ಡೊಣ್ಣ ಮೆಣಸಿಕಾಯಿ ಬೆಳೆ ರೈತನಿಗೆ ಲಾಭದಾಯಕ

Source: sonews | By sub editor | Published on 8th October 2017, 10:51 PM | Coastal News | State News | Special Report |

ಮುಂಡಗೋಡ ; ಆರ್ಥಿಕ ಸಂಕಷ್ಟದಲ್ಲಿರುವ ರೈತನಿಗೆ ಡೊಣ್ಣ ಮೆಣಸಿನಕಾಯಿ ಕೈ ಹಿಡಿಯುತ್ತದೆ ಎಂದು ಇಲ್ಲಿಯ ರೈತ ತೋರಿಸಿ ಆದಾಯ ಗಳಿಕೆಯಲ್ಲಿ ದಾಪುಗಾಲು ಇಟ್ಟಿದ್ದಾನೆ.  ಈ ಬೆಳೆಯು ಮಳೆಯಾಶ್ರಿತವಾಗದೇ ಕೇವಲ ಹನಿ ನೀರಾವರಿ ಮೇಲೆ ನಿಂತಿದೆ.
ಕಡಿಮೆ ವೆಚ್ಚದಲ್ಲಿ ೧೦ ಗುಂಟೆಜಾಗೆಯಲ್ಲಿ ಬೆಳೆ ಬೆಳೆದು ಲಕ್ಷಾಂತರ ರೂ ಗಳಿಸ ಬಹುದಾಗಿದೆ. ಹೆಚ್ಚು ಆದಾಯ ಗಳಿಸಬಲ್ಲ ದೊಣ್ಣ ಮೆಣಸಿನಕಾಯಿ(ಕ್ಯಾಪ್ಸಿಕಮ್) ಬೆಳೆ ರೈತರ ಕೈ ಹಿಡಿಯುವುದರಲ್ಲಿ ಸಂಶಯವಿಲ್ಲ. ಈ ಬೆಳೆಯಲ್ಲಿ ಬಣ್ಣದ ಕಾಯಿಗಳು ರೈತನಿಗೆ ಲಾಭದಾಯಕವಾಗಿ ಗೋಚರಿಸುತ್ತಿದೆ ಆರ್ಥಿಕ ಕಷ್ಟದಲ್ಲಿರುವ ರೈತರಿಗೆ ಕೈಹಿಡಿಯುವ  ಬೆಳೆಯಾಗಿ ಮಾರ್ಪಡಲ್ಪಟ್ಟಿದೆ.
ತಾಲೂಕಿನ ಕೊಪ್ಪ, ಇಂದೂರ, ಹಾಗೂ ನಾಗಿನಕೆರೆ(ಮಳಗಿ) ಯಲ್ಲಿ ನಾಲ್ವರು ರೈತರು ಡೊಣ್ಣ ಮೆಣಸಿನಕಾಯಿ   ಬೆಳೆದು ಬಣ್ಣದ ಬೆಳೆಗೆ ಜೀವ ತುಂಬುವ ಮೂಲಕ ಇತರ ರೈರಿಗೆ ಮಾದರಿಯಾಗಿದ್ದಾರೆ
ಪಾಲಿಹೌಸ್‌ನಲ್ಲಿ (ಹಸಿರು ಮನೆ) ಬೆಳೆದಿರುವ ಹಸಿರು, ಕೆಂಪು,  ಹಳದಿ ಬಣ್ಣದ ಡೊಣ್ಣ ಮೆಣಸಿನ ಕಾಯಿ ಗಿಡತುಂಬ ಫಸಲು ನೀಡಿವೆ. ಆರಂಭಿಕ ಲಾಭದಿಂದ ಖುಷಿಯಾಗಿರುವ ರೈತರು ಇತರೆ ರೈತರು ಈ ಬೆಳೆ ಬೆಳೆದು ಆರ್ಥಿಕಸಂಕಷ್ಟ ನೀಗಿಸಿಕೊಳ್ಳಲಿ ಎಂದು ಅವರಿಗೆ ಈ ಬೆಳೆ ಕುರಿತು ಮಾಹಿತಿ ನೀಡುತ್ತಿದ್ದಾರೆ.


ಪಾಲಿಹೌಸ್ ನಲ್ಲಿ ಬೆಳೆಯುವ ವಿಧಾನ ‘ಸುಮಾರು ೧೦ ಗುಂಟೆ ಜಾಗದಲ್ಲಿ ಮೂರು ಅಡಿ ಅಗಲದ ೧೬ ಬೆಡ್ ಗಳನ್ನು ( ಎತ್ತರದ ಮಣ್ಣಿನ ಸಾಲು) ನಿರ್ಮಿಸಲಾಗಿದೆ ಸಾಲಿನಲ್ಲಿರುವ ಮಣ್ಣನ್ನು ಸಡಿಲಗೊಳಿಸಿ, ಅಗತ್ಯ ಗೊಬ್ಬರ ಹಾಕಿ, ನೀರು ಪೂರೈಸಲು ಹನಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ.ಅದರಲ್ಲಿ ೧೬ ಸೆಂಟಿಮೀಟರ್‌ಗೆ ಒಂದೊಂದರಂತೆ ನಾಟಿ ಮಡಿರುವ ೩೦೦೦ ದಷ್ಟು ಸಸಿಗಳು ೧೨-೧೩ ಅಡಿ ಎತ್ತರಕ್ಕೆ ಬೆಳೆದಿವೆ. ಸಸಿಗಳಿಗೆ ಅಗತ್ಯ  ಬೆಳಕು ಮತ್ತು ಗಾಳಿ ಸಿಗುವ ವ್ಯವಸ್ಥೆಯನ್ನು ಹಸಿರುವಮನೆ ಮಾಡುತ್ತದೆ’ ಎಂದು ಇಂದೂರಿನ ಕೃಷಿಕ ಯಮನಪ್ಪ ಮಾರಂಬೀಡ್ ಹೇಳುತ್ತಾರೆ
‘ಪುಣೆಯಿಂದ ೧೪ ರೂಪಾಯಿಗೆ ಒಂದರಂತೆ ಸಸಿಗಳನ್ನು ತರಲಾಗಿದೆ. ಹಸಿರು ಮನೆಯಲ್ಲಿ ನಾಟಿ ಮಡಿದ ೭೦ ದಿನಗಳಲ್ಲಿ ಕಾಯಿ ಬಿಡಲು ಆರಂಭವಾಗುತ್ತದೆ. ೯೦ ದಿನದಲ್ಲಿ ಕಾಯಿ ಕೊಯ್ಲು  ಮಾಡುವ ಹಂತಕ್ಕೆ ಬಂದು ಹಸಿರು, ಹಳದಿ ಹಾಗೂ ಕೆಂಪು ಬಣ್ಣದ ಡೊಣ್ಣ ಮೆಣಸಿನಕಾಯಿಗಳು ಗಿಡದ ತುಂಬ ಬಿಡುತ್ತವೆ’ ಎಂದು ಅವರು ತಿಳಿಸಿದರು
ಪ್ರತಿ ಗಿಡದಲ್ಲಿ ೩-೫ ಕೆ.ಜಿ ಕಾಯಿಗಳು ಸಿಗಲಿದ್ದು ಪ್ರತಿ ಕಾಯಿ ೨೫೦-೨೮೦ ಗ್ರಾ.ಂ ತೂಕ ಹೊಂದಿರುತ್ತವೆ. ಮುಂದಿನ ಐದು ತಿಂಗಳವರೆಗೆ ೮ ಟನ್ ಕ್ಯಾಪ್ಸಿಕಮ್ ಬೆಳೆ ಪಡೆದು ೮ ಲಕ್ಷ ದಿಂದ ೧೦ ಲಕ್ಷ ರೂ ಆದಾಯ ಗಳಿಸಬಹುದು. ಸದ್ಯ ಹಸಿರು ಕಾಯಿ ಪ್ರತಿಕೆಜಿಗೆ ೨೫ ರೂ ದಿಂದ ೩೦ ರೂಪಾಯಿ ಇದೆ. ಹಳದಿ ಮತ್ತು ಕೆಂಪು ಕಾಯಿಗಳು ಪ್ರತಿಕೆಜಿಗೆ ೮೦-೧೦೦ ರೂಪಾಯಿಗೆ ಮಾರಾಟವಾಗುತ್ತಿವೆ ಎಂದು ಮಾಹಿತಿ ನೀಡಿದರು.
ಹೋಟಲ್‌ಗಳಲ್ಲಿ ಹೆಚ್ಚಿನ ಬೇಡಿಕೆ: ಪ್ರತಿ ವಾರಕ್ಕೆ ೩ ರಿಂದ ೫ ಟನ್ ಕ್ಯಾಪ್ಸಿಕಮ್ ಬೆಳೆಯನ್ನು ಕಟಾವು ಮಾಡಲಾಗುತ್ತದೆ. ೨೦ ಕೆಜಿ ಡೊಣ್ಣ ಮೆಣಸಿಕಾಯಿ ಹಿಡಿಯುವಂತ ರಟ್ಟಿನ ಡಬ್ಬಿಯಲ್ಲಿ ಕಾಯಿಗಳನ್ನು ಪ್ಯಾಕ್ ಮಾಡಿ, ಹುಬ್ಬಳ್ಳಿ, ಮೂಲಕ ಹೈದರಾಬಾದ್, ಗೋವಾ, ಮುಂಬಯಿ ಹಾಗೂ ಬೆಳಗಾಂವಿ ಮಾರುಕಟ್ಟೆಗೆ ರೈತರು ಕಳುಹಿಸುತ್ತಾರೆ ಚೈನೀಸ್ ಹೊಟೇಲ್‌ಗಳಲ್ಲಿ ಇದಕ್ಕೆ ಹೆಚ್ಚಿನ ಬೇಡಿಕೆ ಇದೆ.
ಮೊದಲನೇ ವರ್ಷ ಪಾಲಿಹೌಸ್ ನಿರ್ಮಾಣ ಮಾಡಲು ಹಣ ಖರ್ಚುವಾಗುವು ಆದ್ದರಿಂದ ಮೊದಲನೇ ವರ್ಷದಲ್ಲಿ ರೈತನಿಗೆ ಅಷ್ಟು ಲಾಭ ಅಷ್ಟಕಷ್ಟೆ ಎನಿಸಿದರೂ ಮುಂದಿನ ವರ್ಷಗಳಲ್ಲಿ  ಅದೇ ಪಾಲಿಹೌಸ್ ನಲ್ಲಿ ದೊಣ್ಣನ ಮಣಸಿನಕಾಯಿ ಸಸಿ ನೆಟ್ಟು ಲಕ್ಷ ಲಕ್ಷ ಲಾಭ ಹೊಂದಬಹುದು.
ಈ ಯೋಜನೆಯಲ್ಲಿ ತೋಟಗಾರಿಕೆ ಇಲಾಖೆಗೆ ಅನುದಾನ ಹೆಚ್ಚಿನ ಪ್ರಮಾಣದಲ್ಲಿ ಬಂದರೆ ಹೆಚ್ಚಿನ ರೈತರು ಇದರ ಲಾಭಪಡೆಯಬಹುದಾಗಿದೆ
ತಾಲೂಕಿನಲ್ಲಿ ವರ್ಷದ ಹಿಂದೆಯಷ್ಟೆ ಕ್ಯಾಪ್ಸಿಕಮ್ ಬೆಳೆ ಪರಿಚಯಿಸಲಾಗಿದೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಹಾಗೂ ಸಮಗ್ರ ತೋಟಗಾರಿಕಾ ಅಭಿವೃದ್ದಿ ಯೋಜನೆಯಡಿ ಪರಿಶಿಷ್ಟ ಜಾತಿ ಮತ್ತು  ಪಂಗಡದ ರೈತರಿಗೆ ಪ್ರತಿ ಹತ್ತು ಗುಂಟೆಗೆ ೭.೫೯ ಲಕ್ಷ ಸಹಾಯಧನ ನೀಡಲಾಗಿದೆ . ಘಟಕ ನಿಮಾಣಕ್ಕೆ ಒಟ್ಟು ವೆಚ್ಚ ೧೧ ಲಕ್ಷ ವೆಚ್ಚವಾಗಿದೆ ಎಂದು ತೋಟಗಾರಿಕಾ ಇಲಾಖೆ ತಿಳಿಸಿದೆ.

ಚಿತ್ರ ವರದಿ :ನಜೀರುದ್ದಿನ. ಎ. ತಾಡಪತ್ರಿ

Read These Next

ಪಿ.ಯು.ಕಾಲೇಜ್ ಸಹಪಠ್ಯ ಚಟುವಟಿಕೆ; ಇಂಗ್ಲಿಷ್ ಚರ್ಚಾ ಸ್ಪರ್ಧೆಯಲ್ಲಿ ಶಿಹಾಬುದ್ದೀನ್ ಪ್ರಥಮ

ಭಟ್ಕಳ: ಪದವಿ ಪೂರ್ವ ಶಿಕ್ಷಣ ಇಲಾಖೆ ಹಮ್ಮಿಕೊಂಡ ತಾಲೂಕಾ ಮಟ್ಟದ ಸಾಂಸ್ಕತಿಕ ಸಹ ಪಠ್ಯೇತರ ಚಟುವಟಿಕೆಗಳ ಸ್ಪರ್ಧೆಗಳಲ್ಲಿ ದಿ.ನ್ಯೂ ...

ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು- ಪ್ರಧಾನ ಸಿವಿಲ್‌ ನ್ಯಾಯಾಧೀಶ ಮಹಮದ್‌ ರೋಷನ್‌ ಷಾ

ಶ್ರೀನಿವಾಸಪುರ: ದೇಶದಲ್ಲಿ ಭ್ರಷ್ಟಾಚಾರ ನಿರ್ಮೂಲನೆಗೆ ನಾಗರಿಕರು ಸಹಕರಿಸಬೇಕು ಎಂದು ಜೆಎಂಎಫ್‌ಸಿ ನ್ಯಾಯಾಲಯದ ಪ್ರಧಾನ ಸಿವಿಲ್‌ ...