ಕುಷ್ಟರೋಗವು ಬಹು ಔಷಧಿ ಚಿಕಿತ್ಸೆಯಿಂದ ನಿವಾರಣೆಯಾಗುತ್ತದೆ : ತಹಶೀಲ್ದಾರ ಅಶೋಕ ಗುರಾಣಿ

Source: sonews | By Staff Correspondent | Published on 12th October 2017, 10:20 PM | Coastal News | Don't Miss |

ಮುಂಡಗೋಡ : ಕುಷ್ಟ ರೋಗ ಪತ್ತೆ ಕಾರ್ಯಕ್ಕೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಮುಂಡಗೋಡ ತಹಶೀಲ್ದಾರ ಅಶೋಕ ಗುರಾಣಿ ಹೇಳಿದರು.
ಅವರು ತಾಲೂಕ ಆಸ್ಪತ್ರೆಯ ಸಭಾ ಭವನದಲ್ಲಿ ಏರ್ಪಡಿಸಿದ ತಾಲೂಕಿನಲ್ಲಿ ೧೪ ದಿನ ನಡೆಯುವ ಕುಷ್ಟರೋಗ ಪತ್ತೆ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿದರು.
ರಾಜ್ಯದ ಉತ್ತರಕನ್ನಡ, ಧಾರವಾಡ, ಬಳ್ಳಾರಿ, ರಾಯಚೂರ ಚಾಮರಾಜ ನಗರದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುವ ಕುಷ್ಟರೋಗ ನಿವಾರಣೆ ಮಾಡುವ ಸದ್ದುದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ
ಕುಷ್ಟರೋಗವು ಬಹು‌ಔಷಧಿ ಚಿಕಿತ್ಸೆಯಿಂದ ನಿವಾರಣೆ ಆಗುವ ರೋಗವಾಗಿದ್ದು ನಾವು ಈ ರೋಗದ ಪತ್ತೆಗೆ ಆಶಾ ಕಾರ್ಯಕರ್ತರು ಪ್ರತಿ ಮನೆ ಮನೆಗಳಿಗೆ ಭೇಟಿ ನೀಡಿ ಪರಶೀಲಿಸುವರು ರೋಗದ ಪತ್ತೆಯ ಅವಶ್ಯವೇನಿಸಿದರೆ ತಾಲೂಕ ಆರೋಗ್ಯ ಇಲಾಖೆ ಪರಿಕ್ಷೆಗೆ ಒಳಪಡಿಸಲಾಗುವುದು ಎಂದರು ಎಲ್ಲರನ್ನು ಜಾಗ್ರತೆಗೊಳಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸೋಣ ಎಂದರು
ತಾಲೂಕಾ ಆರೋಗ್ಯಾಧಿಕಾರಿ ಡಾ. ರಮೇಶ ಮಾತನಾಡಿ ಕುಷ್ಟರೋಗವು ಬಹು‌ಔಷಧಿಯಿಂದ ಗುಣವಾಗುವ ರೋಗವಾಗಿದೆ ಈ ಕುರಿತು ಭಯಪಡುವ ಅವಶ್ಯಕತೆ ಇಲ್ಲಾ. ಮೃಷ್ಠಗಳ ಹಿಂದೆ, ಕೈಗಳಲ್ಲಿ ಬಿಲ್ಲೆ ಆ ಬಿಲ್ಲೆಗಳು ತಾಮ್ರದ ಬಣ್ಣ ಹೊಂದಿದ್ದರೆ, ಆ ಭಾಗದಲ್ಲಿ ಚುಚ್ಚಿದರೆ ನೋವು ಆಗದ್ದಿದ್ದರೆ ಜೊಮ್ಮು ಹಿಡಿಯುತ್ತಿದ್ದರೆ ತಕ್ಷಣ ಆಸ್ಪತ್ರೆಗೆ ಬಂದು ಪರಿಕ್ಷೀಸಿಕೊಂಡು ರೋಗದ ಕುರಿತು ಮಾಹಿತಿ ಪಡೆಯಬಹುದಾಗಿದೆ ಎಂದರು 
ಈ ಸಂದರ್ಭದಲ್ಲಿ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ, ಸಿಡಿಪಿ‌ಒ ಬೈಲ್‌ಪತ್ತಾರ, ತಾಲೂಕ ಆರೋಗ್ಯ ಶಿಕ್ಷಣಧಿಕಾರಿ  ಪ್ರಮೋದ ಪಡ್ತಿ ಹಾಗೂ ಪಟ್ಟಣ ಶೆಟ್ಟಿ, ವಲಯ ಅರಣ್ಯಾಧಿಕಾರಿ, ಸಮಾಜ ಕಲ್ಯಾಣಧಿಕಾರಿ ಅಶೋಕ ಪವಾರ, ಬಿಸಿ‌ಎಮ್ ವಿಸ್ತೀರಣಾಧಿಕಾರಿ ಸೇರಿದಂತೆ ಮುಂತಾದವರು ಇದ್ದರು.
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...