ಹುಲ್ಲಿಗೆ ಬೆಂಕಿ ನಷ್ಟವನ್ನು ವನ್ನು ತಪ್ಪಿಸಿದ ಅಗ್ನಿಶಾಮಕ ದಳ

Source: sonews | By sub editor | Published on 4th January 2019, 11:49 PM | Coastal News | Don't Miss |

ಮುಂಡಗೋಡ : ಟ್ರ್ಯಾಕ್ಟರನಲ್ಲಿ ಹುಲ್ಲು ಸಾಗಿಸುತ್ತಿದ್ದ ವೇಳೆ ಬೆಂಕಿ ತಗುಲಿ ಅಪಾರ ನಷ್ಟವುಂಟಾದ ಘಟನೆ ತಾಲೂಕಿನ ಹುಬ್ಬಳ್ಳಿ-ಶಿರಸಿ ರಸ್ತೆಯ ಬಾಚಣಿಕೆ ಡ್ಯಾಂ ಹತ್ತಿರ ಸಂಭವಿಸಿದೆ

ಪ್ರಕಾಶ ಕೊಂಡಿಕೊಪ್ಪ ಎಂಬ ವ್ಯಕ್ತಿ ಟ್ರಾಕ್ಟರನಲ್ಲಿ ಮೇವು ಹುಲ್ಲನ್ನು ತುಂಬಿಕೊಂಡು ಹೊಗುತ್ತಿರುವಾಗ ಬಾಚಣಕಿ ಡ್ಯಾಮಿನ ಹತ್ತಿರ ವಿದ್ಯುತ ತಂತಿಗಳು ಹುಲ್ಲಿಗೆ ಸ್ಪರ್ಶಿಸಿದ್ದರಿಂದ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಕೂಡಲೇ ಸಾರ್ವಜನಿಕರು ಅಗ್ನಿ ಶಾಮಕದಳದವರಿಗೆ ತಿಳಿಸಿದಾಗ ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ಸಿಬ್ಬಂದಿಗಳ ಪ್ರಯತ್ನದಿಂದ ಮೇವು ಹುಲ್ಲು ಹಾಗೂ ಟ್ರಾಕ್ಟರವನ್ನು ಅವಘಡದಿಂದ ತಪ್ಪಿಸಿದ್ದಾರೆ.  ಈ ಘಟನೆಯಿಂದ ಸುಮಾರು 10 ಸಾವಿರ ರೂ. ಹಾನಿಯಾಗಿದೆ ಎನ್ನಲಾಗಿದೆ. 

ಅಗ್ನಿ ಶಾಮಕದಳದ ಅಗ್ನಿ ಶಾಮಕದಳದ ಸಿಬ್ಬಂದಿಗಳಾದ ಯು.ಎಲ್.ಬಾಳೆಕಟ್ಟಿ, ಬಸವರಾಜ ಇಂಚಲ, ಗುರುಪ್ರಸಾದ ಕಮಲಾಕರ, ದುರ್ಗಪ್ಪ ಹರಿಜನ,ಶಿವಾಜಿ ರಾಣಿಗೇರ, ಲಕ್ಷ್ಮಣ ವರಕ ಬೆಂಕಿ ನಂದಿಸುವ ಕಾರ್ಯಾಚರಣೆಯಲ್ಲಿದ್ದರು.   
    
 
 

Read These Next