“ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ”

Source: sonews | By Staff Correspondent | Published on 19th November 2017, 7:06 PM | Coastal News |

ಮುಂಡಗೋಡ: ಲೊಯೋಲ ವಿಕಾಸ ಕೇಂದ್ರವು ಸಮಾಜ ಸೇವೆಯ ಜೊತೆಗೆ ಮಕ್ಕಳ ಶಿಕ್ಷಣಕ್ಕೆ ,ಮಕ್ಕಳ ಆರೋಗ್ಯಕ್ಕೆ ಹೆಚ್ಚು ಪ್ರೋತ್ಸಾಹವನ್ನು ಕೊಟ್ಟಿದೆ ಎಂದು ಶಿಕ್ಷಕ ಸತೀಶ ಕಾನಡೆ ಹೇಳಿದರು.
ಅವರು ತಾಲೂಕಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂದಲಗಿ ಗ್ರಾಮದಲ್ಲಿ ಎನ್,ಕೆ,ಜೆ,ಇ & ಸಿ ಎಸ್, ಲೊಯೋ¯ ವಿಕಾಸ ಕೇಂದ್ರ ಮುಂಡಗೋಡ, ಜ್ಯೋತಿ ಆರೋಗ್ಯ ಕೇಂದ್ರ ಹಾಗೂ ಚೈಲ್ಡ್ ಫಂಡ್ ಇಂಡಿಯಾ ಸಂಯುಕ್ತ ಆಶ್ರಯದಲ್ಲಿ  
ಮಕ್ಕಳಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರದ ಮುಖ್ಯಅತಿಥಿಗಳಾಗಿ ಮಾತನಾಡಿದರು
ಕಾರ್ಯಕ್ರಮದ ಅದ್ಯಕ್ಷತೆಯನ್ನು ವಹಿಸಿ ಮಾತನಾಡಿದ ಫಾ|| ಫ್ರಾನ್ಸಿಸ್ ಬಾಲರಾಜ್ ಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಎರ್ಪಡಿಸಿರುವುದು ಸಂತಸ ತಂದಿದೆ ಶಾಲೆಯ ಶಿಕ್ಷಕರ ಬಳಗ ಈ ಶಿಬಿರವನ್ನು ಮಾಡಲು ಮುಕ್ತ ಕಂಠದಿಂದ ಒಪ್ಪಿ ಮಕ್ಕಳ ಆರೋಗ್ಯದ ಹಿತದೃಷ್ಠಿಯಿಂದ ಸಹಕಾರ ನೀಡಿದ್ದಾರೆ. ಪ್ರತಿಯೊಂದು ಮಕ್ಕಳು ಈ ಶಿಬಿರದ ಪ್ರಯೋಜನ ಪಡೆಯುವುದರ ಜೊತೆಗೆ ಒಳ್ಳೆಯ ಆರೋಗ್ಯವಂತ  ಮಕ್ಕಳಾಗಿ ಉತ್ತಮ ಶಿಕ್ಷಣ ಪಡೆಯಬೇಕು ಎಂದು ಹೇಳಿದರು.
ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಡಾ|| ಸಿ, ಮೇರಿ ಮಾರ್ಟಿಸ್ ಮಾತನಾಡಿ ಮಕ್ಕಳು ಯೋಗ, ಧ್ಯಾನ, ಪೌಸ್ಟಿಕ ಆಹಾರ, ಸ್ವಚ್ಛತೆ ಬಗ್ಗೆ ಗಮನ ಹರಿಸಿದರೆ ಯಾವುದೆ ರೋಗಗಳಿಗೆ ತುತ್ತಾಗದೆ ಆರೋಗ್ಯದಿಂದ ಇರಬಹುದು ಎಂದು ಹೇಳಿದರು.
ಫ್ರೌಡ ಶಾಲೆಯ ಮುಖ್ಯೋಧ್ಯಾಪಕ  ಮಂಜುನಾಥ ಯಾಜಿ ಮಾತನಾಡಿ ಅವರು ಮಾತನ್ನಾಡುತ್ತಾ ಆರೋಗ್ಯ ಮತ್ತು ಶಿಕ್ಷಣ ಒಂದು ನಾಣ್ಯದ ಎರಡು ಮುಖಗಳು ಇದ್ದಂತೆ ಮಕ್ಕಳು ಆರೋಗ್ಯವನ್ನು ಪ್ರೀತಿಸಬೇಕು. ಪರಿಸರ ಸ್ವಚ್ಛವಾಗಿಡಬೇಕು ಹಾಗೂ ಸುದ್ಧವಾದ ನೀರು, ಆಹಾರ, ಗಾಳಿಯನ್ನು ಸೇವಿಸುತ್ತಾ ಬಂದರೆ ಸಧೃಡ ಆರೋಗ್ಯವಂತರಾಗಿರಲು ಸಾದ್ಯ ಎಂದು ಹೇಳಿದರು.


ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಶ್ರೀಮತಿ ಕವಿತಾ ಕಳಸೂರು ಮಾತನಾಡಿದರು
ಈ ಶಿಬಿರದಲ್ಲಿ ಢಾ|| ಮೇರಿ ಮಾರ್ಟಿಸ್ ಮತ್ತು ಡಾ|| ಹ್ಯೂ ಭಾಗವಹಿಸಿ 121 ಮಕ್ಕಳಿಗೆ ಆರೋಗ್ಯವನ್ನು  ತಪಾಸಣೆ ಮಾಡಿ ಉಚಿತ ಔಷಧಿ ನೀಡಿದರು. ಶಾಲೆಯ ಶಿಕ್ಷಕರಾದ ಮಂಜುನಾಥ ನಾಯ್ಕ, ಕಾರ್ಕಳ ಸರ್, ಕಳಸಗೇರಿ ಮೇಡಂ ಹಾಗೂ ಲೊಯೋಲ ವಿಕಾಸ ಕೇಂದ್ರದ ಸಿಬ್ಬಂದಿ ವರ್ಗದವರಾದ ಅಂತೋನಿ ಪ್ರೇಮ್‍ಕುಮಾರ್, ಮರ್ಲಿನ್, ಸ್ಮೀತಾ ಎಮ್, ಕುಮಾರಿ ನಾಗರತ್ನಾ ಛಾಯಪ್ಪ, ಸುಶೀಲಾ, ಕುಮಾರಿ ಶೈಲಾ ಶ್ರೀ ಯಲ್ಲಪ್ಪ ಹಾಜರಿದ್ದರು, ಶಾಲೆಯ ಮಕ್ಕಳಾದ ತನುಜ ಸಂಗಡಿಗರು ಪ್ರಾರ್ಥಿಸಿದರು.  ನಾಗರಾಜ ಬಾರ್ಕಿ ನಿರೂಪಿಸಿದರು. ಭರಮಣ್ಣ ಚಕ್ರಸಾಲಿ ಸ್ವಾಗತಿಸಿದರು. ಕುಮಾರಿ ದೀಪಾ ವಂದಿಸಿದರು.

Read These Next

ಭಟ್ಕಳದಲ್ಲಿ ಭಾವೈಕ್ಯತೆ ಮತ್ತು ಧರ್ಮ ಸಮನ್ವಯತೆ ಸಾರುವ ಚೆನ್ನಪಟ್ಟಣ ಶ್ರೀಹನುಮಂತ ದೇವರ ರಥೋತ್ಸವ ಸಂಪನ್ನ

ಭಟ್ಕಳ: ತಾಲೂಕಿನ ಐತಿಹಾಸಿಕ ಚೆನ್ನಪಟ್ಟಣ ಶ್ರೀ ಹನುಮಂತ ದೇವರ ಭಾವೈಕ್ಯದ ಬ್ರಹ್ಮರಥೋತ್ಸವ ಬುಧವಾರ ಸಂಜೆ ಅತ್ಯಂತ ಸಡಗರ ...