ಚವಡಳ್ಳಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಭಯದ ನೆರಳಲ್ಲಿ ಗ್ರಾಮಸ್ಥರು

Source: sonews | By sub editor | Published on 10th April 2018, 5:16 PM | Coastal News | State News | Don't Miss |

ಮುಂಡಗೋಡ: ಚವಡಳ್ಳಿ ಗ್ರಾಮದಲ್ಲಿ ಕಳೆದ ಒಂದು ವಾರದಿಂದ ಚಿರತೆ ಸಂಚರಿಸುತ್ತಿರುವುದರಿಂದ ಹೊಲಗದ್ದೆಗಳಲ್ಲಿ ಕೆಲಸ ಮಾಡುವ ಜನರು  ಭಯದಿಂದ ನರಳುವಂತಾಗಿದೆ.

ಕಳೆದ 2-3 ತಿಂಗಳ ಹಿಂದೆ  ತಾಲೂಕಿನ ಬಸವನಕೊಪ್ಪ ಗ್ರಾಮದ ಸೇರಿದಂತೆ ಕೆಲವಂದು ಗ್ರಾಮಗಳಲ್ಲಿ ಚಿರತೆ ಕಾಣಿಸಿ ಗ್ರಾಮಸ್ಥರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು
ಸೂರ್ಯ ಇರುವ ಹೊತ್ತಿನಲ್ಲಿ ಚಿರತೆಯ ಸಂಚಾರವಾಗಲಿ ಹೊಲಗದ್ದೆಗಳಲ್ಲಿ ಕಾಣಿಸುವುದಾಗಲಿ ಇರುವುದಿಲ್ಲ ಏನೇ ಇದ್ದರೂ ಸೂರ್ಯನು ಮುಳುಗುತ್ತಿದ್ದಂತೆ ಚಿರತೆಯು ಕಾಣಿಸುತ್ತಿದೆ ಎಂಬುದು ಜನರು ಹೇಳುತ್ತಿರುವುದು ಕೇಳಿ ಬರುತ್ತಿದೆ. 
ಶುಂಠಿ ಕೃಷಿಕರು ರಾತ್ರಿಹೊತ್ತಿನಲ್ಲಿ ತಮ್ಮ ಬೆಳೆಗಳಿಗಾಗಿ ಪಹರೆ ಇರುತ್ತಾರೆ ಚಿರತೆಯ ಕಾಣಿಸುತ್ತಿರುವದರಿಂದ ಭಯಭೀತರಾಗಿ ಬೆಳೆಗಳ ರಕ್ಷಣೆಗೆ ಹೋಗಲಾರದೇ ಬೆಳೆಗಳ ಕುರಿತು ಚಿಂತೆಯಿಂದ ಇರುವಂತೆ ಮಾಡಿದೆ
ರವಿವಾರ  ಸಂಜೆ ಚವಡಳ್ಳಿ ಗ್ರಾಮದ ಜಮೀನಿನಲ್ಲಿ ಚಿರತೆಯು ಪ್ರತ್ಯಕ್ಷವಾಗಿದ್ದು ಇದರಿಂದ ತಮಗೆ ತುಂಬಾ ತೊಂದರೆಯಾಗುತ್ತಿದೆ ಎಂದು ಶುಂಠಿ ಕೃಷಿಕರೊಬ್ಬರು ವಲಯ ಅರಣ್ಯಾಧಿಕಾರಿಗೆ ಮೌಖಿಕವಾಗಿ ದೂರು ಸಲ್ಲಿಸಿ ಚಿರತೆಯಿಂದ ತಮ್ಮನ್ನು ರಕ್ಷಿಸಿ ಎಂದು ಹೇಳಿದ್ದಾರೆ ಚವಡಳ್ಳಿ  ಭಾಗದ ಜನರೂ ಭಯಬೀತಗೊಂಡು ಚಿರತೆಯನ್ನು ಹಿಡಿದು ತಮ್ಮನ್ನು ರಕ್ಷಣೆಮಾಡಿ ಎಂದು ಅರಣ್ಯ ಇಲಾಖೆಯ ಮೊರೆ ಹೋಗಿದ್ದಾರೆ.
ಇದರಿಂದ ಕಾರ್ಯಪ್ರವರ್ತರಾದ ವಲಯ ಅರಣ್ಯಾಧಿಕಾರಿ ಸುರೇಶ ಕುಲ್ಲೊಳ್ಳಿ ನೇತೃತ್ವದಲ್ಲಿ ಚಿರತೆಯನ್ನು ಹಿಡಿಯಲು ತಂಡವಂದನ್ನು ರಚಿಸಲಾಗಿದೆ. ಚಿರತೆಯನ್ನು ಹಿಡಿಯಲು ಬೋನ್ ಇಡಲಾಗಿದ್ದು ಬೋನ್ ನಲ್ಲಿ ನಾಯಿಯೊಂದನ್ನು ಇಡಲಾಗಿದ್ದು ಇದರಿಂದ ಚಿರತೆ   ಬೋನಿನಲ್ಲಿ ಸೆರೆಯಾಗುತ್ತದೆ ಎಂದು ಹೇಳಲಾಗಿದೆ. ತಂಡದಿಂದ ತೀವ್ರ ಶೋಧ ಕಾರ್ಯಾಚರಣೆ ಮುಂದುವರೆದಿದೆ.

ಬಹುತೇಕ ಸಿಬ್ಬಂದಿಗಳಿಗೆ ಚಿರತೆಯನ್ನು ಪತ್ತೆ ಹಚ್ಚುವುದೇ ಒಂದು ಕೆಲಸವಾಗಿದೆ ಎಷ್ಟು ಕಾರ್ಯಚರಣೆ ಮಾಡಿದರು ಚಿರತೆ ಮಾತ್ರ ಇವರ ಕಣ್ಣಿಗೆ ಬೀಳುತಿಲ್ಲಾ. ಪದೇ ಪದೇ ತಾಲೂಕಿನ ಬಸವನಕೊಪ್ಪ, ಸುಳ್ಳಳ್ಳಿ, ಚವಡಳ್ಳಿ ಹಾಗೂ ಸುತ್ತ ಮುತ್ತ ಗ್ರಾಮದ ಜಮೀನಿನಲ್ಲಿ ಸಾರ್ವಜನಿಕರ ಕಣ್ಣಿಗೆ ಚಿರತೆ ಬೀಳುತ್ತಿದ್ದು ಜನರಲ್ಲಿ ಆತಂಕ ಪಡುವಂತವಾಗಿದೆ. ಆದರೆ ಚಿರತೆಯಿಂದ ಯಾವದೇ ಅನಾಹುತವಾದ ಬಗ್ಗೆ ವರದಿಯಾಗಿಲ್ಲಾ. ಒಟ್ಟಿನಲ್ಲಿ ಚಿರತೆಯನ್ನು ಹಿಡಿಯಲು ಅರಣ್ಯ ಇಲಾಖೆಯವರಿಗೆ ಒಂದು ಸವಾಲಾಗಿದೆ
 

Read These Next

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...

ಯಲ್ಲಾಪುರದಲ್ಲಿ ಬಾಲಕರ ಮೇಲೆ ಬೀದಿನಾಯಿಗಳಿಂದ ದಾಳಿ;ಕಣ್ಮುಚ್ಚಿಕೊಂಡಿರು ತಾಲೂಕಾಡಳಿತ

ಯಲ್ಲಾಪುರ: ಉತ್ತರಕನ್ನಡ ಜಿಲ್ಲಾದ್ಯಂತ ಬೀದಿನಾಯಿ ಹಾಗೂ ಹುಚ್ಚುನಾಯಿಗಳ ಕಾಟ ದಿನೆ ದಿನೆ ಹೆಚ್ಚಾಗುತ್ತಿದ್ದು ಜಿಲ್ಲಾಡಳಿತ ಇದಕ್ಕೂ ...

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...