ರೈತರು ಸರಕಾರದ ಯೋಜನೆಗಳ ಪ್ರಯೋಜನ ಪಡೆದುಕೊಳ್ಳಬೇಕು

Source: sonews | By Staff Correspondent | Published on 29th June 2018, 12:01 AM | Coastal News | Don't Miss |

ಮುಂಡಗೋಡ:  ಸರಕಾರವು ಕೃಷಿ ಕ್ಷೇತ್ರ ಹಾಗೂ ರೈತರು ಅಭಿವೃದ್ದಿ ಹೊಂದಲೆಂದು 3 ಲಕ್ಷ ರೂ ಗಳವರೆಗೆ 0% ಸಾಲ ಹಾಗೂ 3-10 ಲಕ್ಷ ರೂ ವರೆಗಿನ ಸಾಲಕ್ಕೆ 3% ಸಾಲ ನೀಡುತ್ತದೆ ರೈತರು ಇದರ ಉಪಯೋಗ ಪಡಿಸಿಕೊಳ್ಳಬೇಕು ಹಾಗೂ ಅಧಿಕಾರಿಗಳು ಈ ಕುರಿತು ಕೃಷಿಕರಿಗೆ ಮಾಹಿತಿ ನೀಡಬೇಕು ಎಂದು  ಜಿಪಂ ಶಿಕ್ಷಣ ಹಾಗೂ ಸ್ಥಾಯಿಸಮಿತಿ ಅಧ್ಯಕ್ಷ ಎಲ್.ಟಿ.ಪಾಟೀಲ ಹೇಳಿದರು.

ಗುರುವಾರ ಇಲ್ಲಿಯ ತಾ.ಪಂ ಸಭಾಂಗಣದಲ್ಲಿ ಕೃಷಿ ಇಲಾಖೆಯ 2018-19 ನೇ ಸಾಲಿನ ಸಮಗ್ರ ಕೃಷಿ ಅಭಿಯಾನ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು
ನಮ್ಮ ದೇಶವು ಕೃಷಿ ಪ್ರಧಾನವಾಗಿದ್ದು , ಅದಕ್ಕನುಗುಣವಾಗಿ ಸರ್ಕಾರಗಳು ಕೂಡ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿವೆ  ರೈತರಿಗೆ ಅಗತ್ಯ ನೆರವು ನೀಡುವುದು ಸೇರಿದಂತೆ ರೈತ ಪರವಾದ ಹಲವಾರು ಯೋಜನೆಗಳನ್ನು ಜಾರಿಗೆ ತರಲಾಗಿದೆ. 

ಕಚೇರಿಗಳಿಗೆ ರೈತರು ಬಂದಾಗ ಅವರನ್ನು ಗೌರವದಿಂದ ಕಂಡು ಸಮಾಧಾನದಿಂದ ಸರಕಾರದ ಯೋಜನೆಗಳ ಕುರಿತು ತಿಳಿಸಬೇಕು. ರೈತ ನೆಂದರೆ ದೇಶದ ಬೆನ್ನಲಬು ಅವನು ಮುನಿದರೆ ದೇಶವೆ ಉಪವಾಸ ಪಡಬೇಕಾಗುತ್ತದೆ ಎಂದರು
ರೈತರು ಇದರ ಸದುಪಯೋಗಪಡೆದುಕೊಂಡು ಸಬಲರಾಗಬೇಕಿದೆ ಎಂದು. ಹಿಂದಿನ ದಿನಗಳಲ್ಲಿ ವರ್ಷವಿಡೀ ಗದ್ದೆಯಲ್ಲಿ ಕೆಲಸ ಮಾಡಬೇಕಿತ್ತು. ಆದರೆ ಇಂದಿನ ಯಾಂತ್ರಿಕ ಯುಗದಲ್ಲಿ ಅಂತಹ ಪ್ರಸಂಗವಿಲ್ಲ. ಯಂತ್ರೋಪಕರಣಗಳನ್ನು ಹಾಗೂ ಸರಕಾರ ಯೋಜನೆಗಳನ್ನು ಉಪಯೋಗಿಸಿಕೊಂಡು ಸಣ್ಣ ಜಮೀನನಲ್ಲಿಯೇ ಹೆಚ್ಚಿನ ಬೆಳೆಯನ್ನು ಬೆಳೆಯುವುದು ನಾವು ಕಾಣುತ್ತಿದ್ದೇವೆ ಎಂದರು. ಸಹಕಾರಿ ಸಂಘಗಳಲ್ಲಿ ಯಾವುದೇ ಅವ್ಯವಹಾರ ನಡೆಯುವುದನ್ನು ತಪ್ಪಿಸಿ ಸಹಕಾರಿ ಸಂಘಗಳನ್ನು ಬಲಪಡಿಸುವ ಹೊಣೆಗಾರಿಕೆ ರೈತರ ಮೇಲಿದೆ ಎಂದು ಹೇಳಿದರು.

ಕಾಂಗ್ರೆಸ್ ಧುರೀಣ ಪಿ.ಜಿ ತಂಗಚ್ಚನ್  ಮಾತನಾಡಿ ಮೊದಲಿಗೆ ರೈತರಿಗೆ ಯಾವ ಸರಕಾರಿದಿಂದ ಯಾವ ಭಾಗ್ಯಗಳು ಇರಲಿಲ್ಲ ಆಗ ರೈತರು ಹೆಚ್ಚು ದುಡಿದು ಸಂಪಾದಿಸುತ್ತಿದ್ದರು ಹಾಗೂ ಕೃಷಿಯ ಬಗ್ಗೆ ಕಾಳಜಿವಹಿಸುತ್ತಿದ್ದರು ಇಂದಿನ ಸರಕಾರಗಳು ಭಾಗ್ಯಗಳ ಘೋಷಣೆ ಮಾಡಿದ್ದರಿಂದ ರೈತರು ಹೊಲದಲ್ಲಿ ದುಡಿಯುವುದು ಕಡಿಮೆಯಾಗಿದೆ. ಸಾಲಮನ್ನಾ ಭಾಗ್ಯ ಹಾಗೂ ಇತರೆ ಭಾಗ್ಯಗಳಾದ ಕೃಷಿ ಭಾಗ್ಯ, ಪಶುಭಾಗ್ಯ, ಅನ್ನಭಾಗ್ಯ ಸೇರಿದಂತೆ ಭಾಗ್ಯಗಳು ಹೆಚ್ಚಿರುವುದರಿಂದ ದುಡಿಯುವವ ಸಂಖ್ಯೆಕಡಿಮೆಯಾಗಿದೆ. ಈ ಭಾಗ್ಯಗಳು ನೀಡುವ ಬದಲು ಸರಕಾರ ಬೆಳೆಗಳಿಗೆ ಬೆಂಬಲಬೆಲೆ ನೀಡಿ ಖರೀದಿಸುವ ವ್ಯವಸ್ಥೆ ಮಾಡಬೇಕಾಗಿದೆ.

ಸರಕಾರದ ಭಾಗ್ಯಗಳು ಎಲ್ಲರಿಗೂ ತಲುಪುವುದೇ ಇಲ್ಲ ಹೆಚ್ಚಾನು ಹೆಚ್ಚು ಭಾಗ್ಯಗಳ ಪ್ರಯೋಜನವನ್ನು ಜನಪ್ರತಿನಿಧಿಗಳೆ ಪಡೆಯುತ್ತಾರೆ ಅಲ್ಲದೇ ಎಲ್ಲ ಇಲಾಖೆಯಲ್ಲಿ ತಾವು ಹೇಳಿದವರಿಗೆ ಯೋಜನೆ ನೀಡುವಂತೆ ಅಧಿಕಾರಿಗಳ ಮೇಲೆ ಒತ್ತಡ ಜನಪ್ರತಿನಿಧಿಗಳ ಹಸ್ತಕ್ಷೇಪ ಹೆಚ್ಚುತ್ತಿರುವುದರಿಂದ ಸರಕಾರಿ ಯೋಜನೆಗಳು ಸಮರ್ಪಕವಾಗಿ ಅರ್ಹ ಪಲಾನುಭವಿಗಳಿಗೆ ತಲುಪುತ್ತಿಲ್ಲ. ಅಂತಹ ವ್ಯವಸ್ಥೆಗೆ ಕಡಿವಾಣ ಹಾಕುವ ಕೆಲಸ ನಡೆಯಬೇಕಿದೆ ಎಂದು ತಮ್ಮ ಅಕ್ರೋಶ ವ್ಯಕ್ತಪಡಿಸಿದರು ಅದ್ದರಿಂದ ಭಾಗ್ಯಗಳನ್ನು ನೀಡುವುದು ಸರಕಾರ ನಿಲ್ಲಿಸಬೇಕು ಎಂದರು

ತಾ.ಪಂ ಸದಸ್ಯ ರಮೇಶ ರಾಯ್ಕರ ಮಾತನಾಡಿ, ಸರ್ಕಾರ ಸಾಕಷ್ಟು ಭಾಗ್ಯಗಳನ್ನು ಜಾರಿ ಮಾಡಿ ಕೈಬಿಟ್ಟಿದೆ. ಸಾಕಷ್ಟು ಕಾನೂನು ತೊಡಕಿನಿಂದಾಗಿ ಪಲಾನುಭವಿಗಳು ಯೋಜನೆಗಳನ್ನು ಪಡೆಯಲು ಅಲೆದಾಡಿ ಸುಸ್ತಾಗಿ ಕೈಬಿಟ್ಟ ಉದಾಹರಣೆಗಳಿವೆ. ಹಾಗಾಗಿ ಯಾವುದೇ ಭಾಗ್ಯ ಯೋಜನೆ ಪಲಾಭವಿಗಳಿಗೆ ನೇರವಾಗಿ ಸಿಗುವಂತಾಗಬೇಕಿದೆ ಎಂದು ಹೇಳಿದರು.

ಜಿ.ಪಂ ಸದಸ್ಯೆ ಜಯಮ್ಮ ಕೃಷ್ಣ ಹಿರೇಹಳ್ಳಿ, ತಾ.ಪಂ ಅಧ್ಯಕ್ಷೆ ದ್ರಾಕ್ಷಾಯಿಣಿ ಸುರಗಿಮಠ, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಂಗಮೇಶ ಬಿದರಿ, ರೈತ ಸಂಘದ ಅಧ್ಯಕ್ಷ ಶಂಬಣ್ಣ ಕೋಳೂರ, ದುರೀಣ ಕೃಷ್ಣ ಹಿರೇಹಳ್ಳಿ, ಸಹಾಯಕ ಕೃಷಿ ನಿರ್ದೇಶಕ ಎಮ್.ಎಸ್ ಕುಲಕರ್ಣಿ, ಕೃಷಿ ಅಧಿಕಾರಿ ಅರವಿಂದ ಕಮ್ಮಾರ, ತಾ.ಪಂ ಸದಸ್ಯೆ ರಾಧಾಬಾಯಿ ಸಿಂಗನಳ್ಳಿ, ಹುಸೇನಸಾಬ ದುಂಡಸಿ, ರುಕ್ಮಿಣಿ ಹುಲ್ಮನಿ, ಗಜಾನನ ಕತ್ಲೇರ, ಬುದ್ದು ನಾಗರೊಳ್ಳಿ ಮುಂತಾದವರಿದ್ದರು. ಅರವಿಂದ ಕಮ್ಮಾರ ನಿರೂಪಿಸಿದರು. ಎಮ್.ಎಸ್ ಕುಲಕರ್ಣಿ ವಂದಿಸಿದರು.

      

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...