ಮುಂಡಗೋಡ :  ನವವಿವಾಹಿತ ದಂಪತಿ ನೇಣಿಗೆ ಶರಣು

Source: sonews | By sub editor | Published on 24th August 2017, 6:27 PM | Coastal News | State News | Incidents | Don't Miss |

ಮುಂಡಗೋಡ : ಕೇವಲ ಎರಡು ತಿಂಗಳ ಹಿಂದೆಷ್ಟೇ  ವಿವಾಹವಾಗಿದ್ದ ನವದಂಪತಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡ ಬಳಿಯ ಬಾಚಣಿಕೆ ಡ್ಯಾಂ ಪಕ್ಕ ಆತ್ಮಹತ್ಯ ಮಾಡಿಕೊಂಡಿರುವ ದಾರುಣ ಘಟನೆ ನಡೆದಿದೆ. 
ಹುಬ್ಬಳ್ಳಿ ಹೊಸೂರ ನಿವಾಸಿಗಳಾದ ವೆಂಕಟೇಶ ಅಲಿಯಾಸ್ ಜೋಗಿ ರಾಮರೆಡ್ಡಿ ಮಲ್ಲಸಮುದ್ರ(೨೮) ಹಾಗೂ ಆತನ ಪತ್ನಿ ಅಶ್ವಿನಿ(೨೫) ಬಾಚಣಿಕೆ ಡ್ಯಾಂ ಬಳಿಯ ನರ್ಸರಿಯಲ್ಲಿ ಮರಕ್ಕೆ ಒಂದೇ ಪ್ಲಾಸ್ಟೀಕ್ ಹಗ್ಗದಿಂದ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ನತದೃಷ್ಟ ನವದಂಪತಿಯಾಗಿದ್ದಾರೆ. ಆತ್ಮಹತ್ಯಮಾಡಿಕೊಂಡಿರುವ ವಿಷಯ ಗುರುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.
ಹುಬ್ಬಳ್ಳಿಯಿಂದ ಟಾಟಾ ಟವೇರಾ ನಂ ಕೆ.ಎ.೨೫ ಸಿ.೮೭೦೪ ವಾಹನದಲ್ಲಿ ಬಂದಿದ್ದ ವೆಂಕಟೇಶ, ಅಶ್ವಿನಿ ವಾಹನವನ್ನು ಘಟನಾ ಸ್ಥಳದಲ್ಲಿ ಬಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆಗೆ ಮುನ್ನ ನಮ್ಮ ಸಾವಿಗೆ ನಾವೆ ಕಾರಣ ಎಂದು ಡೆತ್ ನೋಟ ಬರೆದಿಟ್ಟಿದ್ದು ಆಯ್.ಲವ್,ಯೂ ಅಶ್ವಿನಿ ಎಂಬ ಬರಹವು ಇದೆ 
ಆತ್ಮಹತ್ಯೆ ಮಾಡಿಕೊಂಡಿರುವ ನವ ದಂಪತಿ ಉದ್ಯೋಗಿಗಳೇ, ಒಂದೇ ಜಾತಿಯವರೇ, ಅನ್ಯಕೊಮಿನವರೆ, ಆತ್ಮಹತೆ ಮಾಡಿಕೊಂಡಿರುವ ಈ ಕಠೋರ ನಿರ್ಧಾರದ ಹಿಂದೆ ಮದುವೆಗೆ ಎರಡು ಕುಟುಂಬಗಳವರ ವಿರೋಧವಿತ್ತೇ ಇದೊಂದು ಆತ್ಮಹತ್ಯೆಯೋ ಪೂರ್ವನಿಯೋಜಿತ ಕೊಲೆಯೋ ಎಂಬ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಘಟನಾ ಸ್ಥಳಕ್ಕೆ ಮುಂಡಗೋಡ ಪಿ.ಎಸ್‌ಆಯ್ ಲಕ್ಕಪ್ಪ ನಾಯಕ್ ಮತ್ತು ಸಿಬ್ಬಂದಿ ಭೇಟಿನೀಡಿ ಪರಿಶೀಲಿಸಿದ್ದು ತನಿಖೆ ನಡೆದಿದೆ
 

Read These Next

ಕಾರವಾರ: ಚುನಾವಣೆ ಯಶಸ್ಸಿಗೆ ಸಹಕರಿಸಿ ಸರ್ವರಿಗೂ ಧನ್ಯವಾದ ತಿಳಿಸಿದ ಜಿಲ್ಲಾಧಿಕಾರಿ ಡಾ.ಹರೀಶ್‍ಕುಮಾರ್ ಕೆ.

ಉತ್ತರ ಕನ್ನಡ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಶಾಂತಿಯುತ ಮತದಾನಕ್ಕೆ ಸಹಕರಿಸಿ ಮತದಾನ ಪ್ರಮಾಣ ಹೆಚ್ಚಿಸಿದ ಸರ್ವರಿಗೂ ಜಿಲ್ಲಾ ...

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...