ಕನ್ನಡ ನಾಡಿನ ಸೇವೆಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು : ಪಾಟೀಲ

Source: sonews | By sub editor | Published on 8th November 2017, 7:42 PM | Coastal News |

ಮುಂಡಗೋಡ : ಜಯ ಕರ್ನಾಟಕ ಸಂಘಟನೆಯು ರಾಜ್ಯದ ದೊಡ್ಡ ಸಂಘಟನೆ. ಕನ್ನಡ ನಾಡಿನ ಸೇವೆಗಾಗಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು. ಅದು ನಮ್ಮ ಕರ್ತವ್ಯ ಎಂದು ಜಿ.ಪಂ.ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ ಹೇಳಿದರು.

ಜಯ ಕರ್ನಾಟಕ ಸಂಘಟನೆಯ ಮುಂಡಗೋಡ ತಾಲೂಕಾ ಘಟಕದವರು ಪ್ರಥಮ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವದ ಹಿನ್ನೆಲೆಯಲ್ಲಿ ಮುಂಡಗೋಡದ ವಿವೇಕಾನಂದ ಬಯಲು ರಂಗಮಂದಿರದಲ್ಲಿ ವಿಶೇಷ ಜಾದೂ ಪ್ರದರ್ಶನ ಮತ್ತು ಮನರಂಜನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಾಜಿ ಶಾಸಕ ವಿ.ಎಸ್.ಪಾಟೀಲ ಮಾತನಾಡಿ, ಕನ್ನಡ ಭಾಷೆಯ ಉಳಿವಿಗಾಗಿ ಮತ್ತು ಅಭಿವೃದ್ದಿಗಾಗಿ ಜಯ ಕರ್ನಾಟಕದಂತಹ ಕನ್ನಡ ಸಂಘಟನೆಗಳು ಸಾಕಷ್ಟು ಪ್ರಯತ್ನ ನಡೆಸುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರಾದ ಲೋಕಧ್ವನಿ ಸಂಪಾದಕರಾದ ಪಿ.ಎಸ್.ಸದಾನಂದ, ರಾಜ್ಯ ಪ್ರಶಸ್ತಿ ಪುರಸ್ಕøತ ಪತ್ರಕರ್ತರಾದ ರಾಜಶೇಖರ ನಾಯ್ಕ, ಕ.ಸಾ.ಪ. ತಾಲೂಕಾ ಅಧ್ಯಕ್ಷ ನಾಗೇಶ ಪಾಲನಕರ, ಜಿಲ್ಲಾ ಪ್ರಶಸ್ತಿ ಶಿಕ್ಷಕ ರಾಜಪ್ಪ ಹುಲಸೋಗಿ, ಅಂಚೆ ವಿತರಕ ಚಂದ್ರಶೇಖರ ಕುಸನೂರ ಅವರನ್ನು ಸನ್ಮಾನಿಸಲಾಯಿತು.

ಜಯ ಕರ್ನಾಟಕದ ತಾಲೂಕಾ ಅಧ್ಯಕ್ಷ ಪಾಂಡುರಂಗ ಪಾಟೀಲ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ದಿಲೀಪ ಆರ್ಗೆಕರ, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸುಭಾಸ ಗುನಗಿ ಮಾತನಾಡಿದರು. ಕ.ಸಾ.ಪ. ತಾಲೂಕಾ ಅಧ್ಯಕ್ಷ ನಾಗೇಶ ಪಾಲನಕರ, ಮುಖಂಡರಾದ ವಾಯ್.ಪಿ.ಪಾಟೀಲ, ಡಿ.ಎಫ್.ಮಡ್ಲಿ, ತಾಲೂಕಾ ಸಂಚಾಲಕ ಕರಿಯಣ್ಣ ಪಾಟೀಲ, ಮುಷ್ತಾಕಲಿ ಲತೀಫನವರ್, ಪ್ರಮೋದ ಸಣ್ಣಮನಿ, ಅರುಣ ಗೊಂಧಳೆ, ಚರಂತಯ್ಯ ಹಿರೇಮಠ, ತಾಲೂಕಾ ಯುವ ಘಟಕದ ಅಧ್ಯಕ್ಷ ಸಚಿನ ನಾಯ್ಕ, ಯಾಕೂಬ ಯಲಿವಾಳ ಮುಂತಾದವರಿದ್ದರು. ಆರಂಭದಲ್ಲಿ ದಿನೇಶ ವೆರ್ಣೇಕರ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ನಂತರ ವಂದಿಸಿದರು.

ನಂತರ ನಡೆದ ಜಾದೂ ಪ್ರದರ್ಶನ ಮತ್ತು ಮನರಂಜನಾ ಕಾರ್ಯಕ್ರಮ ಜನಮನ ಸೆಳೆಯಿತು.
      
 

Read These Next