ಕರಡಿದಾಳಿಗೆ ರೈತ ಗಂಭೀರ

Source: S O News service | By Staff Correspondent | Published on 27th January 2017, 3:11 PM | Coastal News | Incidents | Don't Miss |

ಮುಂಡಗೋಡ : ಕರಡಿ ದಾಳಿಗೆ ಸಿಲುಕಿ ರೈತನೋರ್ವ ಗಂಭೀರವಾಗಿ ಗಾಯಗೊಂಡ ಘಟನೆ ತಾಲೂಕಿನ ಕೊಡಂಬಿ ಗ್ರಾಮದಲ್ಲಿ ಇಂದು ಬೆಳಗ್ಗೆ ನಡೆದಿದೆ.
ಗಂಭೀರವಾಗಿ ಗಾಯಗೊಂಡ ರೈತನನ್ನು ಕೊಡಂಬಿ ಗ್ರಾಮದ ಚನ್ನವಿರಯ್ಯ ಸಂಗಯ್ಯ ವೆಂಕಟಾಪುರಮಠ(೪೮) ಎಂದು ತಿಳಿದು ಬಂದಿದೆ.
ನಜೀರಸಾಬ ಬೇಗ ಎಂಬುವರ ಹೊಲವನ್ನು ಸುಮಾರು ವರ್ಷಗಳಿಂದ ಗೇಣಿ ಮಾಡಿಕೊಂಡು ಬಂದಿದ್ದ ನಾಗಿದ್ದು ಇಂದು ಬೆಳಗ್ಗೆ ಹೊಲದ ಕೆಲಸದಲ್ಲಿ ನಿರತನಾಗಿದ್ದ ಚನ್ನವಿರಯ್ಯ ನ ಮೇಲೆ ಕರಡಿ ಏಕಾ‌ಏಕಿ ದಾಳಿ ನಡೆಸಿದೆ. ಕರಡಿಯು ಚೆನ್ನವಿರಯ್ಯನಿಗೆ ಕೈ, ತಲೆ, ಬೆನ್ನಿನ ಮೇಲೆ ತೀವ್ರಗಾಯಾಗೊಳಿಸಿದ್ದು ಎಡಗೈ ಕಿರುಬೆರಳು ಕಚ್ಚಿ ತುಂಡುಮಾಡಿದೆ ಎಂದು ಹೇಳಲಾಗುತ್ತಿದೆ.
ಪಕ್ಕದ ಹೊಲದ ರೈತ ಹನಮಂತ ಶಿವಲಿಂಗ ಅಂಗಡಿ ಕರಡಿದಾಳಿಯಿಂದ ಬೊಬ್ಬೆ ಇಡುತ್ತಿದ್ದನ್ನು ಕೇಳಿ ಧಾವಿಸಿಬಂದು ಕರಡಿಯನ್ನು ಓಡಿಸಿದ್ದಾನೆ ಎಂದು ಹೇಳಲಾಗಿದೆ.
ಚನ್ನವಿರಯ್ಯ ಮುಂಡಗೋಡಿನ ತಾಲೂಕಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.  ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ


 

Read These Next

ಕೂರ್ಮಗಡ ದೋಣಿ ದುರಂತ; ಇದುವರೆಗೆ ೧೪ ಮೃತದೇಹ ಪತ್ತೆ;  ೧೯ ಜನರ ರಕ್ಷಣೆ; ಇಬ್ಬರ ಮೃತದೇಹಕ್ಕಾಗಿ ಶೋಧ

ಕಾರವಾರ: ೨೦೧೯ನೇ ವರ್ಷದ ಆರಂಭದಲ್ಲೇ ಉತ್ತರಕನ್ನಡ ಜಿಲ್ಲೆಯ ಕೂರ್ಮಗಡ ದೋಣಿ ದುರಂತ ಅತ್ಯಂತ ಭಯಾನಕವಾಗಿದ್ದು ೧೬ಮಂದಿಯನ್ನು ...

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...