ಕಾಡುಹಂದಿ ಮಾಂಸ ಅಕ್ರಮಸಾಗಾಟ: ಮೂರು ಆರೋಪಿಗಳ ಬಂಧನ

Source: sonews | By Staff Correspondent | Published on 20th November 2017, 3:32 PM | Coastal News | Don't Miss |

ಮುಂಡಗೋಡ : ಅಕ್ರಮವಾಗಿ ಕಾಡುಹಂದಿಯ ಮಾಂಸವನ್ನು ಅಟೋರಿಕ್ಷಾದಲ್ಲಿ ಸಾಗಿಸುತ್ತಿರುವಾಗ ಅರಣ್ಯ ಇಲಾಖೆ ಸಿಬ್ಬಂದಿ ದಾಳಿನಡೆಸಿ ಮೂವರು ಆರೋಪಿಗಳ ಸಮೇತ ಅಟೋ ರೀಕ್ಷಾ ಹಾಗೂ ಒಂದು ಬೈಕ್ ವಶ ಪಡಿಸಿಕೊಂಡ ಘಟನೆ ತಾಲೂಕಿನ ವಡಗಟ್ಟಾ  ಅರಣ್ಯ ಸರ್ವೇನಂ 42 ರಲ್ಲಿ ಜರುಗಿದೆ.
ಬಂದಿತ ಆರೋಪಿಗಳನ್ನು ಪಟ್ಟಣದ ಗಾಂಧಿನಗರದ ಸುರೇಶ ತಿಮ್ಮಣ್ಣ ಕೊರವರ(38)ಕಲ್ಲಪ್ಪ ಹನ್ಮಂತಪ್ಪ ಕೊರವರ(37) ಹಾಗೂ ಅಂಬೇಡ್ಕರ ಓಣಿಯ ಗಂಗಾಧರ ಕೊರವರ(31)ಎಂದು ತಿಳಿದು ಬಂದಿದೆ.
ವಡಗಟ್ಟಾ ಕಾಯ್ದಿಟ್ಟ ಅರಣ್ಯ ಪ್ರದೇಶ ಸವೇ ನಂ 42 ರಲ್ಲಿ  ಬೆಳಗಿನ ಜಾವ ಕಾಡುಹಂದಿಯನ್ನು ಬೇಟೆಯಾಡಿದ ಆರೋಪಿಗಳು  ಅದನ್ನು ಅಲ್ಲಿಯೇ ಮಾಂಸವನ್ನು ಬೇರ್ಪಡಿಸಿ ಸುಮಾರು 80 ಕೆಜಿ ಮಾಂಸವನ್ನು ಎರಡು ಚೀಲದಲ್ಲಿ ತುಂಬಿ ಅಟೋ ರಿಕ್ಷಾದಲ್ಲಿ ತೆಗೆದುಕೊಂಡು ಬರುತ್ತಿರುವಾಗ  ಅರಣ್ಯ ಇಲಾಖೆಯವರು ದಾಳಿ ನಡಸಿ ಬಂದಿತರಿಂದ ಎರಡು ಚಾಕು ಒಂದುಕತ್ತಿ ಹಾಗೂ ಒಂದು ಬೈಕ್ ಸೇರಿದಂತೆ ಎಂಭತ್ತು ಕೆಜಿ ಕಾಡುಹಂದಿ ಮಾಂಸ ಅಟೋ ರಿಕ್ಷಾವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ದಾಳಿಯ ನೇತೃತ್ವವನ್ನು ವಲಯ ಅರಣ್ಯಾಧಿಕಾರಿ ಸುರೇಶ ಕಲ್ಲೋಳ್ಳಿ ಹಾಗೂ ವನಪಾಲಕರಾದ ಬಸವರಾಜ ಪೂಜಾರಿ, ಆನಂದ ಪೂಜಾರ, ಅರಣ್ಯ ರಕ್ಷಕರಾದ ನಿಂಗಪ್ಪ  ಕಲಾದಗಿ, ರಮೇಶ ಸಜ್ಜನ, ಬೋಜು ಚವ್ಹಾಳ ರಮೇಶ ಭಜಂತ್ರಿ, ಸಸವರಾಜ ನಾಯ್ಕ ಮುಂತಾದವರಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದಾರೆ
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...