆರಳಿ ಪ್ಲಾಸ್ಟಿಕ್ ಬ್ಯಾಗ್ ಗಳನ್ನು ಜಪ್ತುಮಾಡಿ ಆರಂಭ ಶೂರತ್ವ ತೋರಿಸಿಕೊಂಡಿದ್ದರು ಇವರ ದಾಳಿಯಿಂದ ಕಿರಾಣಿ, ಸ್ವೀಟ್, ಬೇಕರಿ, ಚಿಕನ್, ಮಟನ್, ಮೀನು ಹಾಗೂ ಇನ್ನಿತರ ವ್ಯಾಪಾರಸ್ಥರು ಮತ್ತು ಸಂತೆದಿನದ ವ್ಯಾಪಾರಸ್ಥರು ಮೆತ್ತಗಾಗಿದ್ದರು ಇದ್ದಂತಹ ಪ್ಲಾಸ್ಟಿಕ್ ಕ್ಯಾರಿಬ್ಯಾಗಳನ್ನು ಮುಚ್ಚಿಟ್ಟಿದ್ದರು. ಕೆಲ ಅಂಗಡಿಕಾರರು ಬಟ್ಟೆ ಚೀಲಗಳನ್ನು ಗ್ರಾಹಕರಿಗೆ ನೀಡುತ್ತಾ ವ್ಯಾಪಾರ ಮಾಡುತ್ತಾ ನಡೆದಿದ್ದರು
ಪ್ಲಾಸ್ಟಿಕ್ ನಿಷೇಧದಿಂದ ಪಟ್ಟಣದ ಜನತೆ ಕೆಲಮಟ್ಟಿಗೆ ಬಟ್ಟೆಯ ಕೈ ಚೀಲಗಳನ್ನು ಬಳಸುತ್ತಿದ್ದು ಕಂಡು ಬಂದಿತು.  ಜವಾಬ್ದಾರಿ ಹೊಂದಿರುವ ಇಲಾಖೆಗಳ ಅಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೆ ಇವತ್ತೂ ಮುಂಡಗೋಡ ಪಟ್ಟಣ ಪ್ಲಾಸ್ಟಿಕ್ ರಹಿತವಾಗಿ ಎಲ್ಲರ ಕೈಯಲ್ಲಿ ಬಟ್ಟೆ ಚೀಲಗಳು ಇರುತ್ತಿದ್ದವು  ಎಂಬುದು ಪ್ರಜ್ಞಾವಂತರ ಮಾತು.
ಪ್ಲಾಸ್ಟಿಕ್ ಗಳ ಬಳಕೆ ಏಕೆ ಮಾಡುತ್ತಿರಿ ಅಂತಾ ವ್ಯಾಪಾರಸ್ಥರನ್ನು ಕೇಳಿದರೆ ಏನ್ರೀ ಮಾಡುವುದು ಪ್ಲಾಸ್ಟಿಕ್ ಕ್ಯಾರಿಬ್ಯಾಗ್ ಇಲ್ಲಂದ್ರ ಗ್ರಾಹಕರು ವಸ್ತುಗಳನ್ನು ಬಿಟ್ಟು ಹೋಗತ್ತಾರ, ಕೆಲ ಗ್ರಾಹಕರು ಯಾರ್ರಿ ಏನ್‌ಮಾಡ್ತಾರ ನಾವ್ ನೋಡುಕೊಂತಿವಿ ಪ್ಲಾಸ್ಟಿಕ್ ಕೊಡ್ರಿ ಅಂತಾರ. ಮೊದಲು ಗ್ರಾಹರೇ ಈ ಬಗ್ಗೆ ಜಾಗ್ರತೆ ವಹಿಸಿ ನಾವು ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು. ಮನೆಯಿಂದ ಬರುವಾಗ ಬಟ್ಟೆ ಚೀಲಗಳನ್ನು ತರುವುದು ಕಲಿತರೆ ನಾವ್ಯಾಕೆ ಪ್ಲಾಸ್ಟಿಕ್ ಚಿಲಗಳನ್ನು ಇಡ್ತಿವಿ ಹೇಳ್ರೀ ಆಂ ಎಂಬ ಮಾತು ವ್ಯಕ್ತವಾಗುತ್ತಿದೆ
ಕಳೆದ ಅಗಸ್ಟ ೧೫ ರಿಂದ ದೇಶಾದ್ಯಂತ ಪ್ಲಾಸ್ಟಿಕ್ ವಸ್ತುಗಳ ಬಳಕೆ ಉತ್ಪಾದನೆ ಹಾಗೂ ಸರಬರಾಜುಗಳನ್ನು  ನಿಷೇಧಿಸಲಾಯಿತು ಮುಖ್ಯವಾಗಿ ಪರಿಸರಕ್ಕೆ ಮಾರಕವಾಗುವ ಕ್ಯಾರಿಬ್ಯಾಗಗಳನ್ನು, ಬ್ಯಾನರಗಳು, ಫ್ಲೇಕ್ಸಗಳು, ಲೋಟ ತಟ್ಟೆ ಮುಂತಾದ  ವಸ್ತುಗಳು ನಿಷೇಧಿತ ಪಟ್ಟಿಯಲ್ಲಿ ಸೇರ್ಪಡೆಗೊಂಡವು. ಪ್ಲಾಸ್ಟಿಕ್ ಬಳಕೆ ನಡೆಯುತ್ತಿರುವುದು ಕಂಡುಬಂದಲ್ಲಿ ಬಳಕೆದಾರರ ವಿರುದ್ದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಬಹುದೆಂದು ಹಾಗೂ ದಂಡ ವಿಧಿಸಬಹುದೆಂದು ತಿಳಿಸಲಾಗಿತ್ತು ಆದರೆ ಪಟ್ಟಣದಲ್ಲಿ ಇನ್ನೂ ಶೇ ೮೦ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಪ್ಲಾಸ್ಟಿಕ್ ವಸ್ತುಗಳು ಬಳಕೆಯಾಗುತ್ತಿದೆ ಎಂಬ ಮಾಹಿತಿ ಇದೆ. 
ಪ.ಪಂ ಮುಂಡಗೋಡ ವ್ಯಾಪ್ತಿಯ ಪ್ಲಾಸ್ಟಿಕ್ ನಿಷೇಧಕ್ಕೆ ಪಣತೊಟ್ಟ ಪ.ಪಂ ನಿಷೇಧಿತ ಪ್ಲಾಸ್ಟಿಕ್ ಬಳಸದಂತೆ ನೋಡಿಕೊಂಡಿತ್ತು ಆದರೆ ಈ ಕಾರ್ಯದಲ್ಲಿ ಭಾಗಿಯಾಗಿ ಪ್ಲಾಸ್ಟಿಕ್ ನಿಷೇಧ ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೆಗೊಳಿಸಬೇಕಿದ್ದ ಆಹಾರ ಮತ್ತು ನಗರ ಸರಬರಾಜು ಇಲಾಖೆ, ಕಂದಾಯ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಇತರೆ ಇಲಾಖೆಗಳು ಸಹಕಾರ ನೀಡದೇ ಇರುವುದರಿಂದ ಮುಂಡಗೋಡ ಪಟ್ಟಣದಲ್ಲಿ ಪ್ಲಾಸ್ಟಿಕ್ ನಿಯಂತ್ರಣಕ್ಕೆ ತಡೆಯಾಗಿದೆ ಎಂಬ ಮಾತು ಕೇಳಿ ಬರುತ್ತಿದೆ
ಸಂಬಂದ ಪಟ್ಟ ಅಧಿಕಾರಿಗಳಿಗೆ ಜಿಲ್ಲಾ ಮಟ್ಟದ ಅಧಿಕಾರಿಗಳು ಲೆಫ್ಟ್‌ರೈಟ್ ತೆಗೆದುಕೊಂಡರೆ ಪ್ಲಾಸ್ಟಿಕ್ ಬಳಕೆ ನಿಯಂತ್ರಣಕ್ಕೆ ಬರಬಹುದು ಎಂಬುದು ಪ್ರಜ್ಞಾವಂತರ ಮಾತು
ಇಲಾಖೆಗಳಿಗೆ ಪ್ಲಾಸ್ಟಿಕ್ ಎಲ್ಲಲ್ಲಿದೆ ಅನ್ನುವುದು ಹೇಳಬೇಕಾಗಿಲ್ಲ ಈಗಲಾದರು ಪ್ಲಾಸ್ಟಿಕ್ ನಿಷೇಧಿಸುವ ನಿಟ್ಟಿನಲ್ಲಿ ನಡೆದುಕೊಂಡರೆ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಬಟ್ಟೆಚೀಲಗಳು ಉಪಯೋಗಿಸುವುದನ್ನು ಕಂಡುಕೊಳ್ಳಬಹುದು ಹಾಗೆಯೇ ಬಿಟ್ಟರೆ ಪ್ಲಾಸ್ಟಿಕ್ ನಿಷೇಧ ಕನಸಿನ ಮಾತಾಗಬಹುದು
ವರದಿ  : ಎನ್.ಎ.ತಾಡಪತ್ರಿ

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...