ಧರ್ಮಸ್ಥಳ ಸಹಕಾರ ಸಂಘ ಇಡೀ ರಾಷ್ಟ್ರಕ್ಕೆ ಮಾದರಿ :ಶಿವರಾಮ ಹೆಬ್ಬಾರ

Source: sonews | By Sub Editor | Published on 13th September 2017, 7:59 PM | Coastal News |

ಮುಂಡಗೋಡ: ರಾಜ್ಯದಲ್ಲಿ ಇಂದು ಮಹಿಳೆಯರಿಗೆ, ರೈತರಿಗೆ ಸಹಾಯ ಮಾಡುವ ಮುಂಚೂಣಿಯಲ್ಲಿರುವ ಧರ್ಮಸ್ಥಳ ಸಹಕಾರ ಸಂಘ ಇಡಿ ರಾಷ್ಟ್ರಕ್ಕೆ ಮಾದರಿ ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು
ಅವರು ಪಟ್ಟಣದ ಟೌನಹಾಲ್ ನಲ್ಲಿ ಧರ್ಮಸ್ಥಳ ಸಹಕಾರ ಸಂಘ ಹಮ್ಮಿಕೊಂಡಿದ್ದ ಕೃಷಿ ಸ್ವ ಉದ್ಯೋಗ ವಿಚಾರ ಸಂಕಿರ್ಣಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇವತ್ತು ಮಹಿಳೆಯರಿಗೆ ಧರ್ಮಸ್ಥಳ ಸಂಘ ಸಹಾಯ ಮಾಡುತ್ತಿರುವುದರಿಂದ ಮಹಿಳೆ ಸ್ವಾವಲಂಭನೆ ಜೀವನ ಸಾಗಿಸುವಂತಾಗಿದೆ. ಬ್ಯಾಂಕಿನವರು ರೈತರಿಗೆ ಸಾಲ ನೀಡಲು ಹಿಂದೇಟು ಹಾಕಿದರೆ ರೈತರ ಕೈ ಹಿಡಿಯುವುದೇ ಧರ್ಮಸ್ಥಳ ಸಂಘ ಇದರಿಂದ ಸಣ್ಣ ಹಿಡುವುಳಿದಾರರು ಜೀವನ ಸಾಗಿಸಲು ಸಾಧ್ಯವಾಗಿದೆ.
ಧರ್ಮಸ್ಥಳ ಸಂಘದಲ್ಲಿ ಜಾತಿ ಮೀರಿ ಬೆಳೆದಿದೆ. ಇಲ್ಲಿ ಜಾತಿ ಧರ್ಮ ಯಾವುದೇ ಪಕ್ಷ ಕ್ಕೆ ಅವಕಾಶವಿಲ್ಲದ್ದರಿಂದ ಈ ಸಂಸ್ಥೆಯು ಇಷ್ಟು ಬೇಗನೆ ಎಲ್ಲರ ಮನೆಮಾತಾಗಿದೆ ಎಂದರು.
ರೈತರ ಹಾಗೂ ಮಹಿಳೆಯರ ಕುರಿತು ಅತಿ ಮುತುವರ್ಜಿ ವಹಿಸಿ ಅವರನ್ನು ಸ್ವಾವಲಂಭನೆ ಜೀವನ ಸಾಗಿಸಲು ಅನುವುಮಾಡಿಕೊಟ್ಟ ಡಾ|| ಶ್ರೀ ಡಿ. ವಿರೇಂದ್ರ ಹೆಗಡೆ ಯವರಿಗೆ ನನ್ನ ಪ್ರಣಾಮಗಳು ಎಂದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕರಿಗೆ ಧರ್ಮಸ್ಥಳ ಸೇವಾ ಪ್ರತಿನಿಧಿಗಳು ಮೋದಿ ಕೇರ ಕುರಿತು ಮಾಹಿತಿ ನೀಡಿದರು
ಯೋಜನಾಧಿಕಾರಿ ರಾಕೇಶ,  ಮೇಲ್ವಿಚಾರಕ ನಾಗರಾಜ, ಕೃಷಿ ಮೇಲ್ವಿಚಾರಕ ಗಣಪತಿ ನಾಯಕ, ಯಂತ್ರಧಾರೆ ಮೇಲ್ವಿಚಾರಕ ಮಹದೇವ ಗೌಡ ಹಾಗೂ ಧರ್ಮಸ್ಥಳ ಸಂಘ ಸೇವಾ ಪ್ರತಿನಿಧಿಗಳು. ಕೃಷ್ಣ ಹಿರಳ್ಳಿ, ರವಿಗೌಡಾ ಪಾಟೀಲ, ಮಂಜುನಾಥ ವರ್ಣೇಕರ, ರಾಮಣ್ಣ ಪಾಲೇಕರ, ಜ್ಞಾನದೇವ ಗುಡಿಯಾಳ, ಅಲ್ಲಿಖಾನ ಪಠಾಣ

Read These Next

ಭಟ್ಕಳ ತಾಲೂಕಿನ ಮುರ್ಡೇಶ್ವರದಲ್ಲಿ ಇದ್ದು ಇಲ್ಲದಂತಾಗಿರುವ 108 ತುರ್ತು ಆರೋಗ್ಯ ಕವಚ (ಆಂಬ್ಯುಲೆನ್ಸ್)

ಭಟ್ಕಳ:ವಿಶ್ವ ಪ್ರಸಿದ್ದವಾದ ಮುರ್ಡೇಶ್ವರಕ್ಕೆ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಆಕಸ್ಮಿಕವಾಗಿ ...