ಮುಂಡಗೋಡ : ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾಬಾಯಿ ಫಕ್ಕಿರಪ್ಪ ಇಂಗಳಕಿ 

Source: sonews | By Sub Editor | Published on 10th August 2017, 11:36 PM | Coastal News | State News | Don't Miss |

ಮುಂಡಗೋಡ : ಬೀಟಿಶರ ದಾಸ್ಯದಿಂದ ಭಾರತವನ್ನು ವಿಮುಕ್ತಗಳೊಸಿಲು ಹೋರಾಡಿದ ಅನೇಕ ಮಹನಿಯರು. ತಮ್ಮ ಶಾಲಾ ದಿನಗಳಲ್ಲಿ ಒಬ್ಬ ಬಾಲಕಿ ದೇಶದ ಸ್ವಂತಂತ್ರ ಸಂಗ್ರಾಮದಲ್ಲಿ ಭಾಗವಹಿಸಿ ಜೈಲಿಗೆ ಹೋಗುತ್ತಾಳೆಂದರೆ ಆ ಭಾರತ ಮಾತೆಯ ಮಗಳಿಗೆ ದೇಶದ ಕುರಿತು ಎಷ್ಟು ಹೆಮ್ಮೆ ಇರಬಹುದು ಎಂದು ಊಹಿಸಬಹುದಾಗಿದೆ. ಅಂತಹ ಸ್ವಂತಂತ್ರ ಹೊರಾಟಗಾರ್ತಿ ನಮ್ಮ ಉತ್ತರಕನ್ನಡ ಜಿಲ್ಲೆ ಮುಂಡಗೋಡ ತಾಲೂಕಿನಲ್ಲಿ ಇದ್ದಾರೆ ಎಂದರೆ ಮುಂಡಗೋಡಿಗೆ ಹೆಮ್ಮೆ ವಿಷಯ. ಯಾರು ಆ ಮಹಿಳೆ ಎಂದರೆ ಅವರೆ ನಮ್ಮ ಮುಂಡಗೋಡ ಪಟ್ಟಣದ ನಂದಿಶ್ವರ ನಗರದಲ್ಲಿ ವಾಸಿಸುತ್ತಿರುವ ೯೧ ವಯಸ್ಸಿನ ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾಬಾಯಿ ಫಕ್ಕಿರಪ್ಪ ಇಂಗಳಕಿ .

೬-೨-೧೯೨೭ ರಲ್ಲಿ ಅವಿಭಿಜಿತ ಧಾರವಾಡ ಜಿಲ್ಲೆಯ  ಗದಗ ತಾಲೂಕಿನ ಕದಡಿ ಗ್ರಾಮದ ಯಮನಪ್ಪ ಹಾಗು ಚಂದವ್ವ ಕದಡಿ ದಂಪತಿಯ ಉದರದಲ್ಲಿ ಜನ್ಮವಾಯಿತು. 
ಗದಗ ಜಿಲ್ಲೆಯ ಕದಡಿ ಯವರಾದ ಮೆಟ್ರೀಕ್ ಶಿಕ್ಷಣ ಪೂರ್ಣಗೊಳಿಸಿದ ಇವರು ಶಾಲಾ ಕಲಿಯುತ್ತಿದ್ದ ವೇಳೆಯೇ ಇವರು ದೇಶದ ಭಕ್ತಿಯುಳ್ಳವರಾದ ಇವರು ಹುಬ್ಬಳ್ಳಿಯ ಆಶ್ರಮಶಾಲೆಯಲ್ಲಿ ೭ನೇ ತರಗತಿಯಲ್ಲಿದ್ದಾಗ ಚಲೆಜಾವ(ಕ್ವೀಟ್ ಇಂಡಿಯಾ) ಚಳುವಳಿಯಲ್ಲಿ ಧುಮಕಿದರು ಹಳ್ಳಿಕೇರಿ ಗುದ್ಲೇಪ್ಪ, ಮಹದೇವ ಮೈಲಾರಿ, ಕಲ್ಗೂದರಿ, ಸ್ವಾತಂತ್ರ ಹೋರಾಟ ಮಾಡಲು ಪ್ರೇರಣೆಯಾದರು.

೧೯೪೨ ರ ಚಲೇಜಾವ್ ಚಳುವಳಿಯಲ್ಲಿ ಭಾಗವಹಿಸಿ ಸ್ವಾತಂತ್ರ್ಯಕ್ಕೆ ಹೋರಾಟ ನಡೆಸಿದಾಗ ಇವರನ್ನು ಬ್ರೀಟಿಶರು ಹಿಡಿದು ಹುಬ್ಬಳ್ಳಿಯಲ್ಲಿ ೪-೫ ದಿನ ಹಾಗೂ ಧಾರವಾಡದಲ್ಲಿ ೮-೧೦ ದಿನ ಪೊಲೀಸ ಠಾಣೆಯಲ್ಲಿ ಇಟ್ಟು ನಂತರ ಬೆಳಗಾಂವ ಹಿಂಡಲಾಗ ಜೈಲಿಗೆ ಕಳುಹಿಸಲಾಯಿತು. ಸುಮಾರು ೩ ತಿಂಗಳ ಹಿಂಡಲಾಗ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿ ನಂತರ ಇವರನ್ನು ಬಿಡುಗಡೆ ಮಾಡಲಾಯಿತು ಆಗ ಲೀಲಾಬಾಯಿ ಯವರಿಗೆ ಕೇವಲ ೧೫ ವರ್ಷ. ಬಿಡುಗಡೆ ಹೊಂದಿದ ನಂತರ  ತಮ್ಮ ಮೇಟ್ರೀಕ್  ವಿದ್ಯಾಭ್ಯಾಸವನ್ನು ಪೂರ್ಣಗೊಳಸಿದರು

೧೯೪೭ ರಲ್ಲಿ  ಭಾರತದ ಏರ್ ಫೋರ್ಸ್‌ನ ಉದ್ಯೋಗಿಯಾಗಿರುವ ಧಾರವಾಡ ಜಿಲ್ಲೆ,ಕುಂದಗೋಳ ತಾಲೂಕಿನ ಇಂಗಳಕಿ ಗ್ರಾಮದ ಫಕ್ಕಿರಪ್ಪ ಇಂಗಳಕಿ ಜತೆ ಮದುವೆಯಾಯಿತು. ಒಂದು ಗಂಡು ಒಂದು ಹೆಣ್ಣು ಇವರ ಸಚಿತಾನ.  ಮಗಳು ಮಲೇಶಿಯಾದಲ್ಲಿದ್ದರೆ ಮಗ ಬ್ಯಾಂಕ್ ಉದ್ಯೋಗಿಯಾಗಿ ರಿಟಾರ್ ಮೆಂಟ್ ಆಗಿ ಮನೆಯಲ್ಲಿದ್ದಾರೆ.

ಪತಿ ಫಕ್ಕಿರಪ್ಪ ನಿವೃತಿ ಹೊಂದಿದ ನಂತರ ೧೯೭೫ ರಲ್ಲಿ ಮುಂಡಗೋಡ ತಾಲೂಕಿನ ಬಾಚಣಿಕಿ ಗ್ರಾಮದಲ್ಲಿ ಬಂದು ಇಲ್ಲಿಯ ನಿವಾಸಿಗಳಾಗಿದ್ದರು ಬಾಚಣಿಕೆ ಗ್ರಾಮದಲ್ಲಿ ತಮ್ಮ ಸ್ವಂತ ದುಡಿಮೆಯಿಂದ ತೆಗೆದುಕೊಂಡ ಹೊಲಗದ್ದೆಯನ್ನು ಮಾಡುತ್ತಾ ನಮ್ಮೆದಿ ಜೀವನ ಸಾಗಿಸುತ್ತಿದ್ದರು

೧೯೮೩ ರಲ್ಲಿ ಗಂಡನ ಸಾವಿನ ನಿಂದ ಮನೆಯ ಎಲ್ಲ ಜವಾಬ್ದಾರಿ ಇವರ ಮೇಲೆಯೇ ಬಿದ್ದಿತು ಜೈಲಿಗೆ ಹೋದ ಬಂದನಂತರ ಹುಬ್ಬಳ್ಳಿಯ ಬೆಂಗೇರಿಯಲ್ಲಿ ಸನ್ಮಾನಿಸಲಾಯಿತು ಹಾಗು ಈಗ ಮುಂಡಗೋಡ ನಲ್ಲಿ ಸನ್ಮಾನ ಮಾಡುತ್ತಾರೆ

ಜೈಲಿನಲ್ಲಿದ್ದಾಗ ಮಣಿಬೇನ್ ಪಟೇಲ್ ಉತ್ತರಭಾರತ ಸಹರಾಬಾಯಿ, ಮೃದಲಾ ನಮ್ಮ ಶೆಲ್ಲಿನ ಪಕ್ಕದಲ್ಲಿಯೇ ಇದ್ದರು ನಮ್ಮ ಜತೆ ಮಾತನಾಡುತ್ತಿದ್ದರು ಹಾಗೆಯೇ ವೀರನಗೌಡಾ ಪಾಟೀಲ ನಾಗಮಮ್ಮ ಪಾಟೀಲ ಮಾಗಡಿ ಇವರು ನಾವು ಸ್ವಾತಂತ್ರಹೊರಾಟ ಮಾಡಿ ಜೈಲಿನಲ್ಲಿದ್ದಾಗ ಅವರ ಪರಿಚಯವಾಯಿತು ನಾವು ಚಿಕ್ಕ ವಯಸ್ಸಿನಲ್ಲಿಯೇ ದೇಶಪ್ರೇಮ ಹೊಂದಿದ್ದಾರೆ ಎಂದು ನಮ್ಮನ್ನು ಮಾತನಾಡಿಸಿ ಕೊಂಡಾಡಿದರು
ಲೀಲಾಬಾಯಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೂ ಇವರಿಗೆ ಸರಕಾರದಿಂದ ಯಾವುದೇ ಜಮೀನು ಇತರೆ ಸೌಕರ್ಯಗಳು ನೀಡಲಿಲ್ಲ ಕೇವಲ ಸ್ವಾತಂತ್ರಹೋರಾಟಗಾರ್ತಿಯ ಪೆನಶನ್ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದ ಪೆನ್‌ಶನ್ ಹೊರತು ಪಡಿಸಿದರೆ ಮತ್ತ್ಯಾವದೇ ಸೌಲತ್ತು ಸರಕಾರ ನೀಡಲಿಲ್ಲ. ಸರಕಾರದಿಂದ ಯಾವುದೇ ಸನ್ಮಾನ ಇಲ್ಲಾ ಸ್ವಾತಂತ್ರ ದಿವಸ ಮಾತ್ರ ನನ್ನನ್ನು ಕರೆಯಲು ಮರೆಯುವುದಿಲ್ಲಾ ಕರೆದು ಒಂದು ಶಾಲು ಹಾರ ಒಂದು ತಾಟು ನೀಡುವುದು ಮಾತ್ರ ತಪ್ಪಲಿಲ್ಲ ಎಂದು  ತಮ್ಮ ಅಳಲನ್ನು ತೋಡಿಕೊಂಡರು

ಈವರೆಗೂ ಆಧಾರಕಾರ್ಡ್ ನೀಡಿಲ್ಲ ಹಾಗೂ ರೇಷನ್‌ಕಾರ್ಡ ರದ್ದಾಗಿ ೪-೫ ವರ್ಷಗಳು ಕಳೆದಿವೆ ಈವರೆಗೂ ರೇಶನ್ ಕಾರ್ಡ್‌ನೀಡಿಲ್ಲಾ ಎಂದು ತಮ್ಮ ದುಃಖವನ್ನು ವ್ಯಕ್ತಪಡಿಸಿದರು. 
ತಕ್ಷಣ ಆಧಾರಕಾರ್ಡ್ ನೀಡಬೇಕು, ಪಡಿತರ ಚೀಟಿ ನೀಡಬೇಕು ಸ್ವಾತಂತ್ರ್ಯ ಹೋರಾಟಗಾರರಿಗೆ ನೀಡುವ ಹೊಲ(ಗದ್ದೆ)ವನ್ನು ನೀಡಬೇಕು, ಮನೆಯನ್ನು ಕಟ್ಟಿಸಿಕೊಡಬೇಕು, ಏರ್ ಫೋರ್ಸ್‌ನಲ್ಲಿ ಸೇವೆ ಸಲ್ಲಿಸಿದ ನನ್ನ ಗಂಡನಿಗೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ಎಂದು ಲೀಲಾಬಾಯಿ ಇಂಗಳಕಿ ತಿಳಿಸಿದ್ದಾರೆ.
 

*ಚಿತ್ರ ವರದಿ: ನಜೀರುದ್ದಿನ ತಾಡಪತ್ರಿ


 

Read These Next

ಭಟ್ಕಳ :ಮೊದಲ ಕೆಡಿಪಿ ಸಭೆಯಲ್ಲಿ ಸಮಸ್ಯೆಗಳ ಮಹಾಪೂರ:ಪರಿಹಾರಕ್ಕೆ ಸುನೀಲ್ ನಾಯ್ಕ ಸೂಚನೆ

ಭಟ್ಕಳ : ಮುಂದಿನ ಕೆಡಿಪಿ ಸಭೆಯಲ್ಲಿ ಆಯಾ ಇಲಾಖೆಯ ಪ್ರಥಮ  ಧಿಕಾರಿಗಳೇ ಸಭೆಗೆ ಹಾಜರಾಗಬೇಕೆಂದು ಶಾಸಕ ಸುನೀಲ್ ನಾಯ್ಕ ಸಭೆಯಲ್ಲಿ ಠರಾವು ...

ಭಟ್ಕಳ:ಕೆ.ಪಿ.ಸಿ.ಸಿ.ಅಧ್ಯಕ್ಷ ಸ್ಥಾನಕ್ಕೆ ಬಿ.ಕೆ.ಹರಿಪ್ರಸಾದ ಅವರು ಸೂಕ್ತ- “ನಾಗರಿಕ ಸೇವೆಗಳು ಗಗನ ಕುಸುಮವಲ್ಲ' ಪೌಂಡೇಶನ್ 

ಭಟ್ಕಳ: “ನಾಗರಿಕ ಸೇವೆಗಳು ಗಗನ ಕುಸುಮವಲ್ಲ (ರಿ) ಬೆಂಗಳೂರು ಇದರ ವತಿಯಿಂದ ರಾಜ್ಯ ಕೆ.ಪಿ.ಸಿ.ಸಿ. ಅಧ್ಯಕ್ಷ ಸ್ಥಾನವನ್ನು ರಾಜ್ಯಸಭಾ ...

ಶ್ರೀನಿವಾಸಪುರ ಪುರಸಭೆ ಉಪಚುನಾವಣೆ;ಜೆ.ಡಿ.ಎಸ್ ಬೆಂಬಲಿತ ಪಕ್ಷೇತರ ಅಭ್ಯರ್ಥಿಗೆ ಗೆಲುವು

ಶ್ರೀನಿವಾಸಪುರ:  ತಾಲ್ಲೂಕಿನಲ್ಲಿ ಕಾಂಗ್ರೆಸ್ ಆಡಳಿತದ ಅಲೆಯ ನಡುವೆಯು ಪುರಸಭೆಯ 12ನೇ ವಾರ್ಡಿಗೆ ನಡೆದ ಉಪ ಚುನಾವಣೆಯ ಪಲಿತಾಂಶದಲ್ಲಿ ...

ಬೇಂಗ್ರೆ ಎಂ.ಡಿ.ಮ್ಯಾಥ್ಯೂ ರವರಿಗೆ ರಾಜ್ಯಮಟ್ಟದ ಉತ್ತಮ ಕುಶಲಕರ್ಮಿ ಪ್ರಶಸ್ತಿ ಪ್ರದಾನ

ಭಟ್ಕಳ: ಬೆಂಗಳೂರು ಡಾಲರ್ಸ ಕಾಲೋನಿಯಲ್ಲಿ  ಇತ್ತಿಚೀಗೆ ನಡೆದ  ಕೈ ಮಗ್ಗ, ಖಾದಿ ಮತ್ತು ಗ್ರಾಮಿಣ ಉತ್ಪನ್ನಗಳು, ಸಾವಯವ ತರಕಾರಿ, ಹಣ್ಣು ...