ಸದೃಡ ಸಮಾಜ ನಿರ್ಮಾಣಮಾಡುವಲ್ಲಿ ವಿಕಲಚೇತನರ ಪಾತ್ರ ಅವಶ್ಯ : ಗುರಾಣಿ 

Source: sonews | By Staff Correspondent | Published on 22nd March 2018, 12:17 AM | Coastal News | Don't Miss |

ಮುಂಡಗೋಡ : ಸದೃಡ ಸಮಾಜ ನಿರ್ಮಾಣವಾಡುವಲ್ಲಿ ವಿಕಲಚೇತನರ ಪಾತ್ರ ಅವಶ್ಯವಾಗಿದೆ. ಆದ್ದರಿಂದ ವಿಕಲಚೇತನರು ಮತದಾನ ದಂತಹ ಪವಿತ್ರವಾದ ಕಾರ್ಯದಲ್ಲಿ ಅವಶ್ಯವಾಗಿ ಭಾಗವಹಿಸಿ ತಮಗೆ ಒಳ್ಳೆಯವನೆಂದು ಪರಿಗಣಿಸಲ್ಪಟ್ಟ ಜನನಾಯಕನನ್ನು ಆರಿಸಿ ತಮ್ಮ ಜವಾಬ್ದಾರಿ ಪೂರೈಸುವುದು ಅವಶ್ಯವಾಗಿದೆ ಎಂದು ತಹಶೀಲ್ದಾರ ಅಶೋಕ ಗುರಾಣಿ ಹೇಳಿದರು

ಅವರು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ತಾಲೂಕು ಪಂಚಾಯಿತಿ ಸಭಾ ಭವನದಲ್ಲಿ ಹಮ್ಮಿಕೊಂಡಿರುವ  ತಾಲೂಕಿನ ವಿಕಲಚೇತನರ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಮಾತಾಡಿದರು

18 ವಯಸ್ಸು ಪೂರ್ಣವಾದ ವಿಕಲಚೇತನರು ತಮ್ಮ ವಯಸ್ಸಿನ ದಾಖಲೆ ನೀಡಿ ಮತದಾನ ಮಾಡಬೇಕು. ಮತ ಚಲಾಯಿಸಲು ಬಂದಂತಹವರಿಗೆ   ಮತದಾನ ಕೇಂದ್ರಗಳಲ್ಲಿ ಯಾವುದೇ ತೊಂದರೆ ಬರದಂತೆ ತಮ್ಮನ್ನು ನೋಡಿಕೊಳ್ಳಲಾಗುವುದರು ಎಂದು ಧೈರ್ಯ ತುಂಬಿದರು. ಈ ಮತದಾನದ ಅವಶ್ಯವನ್ನು ಅರಿತು ಹೆಚ್ಚಿನ ಸಂಖ್ಯೆಯಲ್ಲಿ ವಿಕಲಚೇತನರು ಭಾಗವಹಿಸಬೇಕು ಎಂದರು 

18 ವರ್ಷ ಮೇಲ್ಪಟ್ಟ ವಿಕಲಚೇತನರ ಪಟ್ಟಿಯನ್ನು ಜಿಲ್ಲಾಡಳಿತ ನಿರ್ದೇನದ ಮೇರೆಗೆ ತಯಾರಮಾಡಲಾಗಿದೆ ಎಂದು ಅಕ್ಷರ ದಾಸೋಹ ಅಧಿಕಾರಿ ಮಂಜುನಾಥ ಸಾಳೊಂಕೆ ಹೇಳಿದರು  ಕೇಂದ್ರ ಚುನಾವಣಾ ಆಯೋಗ ವಿಶೇಷ ಕಾಳಜಿ ವಹಿಸಿ ವಿಕಲಚೇತನರಿಗೆ ಮತದಾನ ಮಾಡಲು ಮೂಲಸೌಕರ್ಯ ಒದಗಿಸಿದೆ. ಮತದಾನದ ಸ್ಥಳದಲ್ಲಿ ಮತಚಲಾಯಿಸಲು ಅನುಕೂಲಮಾಡಲಾಗಿದೆ. ತಾವೇಲ್ಲರೂ ಮತಚಲಾಯಿಸಿ ತಮ್ಮ ಕರ್ತವ್ಯ ನಿರ್ವಸಿದರೆ ಸರಕಾರ ಹಮ್ಮಿಕೊಂಡಿರುವ ಕಾರ್ಯಕ್ರಮಕ್ಕೆ ಒಂದು ಅರ್ಥ ಬರುತ್ತದೆ ಎಂದರು

ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ದಿ ಇಲಾಖೆ ಅಧಿಕಾರಿ ಹುಸೇನಿ .ಬಿ ಬೇಲಪತ್ತಾರ ಮಾತನಾಡಿ  ಪ್ರಜಾಪ್ರಭುತ್ವದ ನಮ್ಮ ದೇಶದಲ್ಲಿ ಪ್ರಜೆಗಳೆ ತಮ್ಮ ಪ್ರಭುವನ್ನು ಆರಿಸುವಂತ ಹಕ್ಕು ನೀಡಲಾಗಿದೆ. ಮತದಾನ ಮಾಡಿ ತಮ್ಮ ನಾಯಕನನ್ನು ಆರಿಸಬೇಕು. ಮತದಾನ ಮಾಡುವುದು ನಮ್ಮ ಮೂಲಭೂತ ಹಕ್ಕು.  ನಮಗೆ ನೀಡಿದಂತಹ ಹಕ್ಕನ್ನು ಕಳೆದುಕೊಳ್ಳಬಾರದು ಎಂದರು 

ಸ್ಪಂದನ ಸಂಸೆಯ ಅಧ್ಯಕ್ಷ ಡಿ.ಜೆ.ಕುಲಕರ್ಣಿ, ಅಂಧ ಮಕ್ಕಳ ಶಾಲೆಯ ಮುಖ್ಯಸ್ಥ ಆಲದಕಟ್ಟಿ ವಿಕಲಚೇತನ ಸಂಘದ ತಾಲೂಕಾಧ್ಯಕ್ಷ ಮಹ್ಮದಗೌಸ ಪಲ್ಲೇದವರ, ಕಾರ್ಯನಿರ್ವಹಣಾಧಿಕಾರಿ  ಹಾಲಸಿದ್ದಪ್ಪ ಪೂಜೇರಿ, ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯಾ ಹಾಗು ತಾಲೂಕಿನ ವಿಕಲಚೇತನರು ಉಪಸ್ಥಿತರಿದ್ದರು ಮೋಹನ ಪಾಟೀಲ ನೀರೂಪಿಸಿದರು ಇದಕ್ಕೂ ಮುನ್ನ ಪ್ರವಾಸಿ ಮಂದಿರದಿಂದ ವಿಕಲಚೇನರ ಮತದಾನ ಜಾಗೃತಿ ಜಾಥಾವು ಬೀದಿ ನಾಟಕ ಪ್ರದರ್ಶಿಸುತ್ತಾ ಘೋಷಣೆಳೊಂದಿಗೆ ಸಭಾ ಆರ್ಯಕ್ರಮ ನಡಯುವ ಸ್ಥಳ  ತಲುಪಿತು ವಿಕಲಚೇತನರಿಗಾಗಿ ರಂಗೋಲಿ, ಚಿತ್ರಕಲೆ ಹಾಗೂ ಕವನ ವಾಚಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...