ಮುಂಡಗೋಡ ಉಪವಲಯದಲ್ಲಿ ಹುಲಿ ಇರುವಿಕೆ ಸುಳಿವಿಲ್ಲ-ಜಿ.ಆರ್.ಶಶಿಧರ

Source: sonews | By Staff Correspondent | Published on 10th February 2018, 12:43 AM | Coastal News | Don't Miss |

ಮುಂಡಗೋಡ : ಕಳೆದ ತಿಂಗಳು ಮುಂಡಗೋಡ ಹಾಗೂ ಕಾತೂರ ಅರಣ್ಯ ವಲಯದ ಪ್ರದೇಶದಲ್ಲಿ ಎಂಟು ದಿನಗಳ ಕಾಲ ಹುಲಿ ಗಣತಿ ಕಾರ್ಯಮುಗಿದಿದ್ದು ತಾಲೂಕಿನಲ್ಲಿ ಹುಲಿ ಇರುವ ಬಗ್ಗೆ ಯಾವುದೇ ಸುಳಿವು ಕಂಡು ಬಂದಿಲ್ಲ. 

ಚಿರತೆ ಓಡಾಡಿರುವ ಹೆಜ್ಜೆ ಗುರುತು ವಡಗಟ್ಟಾ ಹಾಗೂ ಬ್ಯಾನಳ್ಳಿ ಅರಣ್ಯ ಪ್ರದೇಶದಲ್ಲಿ ಕಂಡು ಬಂದಿದೆ ಎಂದಿದೆ ಅರಣ್ಯ ಇಲಾಖೆ ಯ ಮೂಲಗಳಿಂದ ತಿಳಿದು ಬಂದಿದೆ
ಕಳೆದ ತಿಂಗಳ ಕೊನೆಯಲ್ಲಿ ಎಂಟು ದಿನಗಳ ಕಾಲ ಅರಣ್ಯ ಇಲಾಖೆಯವರು  ಮುಂಡಗೋಡ ಹಾಗೂ ಕಾತೂರ ಅರಣ್ಯವಲಯದಲ್ಲಿ ಪ್ರತ್ಯಕವಾಗಿ ಕೈಗೊಂಡ ಹುಲಿ ಗಣತಿ ಕಾರ್ಯ ಮುಗಿದಿದ್ದು, ಹುಲಿ ಹೊರತು ಪಡಿಸಿ ಚಿರತೆ , ಕಾಡಾನೆ, ಜಿಂಕೆ, ಮುಳ್ಳು ಹಂದಿ ನರಿ, ಕರಡಿ, ಹಾಗೂ ಕೆಂಪು ಹಾಗೂ ಕಪ್ಪು ಮುಖದ ಮಂಗಗಳು ಇರುವುದು ಕಂಡು ಬಂದಿದೆ 

ಕಾಡು ಹಂದಿ ಇರುವುದು ಸರ್ವೇಕಾರ್ಯದಲ್ಲಿ ದಾಖಲಾಗಿದೆ. ತಾಲೂಕಿನಲ್ಲಿ ವಡಗಟ್ಟಾ ಹಾಗೂ ಬ್ಯಾನಳ್ಳಿ ಅರಣ್ಯ ಪ್ರದೇಶದಲ್ಲಿ ಚಿರತೆಯ ಹೆಜ್ಜೆ ಗುರುತು ಮೂಡಿದ್ದು ಗುಂಜಾವತಿ ಅರಣ್ಯದಲ್ಲಿ ಆನೆಗಳು ಒಡಾಡಿರುವ ಮಾಹಿತಿಯನ್ನು ಕಲೆ ಹಾಕಲಾಗಿದೆ. ಇಂದೂರ ಅರಣ್ಯ ಪ್ರದೇಶದಲ್ಲಿ ಜಿಂಕೆಗಳು ಗುಂಪು ಗುಂಪಾಗಿ ಜಲಮೂಲಗಳ ಸನಿಹ ಹುಲ್ಲು ತಿನ್ನುತ್ತಿರುವುದು, ಕಾಡು ಹಂದಿಗಳು ಓಡಾಟ ನಡೆಸಿರುವುದು ಅರಣ್ಯ ಇಲಾಖೆಯ ಕ್ಯಾಮರಾದಲ್ಲಿ ಸೆರೆಯಾಗಿದೆ
ಅರಣ್ಯ ಪ್ರದೇಶದಲ್ಲಿ ಪ್ರಾಣಿಗಳ ಇರುವಿಕೆಯ ನಿಖರವಾದ ಮಾಹಿತಿ ಕಲೆಹಾಕಲು ಗಣತಿಗೆ ಹಗಲು ಮತ್ತು ರಾತ್ರಿಗೆ ಪೂರಕವಾದ  10 ಕ್ಯಾಮರಾಗಳನ್ನು ಅರಣ್ಯ ವ್ಯಾಪ್ತಿಯಲ್ಲಿ ಅಳವಡಿಸಲಾಗಿತ್ತು 

ಹಗಲು ಮತ್ತು ರಾತ್ರಿಗೆ ಪೂರಕವಾಗಿದ್ದ ಕ್ಯಾಮರಾಗಳಲ್ಲಿ ಕೆಲವಡೆ ಜಿಂಕೆಗಳು ಸೇರಿದಂತೆ ಇನ್ನಿತರ ಪ್ರಾಣಿಗಳ ಚಲನವಲನ ಸೆರೆಯಾಗಿದೆ ಎಂದು ಎಸಿಎಫ್ ಜಿ.ಆರ್.ಶಶಿಧರ ತಿಳಿಸಿದ್ದಾರೆ,
ಪ್ರಾಣಿಗಳ ಚಲನ ವಲನ ಗುರುತಿಸಲು ದಟ್ಟವಾದ ಅರಣ್ಯ ಪ್ರದೇಶ, ಜಲಮೂಲಗಳ

ಸನಿಹ ಹಾಗೂ ದಿನವೂ  ಒಡಾಡುವ ದಾರಿ ಎಂದು ಗುರುತಿಸಿರುವ ಕಡೆಗಳಲ್ಲಿ ಕ್ಯಾಮರಾಗಳನ್ನು ಅಳವಡಿಸಲಾಗಿತ್ತು, ಇದಲ್ಲದೆ ಕೆಲವಂದು ಗುಣಲಕ್ಷಣಗಳ ಮೇಲೆ ಪ್ರಾಣಿಗಳ ಇರುವಿಕೆ ಅಥವಾ ಓಡಾಡಿರುವುದನ್ನು ಕಂಡು ಹಿಡಿಯಲಾಗಿದೆ. ಎಂದು ಹೇಳಿದರು
ಹೆಜ್ಜೆ ಗುರುತು, ಗಿಡಮರಗಳ ಬುಡದಲ್ಲಿ ಪರಚಿದಂತೆ ಗೇರೆ ಮೂಡಿರುವುದು, ಲದ್ದಿ ಹಾಕಿರುವುದು, ಉಚ್ಚೆ ವಾಸನೆ ಸೇರಿದಂತೆ ಪ್ರಾಣಿಗಳ ಇನ್ನಿತರ ಗುಣ ಲಕ್ಷಣಗಳನ್ನು ಆಧರಿಸಿ ನಿಖರವಾದ ಗಣತಿ ಕಾರ್ಯ ಕೈಗೊಳಲಾಗಿದೆ. ತಾಲೂಕಿನಲ್ಲಿ ಹುಲಿ ಇರುವ ಅಥವಾ ಓಡಾಡಿರುವ ಗುರುತು ಪತ್ತೆಯಾಗಿಲ್ಲ ಎಂದು ಅವರು ತಿಳಿಸಿದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...