ಅಗಷ್ಟ ಅಂತ್ಯದೊಳಗೆ  ಶೇ.೧೦೦ರಷ್ಟು ಮನೆ ವಿತರಣೆ-ಶಿವರಾಮ ಹೆಬ್ಬಾರ

Source: sonews | By Staff Correspondent | Published on 28th July 2017, 6:52 PM | Coastal News | Don't Miss |

ಮುಂಡಗೋಡ; ಅಗಷ್ಟ ಅಂತ್ಯದೊಳಗೆ  ನನ್ನ ಕ್ಷೇತ್ರದಲ್ಲಿ  ಅವಶ್ಯವಿರುವ ಶೇ.೧೦೦ರಷ್ಟು ಮನೆಗಳನ್ನು ವಿತರಣೆ ಮಾಡಲಾಗುವುದು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದ್ದಾರೆ.
ಮುಂಡಗೋಡನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಶೇ.೧೦೦ರಷ್ಟು ಮನೆಗಳನ್ನು ನೀಡಲಾಗುವುದು ಈಗಾಗಲೆ ತಾಲೂಕಿನಲ್ಲಿ  ಸಾಕಷ್ಟು ಮನೆಗಳನ್ನು ನೀಡಲಾಗಿದೆ. ಮತ್ತಷ್ಟು ಅವಶ್ಯವಿರುವ ಮನೆಗಳನ್ನು ನೀಡಲಾಗುವುದು. ಹಾಗೂ ತಾಲೂಕಿನ ವಿವಿಧ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ಸರ್ಕಾರದಿಂದ ೩೫ರಿಂದ ೪೦ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲಿ ಈ ಎಲ್ಲ ಕಾಮಗಾರಿಗಳಿಗೆ ಶಿಲಾನ್ಯಾಸ ಕಾರ್ಯ ನಡೆಯಲಿದೆ ಎಂದು ಹೇಳಿದರು.
ಪಟ್ಟಣದಲ್ಲಿ ಜಾಗ ಇದ್ದವರಿಗೆ ಮನೆ ಕೊಟ್ಟರೆ ಮುಗಿಯುವುದಿಲ್ಲ, ಜಾಗ ಇಲ್ಲದವರೂ ಚಿಂತೆ ಮಾಡುವ ಅವಶ್ಯಕತೆಯಿಲ್ಲ ಅದಕ್ಕೂ ಒಂದು ಯೋಜನೆ ರೂಪಿಸಲಾಗಿದೆ ಆಯೋಜನೆಯೂ ಕೂಡ ಕೊನೆಯ ಹಂತದಲ್ಲಿದೆ ಇನ್ನೊಂದು ತಿಂಗಳಲ್ಲಿ ಅದು ಪೈನಲ್ ಆಗುತ್ತದೆ ಎಂದರು.
ಶೀಘ್ರದಲ್ಲಿಯೆ ಬನವಾಸಿ ಬ್ಲಾಕ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಬ್ರಹತ್ ಸಮಾವೇಶ ನಡೆಸಲಾಗುವುದು ಈ ಸಮಾವೇಶಕ್ಕೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮಾಣಿಕ್ಯಂ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಭಾಗವಹಿಸಲಿದ್ದು ಅದೆ ದಿನ ಮಧ್ಯಾಹ್ನ ಮುಂಡಗೋಡದ ಕಾರ್ಯಕರ್ತರೊಂದಿಗೆ ಸಮಾಲೋಚನೆ ನಡೆಸಲಾಗುವುದು ಎಂದರು.
ಇನ್ನೂ ಮುಂಡಗೋಡ ಜನರ ಬಹು ದಿನಗಳ ಎಲ್ಲರ ನಿರೀಕ್ಷೆ ಮುಂಡಗೋಡ ಹೊಸ ಬಸ್ ನಿಲ್ದಾಣ ಅದಕ್ಕಾಗಿ ಹೈಟೆಕ್ ಬಸ್ ನಿಲ್ದಾಣವನ್ನಾಗಿ ಮಾಡಲು ೩ಕೋಟಿ ರೂ. ಹಣ ಬಿಡುಗಡೆಯಾಗಿದೆ ಸದ್ಯದಲ್ಲಿಯೆ ಈ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿಗೌಡ ಪಾಟೀಲ, ಎಪಿ‌ಎಂಸಿ ಅಧ್ಯಕ್ಷ ದೇವು ಪಾಟೀಲ, ಪಟ್ಟಣ ಪಂಚಾಯತ್ ಅಧ್ಯಕ್ಷ ರಪೀಕ್ ಇನಾಂದಾರ, ತಾ.ಪಂ.ಸದಸ್ಯ ಜ್ಞಾನದೇವ ಗುಡಿಯಾಳ, ಪ.ಪಂ.ಸದಸ್ಯ ರಾಮಚಂದ್ರ ಪಾಲೇಕರ, ಮುಂತಾದವರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...