ರಾಮಚಂದ್ರ ನಾಯ್ಕ  ಕುಟುಂಬಕ್ಕೆ ೧೦ ಲಕ್ಷ ರು ಪರಿಹಾರ ನೀಡುವಂತೆ ಬಿಜೆಪಿ  ಮನವಿ

Source: sonews | By Staff Correspondent | Published on 21st September 2017, 7:32 PM | Coastal News | Don't Miss |

ಮುಂಡಗೋಡ : ಭಟ್ಕಳದಲ್ಲಿ ಮೃತನಾದ ರಾಮಚಂದ್ರ ನಾಯಕ್ ಕುಟುಂಬಕ್ಕೆ ೧೦ ಲಕ್ಷ ರು ಪರಿಹಾರ ನೀಡುವಂತೆ ಹಾಗೂ ರೊಹಿಂಗ್ಯ ಮುಸ್ಲೀಂ ನುಸುಳುಕೊರರನ್ನು ಪತ್ತೆಹಚ್ಚಿ ಭಾರತದಿಂದ ಹೊರಹಾಕಬೇಕೆಂದು ಒತ್ತಾಯಿಸಿ  ಬಿಜೆಪಿ ತಾಲೂಕಾ ಘಟಕ ತಹಶೀಲ್ದಾರ ಮುಖಾಂತರ ಮುಖ್ಯಮಂತ್ರಿಯವರಿಗೆ ಮನವಿ ಅರ್ಪಿಸಿತು.

ಉತ್ತರಕನ್ನಡ ಜಿಲ್ಲೆಯ ಪುರಸಭೆಗಳ ವ್ಯಾಪ್ತಿಯಲ್ಲಿ ಬರುವ ಅಂಗಡಿ ಮುಗ್ಗಟ್ಟುಗಳ ಬಾಡಿಗೆ ದರ  ಸರಕಾರದ ನಿಯಮ ಅನುಸರ ಎಂದು ಹೇಳುತ್ತಾ ಸಣ್ಣ ಪುಟ್ಟ ಉದ್ಯೋಗ ಮಾಡಿಕೊಂಡು ಬದಕುತ್ತಾ  ಕುಟುಂಬದ ಜೀವನವನ್ನು ನಡೆಸಿಕೊಂಡು ಬಂದಿರುವರ ಮೇಲೆ ಜಿಲ್ಲಾ ಆಡಳಿತವು ಮೊದಲಿದ್ದ ಬಾಡಿಗೆಗಳಿಗಿಂತ ಹತ್ತು ಇಪ್ಪತ್ತು ಪಟ್ಟು ಬಾಡಿಗೆ ಹೆಚ್ಚು ಆಕರಣೆ ಮಾಡಿ ಬಡ ಕುಟುಂಬಗಳ ಮೇಲೆ ಗದಾ ಪ್ರಹಾರ ಮಾಡಲಾಗಿದೆ.

ಅದರಂತೆ ಭಟ್ಕಳದಲ್ಲಿ ಸಣ್ಣ ಅಂಗಡಿ ಹೊಂದಿ ಬಂದಂತಹ ಕೆಲವರಿಗೆ ಬಿಡಿಸುವ ಹುನ್ನಾರದಿಂದ ಬಾಡಿಗೆಯನ್ನು ವಿಪರಿತ ಏರಿಸಿ ಆ ಕಾರಣದಿಂದಲೇ ಸಣ್ಣ ಅಂಗಡಿ ಹೊಂದಿದ ರಾಮಚಂದ್ರ ನಾಯ್ಕ ಕುಟುಂಬಕ್ಕೆ ಆಧಾರವಾದ ಸಣ್ಣ ಅಂಗಡಿಯ್ನು ಬಿಡಿಸಿದರ ಪರಿಣಾಮವಾಗಿ ಸದ್ರಿ ಆತನು ತನ್ನ ಕುಟುಂಬದ  ಉದರ ಪೋಷಣೆಗೆ ಉತ್ಪನ್ನ ವಿಲ್ಲದೆ ಮರಣಪಟ್ಟಿದ್ದು  ಅಲ್ಲದೆ ಕೆಲವರಿಗೆ ಪ್ರೋತ್ಸಹಿಸಿ ಮೊದಲು ಅಂಗಡಿ ಮಾಡಿಕೊಂಡು ಇದ್ದವರನ್ನು  ಬಿಡಿಸುವ ಹುನ್ನಾರದಿಂದ ಬಾಡಿಗೆಯನ್ನು ವಿಪರಿತ ಏರಿಸಲಾಯಿತು ಇದರಿಂದ ಹಲವಾರು  ಬಾರಿ ನಗರ ಸಭೆ ಅಧಿಕಾರಿಗಳಿಗೂ ಜಿಲ್ಲಾ ಆಡಳಿತಕ್ಕೂ ಸ್ಥಳಿಯರು ಮನವಿ ಮಾಡಿಕೊಂಡಾಗಿಯು ಸದ್ರಿ ಅಂಗಡಿಕಾರರನ್ನು ಹೆದರಿಸಿ ಬೆದರಿಸಿ ಅಂಗಡಿ ತೆರವುಗೊಳಿಸಿ ಸಾಕಷ್ಟು ಜನರನ್ನು ಜಿಲಾ ಆಡಳಿತ ಬೀದಿ ಪಾಲು ಮಾಡಿತು  ಜೀವನೋಪಾಯಕ್ಕೆ  ಏನೆಂದು ತೋಚದೆ ಏನೂ ಮಾಡಲಾಗದೇ ದೃತಿಗೆಟ್ಟ ರಾಮಚಂದ್ರ ನಾಯ್ಕ ಪ್ರತಿ  ಭಟಿಸಿ ಸಾವಿಗೀಡಾದರೂ ಇದಕ್ಕೆ ಜಿಲ್ಲಾಡಳಿತ ಸರಕಾರವೇ ಹೋಣೆಯಾಗಿರುತ್ತದೆ. ಕಾರಣ ಸದ್ರಿ ಕುಟುಂಬವು ದಿಕ್ಕು ಕಾಣದೇ ಕಷ್ಟ ಅನುಭವಿಸುತ್ತಿದೆ ಸರರ್ಕಾವು ಕೂಡಲೇ ಹತ್ತು ಲಕ್ಷ ರೂಪಾಯಿ ಪರಿಹಾರ ವನ್ನು ಬಿಡುಗಡೆ ಮಾಡಬೇಕೆಂದು ಮುಂಡಗೋಡ ಭಾಜಪ ಘಟಕ ಹಾಗೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ ಎಂದು ತಹಶೀಲ್ದಾರರಿಗೆ ನೀಡಿರುವ ಮನವಿಯಲ್ಲಿ ತಿಳಿಸಿದ್ದಾರೆ.

ತಾಲೂಕ ಬಿಜೆಪಿ ಅಧ್ಯಕ್ಷ ಗುಡ್ಡಪ್ಪ ಕಾತೂರ, ಮಾಜಿ ಶಾಸಕ ವಿ.ಎಸ್.ಪಾಟೀಲ, ಪ.ಪಂ ಸದಸ್ಯ ರಾಯ್ಕರ, ಗುರು ಕಾಮತ, ಉಮೇಶ ಬಿಜಾಪುರ, ಜಿಲ್ಲಾ ಎಸ್.ಸಿ ಯುವಮೊರ್ಚಾ ಆಧ್ಯಕ್ಷ ಅಶೋಕ ಚಲವಾದಿ ವಿಠ್ಠಲ ಬಾಳಂಬೀಡ, ಡಿ.ಜೆ.ಕುಲಕರ್ಣಿ, ಸುಮನ ಕುಲಕರ್ಣಿ, ಮಲ್ಲಿಕಾರ್ಜುನ ಗೌಳಿ, ಶರೀಫ ಮುಗಳಗಟ್ಟಿ, ರಮೇಶ ಸವಣೂರ ಮುಂತಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು
 

Read These Next

ಭಾಷಾ ಜ್ಞಾನದ ಕುರಿತು ಯಾರ ಬಗ್ಗೆಯೂ ಕೇವಲವಾಗಿ ಮಾತನಾಡಿಲ್ಲ: ಜೆ.ಪಿ.ಹೆಗ್ಡೆ ಸ್ವಷ್ಟನೆ

ಉಡುಪಿ: ಈವರೆಗಿನ ರಾಜಕೀಯ ಜೀವನದಲ್ಲಿ ಯಾರ ಮನಸ್ಸನ್ನೂ ನೋಯಿಸುವುದಾಗಲಿ ಅಥವಾ ಕೇವಲವಾಗಿ ಮಾತನಾಡುವುದನ್ನಾಗಲಿ ಮಾಡದೆ ಇರುವ ನಾನು ...