ಅಣಬೆ ಬೇಸಾಯದ ಕುರಿತು ತೋಟಗಾರಿಕೆ ಇಲಾಖೆ ಯಿಂದ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಮಹಿಳಾ ಸಂಘಗಳಿಗೆ ಮಾಹಿತಿ 

Source: sonews | By Staff Correspondent | Published on 10th February 2018, 1:12 AM | Coastal News |

ಮುಂಡಗೋಡ : ಪೌಷ್ಟಿಕಾಂಶದ ಪಡೆದು ಸದೃಡರಾಗಿ  ಹಾಗೂ ಅರ್ಥಿಕವಾಗಿ ಬಲಗೊಳ್ಳಲು ಅಣಬೆ ಬೇಸಾಯಕ್ಕೆ ಒತ್ತು ನೀಡುವಂತೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗಾರ್ಜುನ ಗೌಡ  ಕರೆ ನೀಡಿದರು 
ಅವರು ತಾಲೂಕಿನ ನಂದಿಪುರ ಗ್ರಾಮದಲ್ಲಿ ಹಮ್ಮಿಕೊಂಡಿರುವ ಅಣಬೆ ಬೇಸಾಯದ ಪ್ರಾತ್ಯಕ್ಷತೆ ಕುರಿತು  ವಿವಿಧ ಸ್ತ್ರೀ ಸಂಘಗಳ ಸದಸ್ಯರಿಗೆ ಮಾಹಿತಿ ನೀಡಿದರು
ಅಣಬೆ ಬೇಸಾಯದಿಂದ ಬರುವ ಅಣಬೆ ಬೆಳೆಯನ್ನು ಸ್ತ್ರೀಯರು ಉಪಯೋಗಿಸುವುದರಿಂದ ಪೌಷ್ಟಿಕಾಂಶ ಪಡೆದು ಆರೋಗ್ಯವಂತರಾಗುತ್ತಾರೆ ಅಲ್ಲದೆ ಹೆಚ್ಚಿನ ಅಣಬೆಗಳನ್ನು ಮಾರಾಟ ಮಾಡಿ ಅರ್ಥಿಕವಾಗಿ ಸದೃಡರಾಗಬಹುದು ಎಂದ ಅವರು ಅಣಬೆ ಬೇಸಾಯ ಮಾಡುವ ಇಚ್ಚಿಸುವ ಫಲಾನುಭವಿಗಳಿಗೆ ಶಿವಮೊಗ್ಗಾದಿಂದ ಬಿಜಗಳನ್ನು ತರಸಿಕೊಡಲಾಗುವುದು  ಎಂದರು ತೋಟಗಾರಿಕೆ ಇಲಾಖೆಯಿಂದ 50 ಸ್ತ್ರೀ ಸಂಘದ ಸದಸ್ಯರಿಗೆ ಪ್ರಯೋಜನ ಪಡೆಯಲು ಅವಕಾಶ ಇದೆ ಎಂದರು
ಕಾರ್ಯಕ್ರಮದಲ್ಲಿ ನಂದಿಪುರ ಸ.ಕಿ.ಪ್ರಾ.ಶಾಲೆಯಲ್ಲಿ ಅಣಬೆ ಬೇಸಾಯದ ಕುರಿತು ಪ್ರಾತ್ಯಕ್ಷತೆಯ ಚಲನ ಚಿತ್ರ ಪ್ರದರ್ಶಿಸಲಾಯಿತು. ಈ ಪ್ರಾತ್ಯಕ್ಷತೆಯ ಚಿತ್ರದ ಬೆಳೆಯ ಕುರಿತು ಸಮಗ್ರ ಮಾಹಿತಿ ಭಾಗವಹಿಸದಂತ ಮಹಿಳೆಯರು ಪಡೆದರು
ಸುಮಾರು 90 ಕ್ಕೂ ಅಧಿಕ ವಿವಿಧ ಸ್ತ್ರೀ ಸಂಘಟನೆಗಳ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು 
ತೋಟಗಾರಿಕೆ ಇಲಾಖೆಯ ಅಧಿಕಾರಿ ಪಠಾಣ ಕೆ.ಬಿ. ಸರಕಾರದ ಯೋಜನೆಯ ಕುರಿತು ಮಾಹಿತಿ ನೀಡಿದರು
ಕಾರ್ಯಕ್ರಮದ ಉದ್ಘಾಟನೆಯನ್ನು ಕಾತೂರ ಗ್ರಾ.ಪಂ ಅಧ್ಯಕ್ಷ ಪಿರಪ್ಪ ಲಕ್ಮಾಪೂರ ಮಾಡಿದರು. ಮುಖ್ಯ ಅತಿಥಿಗಳಾಗಿ ತಾ.ಪಂ ಸದಸ್ಯ ಲಕ್ಷ್ಮೀ ಜನಗೇರಿ, ಜಿ.ಪಂ ಮಾಜಿ ಅಧ್ಯಕ್ಷ ರಾಮಕೃಷ್ಣ ಮೂಲಿಮನಿ, ನಂದಿಪುರ ಗ್ರಾಮದ ಹಿರಿಯ ಬಸವರಾಜ ಒಣಿಕೇರಿ ಮುಂತಾದವರು ಭಾಗವಹಿಸಿದ್ದರು

Read These Next

ಕಾರವಾರ: ಕುಡಿಯುವ ನೀರು ಸಮಸ್ಯೆ : ಟ್ಯಾಂಕರ್ ಮೂಲಕ ತಕ್ಷಣ ನೀರು ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಜಿಲ್ಲೆಯಲ್ಲಿ ಕುಡಿಯುವ ನೀರು ಸಮಸ್ಯೆ ಕಂಡು ಬರುತ್ತಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ತಕ್ಷಣವೇ ಸಾರ್ವಜನಿಕರಿಗೆ ಕುಡಿಯುವ ನೀರು ...

ಕಾರವಾರ: ಮತದಾನ ಜಾಗೃತಿಯ ಬೆಳಕು ಎಲ್ಲೆಡೆ ಪ್ರಕಾಶಿಸಲಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಬೆಳಕು ಕತ್ತಲನ್ನು ದೂರ ಮಾಡಿ, ಎಲ್ಲೆಡೆ ಬೆಳಕು ಮೂಡಿಸುತ್ತದೆ. ಅದೇ ರೀತಿ ಮತದಾನದ ಕುರಿತ ಜಾಗೃತಿಯ ಬೆಳಕನ್ನು ಎಲ್ಲಾ ಮತದಾರರ ...