ಜೆಡಿ‌ಎಸ್ ರವೀಂದ್ರ ನಾಯ್ಕ್ ಹೇಳಿಕೆಗೆ : ಪ. ಪಂ. ಕಾಂಗ್ರೆಸ್ ಸದಸ್ಯರ ಖಂಡನೆ

Source: sonews | By Staff Correspondent | Published on 21st September 2017, 7:39 PM | Coastal News | Don't Miss |

ಮುಂಡಗೋಡ : ಜೆಡಿ‌ಎಸ್ ನ ರವೀಂದ್ರ ನಾಯಕ್ ಪಟ್ಟಣ ಪಂಚಾಯತ್ ಆಡಳಿತ ಕಮಿಟಿಯವರ ಕುರಿತು ನೀಡಿರುವ ಪತ್ರಿಕಾ ಹೇಳಿಕೆಯನ್ನು ಪಟ್ಟಣ ಪಂಚಾಯತ್ ಅಧ್ಯಕ್ಷ ಮಹ್ಮದರಫೀಕ ಇನಾಮದಾರ ಅಧ್ಯಕ್ಷತೆಯಲ್ಲಿ ಕಾಂಗ್ರೆಸ್ ತೀವ್ರವಾಗಿ ಖಂಡಿಸಿ ಪತ್ರಿಕಾ ಹೇಳಿಕೆಯನ್ನು ನೀಡಿದೆ.
ಪತ್ರಿಕಾ ಹೇಳಿಕೆಯಲ್ಲಿ ಪಟ್ಟಣ ಪಂಚಾಯತ್ ಮುಂಡಗೋಡ ಆಡಳಿತ ಕಮೀಟಿಯವರ ಬಗ್ಗೆ ಜೆಡಿ‌ಎಸ್ ನ ರವೀಂದ್ರ ನಾಯ್ಕ ರ ಪತ್ರಿಕಾ ಹೇಳಿಕೆಯನ್ನು ಖಂಡಿಸುತ್ತಾ ಪಟ್ಟಣ ಪಂಚಾಯತ್ ಮುಂಡಗೋಡ ಬಗ್ಗೆ ಟೀಕೆ ಮಾಡುವ ಮೊದಲು ಮುಂಡಗೋಡ ಪಟ್ಟಣವನ್ನು ಒಂದು ಸರಿ ಕಣ್ಣ್‌ತುಂಬಾ ನೋಡಿ ಆರೋಪ ಮಾಡಬೇಕು ಪಕ್ಷದ ಕಚೇರಿಯಲ್ಲಿ ಕೂತು ಚುನಾವಣೆ ದೃಷ್ಠಿಯಿಂದ ಆರೋಪ ಮಾಡುವುದು ಸರಿ ಇಲ್ಲದ ಮಾತು ಮತ್ತು ಜೆಡಿ‌ಎಸ್ ಪಕ್ಷದಿಂದ ಐದು ಜನ ಸದಸ್ಯರು ಪಕ್ಷದಿಂದ ಬೇಸತ್ತು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತ ಹಾಗೂ ನಮ್ಮ ಶಾಸಕರು ತಮ್ಮ ಕ್ಷೇತ್ರಕ್ಕೆ ಹಾಗೂ ಪಟ್ಟಣಕ್ಕೆ ಮಾಡಿದ  ಅಭಿವೃದ್ದಿ, ಬಡವರ ದಿನ ದಲಿತರ ಅಲ್ಪಸಂಖ್ಯಾತರ ಬಗ್ಗೆ ಕಾಳಜಿ ಮತ್ತು ಪಟ್ಟಣ ಪಂಚಾಯತಕ್ಕೆ ಸಾಕ್ಷಷ್ಟು ಅನುದಾನ ತಂದಿದ್ದು ಶಾಸಕರ ಜನಪರ ಕಾರ್ಯ ನೋಡಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ ವಿನಹಃ ಅಧಿಕಾರಕ್ಕಾಗಿ ಅಲ್ಲಾ ನಮ್ಮಪಕ್ಷ ಅಧಿಕಾರಕ್ಕೆ ಬಂದ ಮೇಲೆ ಮುಂಡಗೋಡ ಪಟ್ಟಣದ ಅಭಿವೃದ್ದಿ, ಆಶ್ರಯ ಸಾಲ ಮನ್ನಾ,  ೨೪*೭ ಕುಡಿಯುವ ನೀರಿನ ಯೋಜನೆ,  ಶುದ್ಧ ಕುಡಿಯುವ  ನೀರಿನ ಘಟಕಗಳು, ಮುಖ್ಯ ರಸ್ತೆಗಳ ಫುಟ್‌ಪಾತ್  ಹೈಮಾಸ್ಕ, ಎಲ್.ಇ.ಡಿ. ಲೈನಿನ ವ್ಯವಸ್ಥೆ, ಮನೆ ಮನೆ ಕಸ, ಅಟೋ ಟಿಪ್ಪರಗಳು, ಸಮುದಾಯ ಭವನಗಳು, ಸುಲಭ ಶೌಚಾಲಯಗಳು ಚರಂಡಿಗಳು ಸಿಮೆಂಟ ರಸ್ತೆಗಳು ಗೃಹ ಭಾಗ್ಯ ಯೋಜನಗೆಗಳು ಹೀಗೆ ಹಲವಾರು ಯೋಜನೆ ಮತ್ತು ಮೂಲಭೂತ ಸೌಕರ್ಯ ಒದಗಿಸುವ ಸಲುವಾಗಿ ನಮ್ಮ ಶಾಸಕರು ೧೦ ಕೋಟಿ ವಿಷೇಶ ಅನುದಾನ ೨೪*೭ ನೀರಿನ ಸೌಲಭ್ಯಕ್ಕಾಗಿ ೧೮ ಕೋಟಿ ಅನುದಾನವನ್ನು ತಂದು ನಮ್ಮ ನಗರವನ್ನು ಸುಂದರ ನಗರವನಾಗಿಸಿದ್ದಾರೆ   
ನಗರೋತ್ಥಾನ-೩ಕ್ಕೆ ೨೦೦.೦೦ ಲಕ್ಷ, ಎಸ್.ಎಫ್.ಸಿ ವಿಷೇಶ ಅನುದಾನ ೫೫೦.೦೦ ಲಕ್ಷ, ಪೌರಕಾರ್ಮಿಕರ ಗೃಹಭಾಗ್ಯಕ್ಕೆ ೯೦.೦೦ ಲಕ್ಷ, ಕುಡಿಯುವ ನೀರಿನ ಬರ ಪರಿಹಾರಕ್ಕೆ ೮೪.೭೨ ಲಕ್ಷ, ೨೪*೭ ಕುಡಿಯವ ನೀರಿನ ವಿತರಣಾ ಜಾಲಕ್ಕೆ೧೨೫೦.೦೦ಲಕ್ಷ, ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ೨೭.೦೦ ಲಕ್ಷ ರೂ (೮೩೮ ಶೌಚಾಯಲಗಳ), ಕೊಳಚೆ ನಿರ್ಮೂಲನಾ ಮಂಡಳಿಯಿಂದ ೬೦.೦೦ ಲಕ್ಷ, ವಿಸೇಷ ಘಟಕ ಯೋಜನೆ ೧೦೦ ಲಕ್ಷ, ವಾಜಪೇಯೆ ವಸತಿ ಯೋಜನೆಯಲ್ಲಿ ೪೩೬ ಫಲಾನುಭವಿಗಳಿದ್ದಾರೆ ಹಾಗೂ ಡಾ|| ಬಿ.ಆರ್.ಅಂಬೇಡ್ಕರ ವಸತಿ ಯೋಜನೆಯಲ್ಲಿ ೭೪ ಫಲಾನುಭವಿಗಳು ಇದ್ದಾರೆ ಒಟ್ಟಾರೆಪಟ್ಟಣ ಪಂಚಾಯತ ಮುಂಡಗೋಡ ಆಡಳಿತ ಕಮೀಟಿಯವರು ಜನಪರ ಕಾರ್ಯ ಹಾಗೂ ಮೂಲಭೂತ ಸೌಕರ್ಯ ಒದಗಿಸುವಲ್ಲಿ ಪೂರ್ಣ ಸಫಲವಾಗಿದ್ದು  ರವೀಂದ್ರ ನಾಯಕ್ ರುವ ರು ಸುಳ್ಳು ಸುದ್ದಿ ಮಾಡಿ ಚುನಾವಣಾ ಪ್ರಚಾರದ ಸಲುವಾಗಿ ಪತ್ರಿಕಾ ಹೇಳಿಕೆ ಕೊಟ್ಟಿರುತ್ತಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ರಫೀಕ ಇನಾಮದಾರ, ಉಪಾಧ್ಯಕ್ಷ ಫಕ್ಕಿರಪ್ಪ ಅಂಟಾಳ, ಸ್ಥಾಯಿ ಸಮೀತಿ ಅಧ್ಯಕ್ಷ ರಾಬರ್ಟ ಲೊಬೋ, ಸಂಜು ಪಿಶೆ, ಲತೀಫ ನಾಲಬಂಧಮುನೇಶ್ವರ ಕೊರವರ, ಸುಶೀಲಾ ಲಮಾಣಿ, ರಾಮಬಾಯಿ ಕುದಳೆ, ಸಿಂದಗಿಬಾಯಿ, ಶಕುಂತಲಾ ತಳವಾರ, ನಾಮನಿರ್ದೇನ ಸದಸ್ಯರಾದ ಲಿಂಗರಾಜ ಕನ್ನೂರ, ರಾಮಣ್ಣ ಪಾಲೇಕರ, ಹಿರಿಯರಾದ ರಾಮಣ್ಣ ಕುನ್ನೂರ, ಶೈನಾಜ ಕದಡಿ, ಅಲ್ಪಸಂಖ್ಯಾತ ತಾಲೂಕ ಅಧ್ಯಕ್ಷ ಮಹ್ಮದಗೌಸ ಮಕಾನದಾರ, ರಜಾ ಪಠಾಣ,ಜೈನು ಬೆಂಡಿಗೇರಿ, ಆಸೀಫ ಮಕಾನದಾರ
 
Read These Next

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...

ಭಟ್ಕಳ ತಾಲೂಕಿನಲ್ಲಿ ಸರಣಿ ಕಳ್ಳತನ; ತಲೆಗೆ ಹೆಲ್ಮೆಟ್ ಹಾಗೂ ಮುಖಕ್ಕೆ ಮಾಸ್ಕ್ ಧರಿಸಿ ಲಕ್ಷಾಂತರ ರೂ ಲೂಟಿ

ಭಟ್ಕಳ: ನಗರದ ರಂಗನಕಟ್ಟೆಯಲ್ಲಿರುವ ವಿನಾಯಕ ಸಹಕಾರಿ ಸಂಘ ಸೇರಿದಂತೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂದು ಅಂಗಡಿ ಹಾಗೂ ...