ಮನೆಗೆ ಆಕಸ್ಮಿಕವಾಗಿ ಬೆಂಕಿ: ಅಪಾರ ಹಾನಿ

Source: S O News service | By sub editor | Published on 5th March 2017, 11:29 PM | Coastal News | Incidents | Don't Miss |

ಮುಂಡಗೋಡ : ಮನೆಯೊಂದಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಅಪಾರ ಹಾನಿಯಾದ ಘಟನೆಯೊಂದು ತಾಲೂಕಿನ ಮಳಗಿ ಗ್ರಾ.ಪಂ. ವ್ಯಾಪ್ತಿಯ ಹೊಸಕೊಪ್ಪ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಹೊಸಕೊಪ್ಪ ಗ್ರಾಮದ ಮಂಗಲಾ ಗಜಾನನ ಕೊಡಿಯಾ ಅವರ ಮನೆಗೆ ಆಕಸ್ಮಿಕವಾಗಿ ಬೆಂಕಿ ಬಿದ್ದು ಮನೆಯಲ್ಲಿದ್ದ ಮಂಚ, ಕಲರ್ ಟಿ.ವಿ., ೨೫೦ ಹಂಚು, ರೀಪು, ಪಕಾಸು, ಪಾತ್ರೆ, ಬಟ್ಟೆ ಬಾಗಿಲು ಸುಟ್ಟು ಹೋಗಿದೆ. 
ಈ ಬೆಂಕಿ ಅನಾಹುತದಿಂದ ೫೦-೬೦ಸಾವಿರರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಮಳಗಿ ಗ್ರಾ.ಪಂ.ಅಧ್ಯಕ್ಷೆ ರೇಖಾ ಅಂಡಗಿ, ಪಿ.ಡಿ.ಓ. ಪರಶುರಾಮ ಮಲವಳ್ಳಿ, ಉಪಾಧ್ಯಕ್ಷರು, ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಮಂಗಲಾ ಕೊಡಿಯಾ, ಆನಂದ ಪೂಜಾರ ಇದ್ದರು. 
ಬೆಂಕಿ ಅನಾಹುತದಿಂದ ಅಪಾರ ಹಾನಿಯಾಗಿರುವ ಮಂಗಲಾ ಕೊಡಿಯಾ ಅವರಿಗೆ ಸೂಕ್ತ ಪರಿಹಾರ ನೀಡಬೇಕೆಂದು ಮಳಗಿ ಗ್ರಾ.ಪಂ.ದವರು ಮುಂಡಗೋಡ ತಹಶೀಲದಾರರಿಗೆ ಮನವಿಯೊಂದನ್ನು ಸಲ್ಲಿಸಿದ್ದಾರೆ. 

Read These Next

ಜಿಲ್ಲಾ ಮಟ್ಟದ ಕ್ರೀಡಾಕೂಟ;ದಿ ನ್ಯೂ ಇಂಗ್ಲೀಷ ಪಿಯು ಕಾಲೇಜಿನ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ

ಭಟ್ಕಳ; ಯಲ್ಲಾಪುರ ತಾಲೂಕಾ ಕ್ರಿಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥೀಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳದ ...

ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯದಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಅರ್ಬನ್ ಬ್ಯಾಂಕುಗಳಲ್ಲಿಯೇ ಅತ್ಯಧಿಕ ಲಾಭ ಗಳಿಸಿದ ಭಟಕಳ ಅರ್ಬನ್ ಬ್ಯಾಂಕ್ ಅತ್ಯುನ್ನತ ಗ್ರಾಹಕ ...