ಅರ್ಹ ದಲಿತರಿಗೆ ಸಾಲ ನೀಡುವಲ್ಲಿ ತಾರತಮ್ಯ: ದಸಂಸ ಮನವಿ

Source: S O News service | By Staff Correspondent | Published on 28th March 2017, 12:39 AM | Coastal News | Don't Miss |

ಮುಂಡಗೋಡ: ಆರ್.ಬಿ.ಆಯ್ ನೀಡಿದ ಅದೇಶ ವನ್ನು ಪಾಲಿಸದೇ ರಾಷ್ಟ್ರೀಕೃತ ಬ್ಯಾಂಕುಗಳು ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಎಸ್/ಎಸ್ಟಿ/ಒ.ಬಿ.ಸಿ. ಅರ್ಹಫಲಾನುಭವಿಗಳಿಗೆ ಸಾಲ ಮಂಜೂರಿಸದೆ ಇರುವ ಬಗ್ಗೆ ವ್ಯವಸ್ಥಾಪಕರುಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಸೋಮವಾರ ಪಟ್ಟಣದಲ್ಲಿ ಕರ್ನಾಟಕ ದಲಿತ ಸಂಘರ್ಷ ಜಿಲ್ಲಾ ಸಮಿತಿಯವರು ಪ್ರತಿಭಟನೆಯೊಂದಿಗೆ ತಹಶೀಲ್ದಾರ ಮುಖಾಂತರ ಪ್ರಧಾನ ಮಂತ್ರಿಗಳಿಗೆ, ಮುಖ್ಯಮಂತ್ರಿಗಳಿಗೆ, ರೀಝರ್ವ ಬ್ಯಾಂಕ್ ಆಫ್ ಇಂಡಿಯಾ , ಹೆಚ್ಚುವರಿ ಪೋಲಿಸ್ ಮಹಾನಿದೇರ್ಶಕರಿಗೆ, ನಾಗರಿಕ ಹಕ್ಕು ಜಾರಿ ಬೆಂಗಳೂರರವರಿಗೆ ಮನವಿ ಸಲ್ಲಿಸಿದರು. 

ಮನವಿಯಲ್ಲಿ ಸರ್ಕಾರದ ವಿವಿಧ ಯೋಜನೆಗಳ ಅಡಿಯಲ್ಲಿ ಅನೇಕ ಉದ್ದೇಶಗಳಿಗೆ ಸಾಲ ಮತ್ತು ಸಹಾಯಧನ ಮಂಜೂರು ಮಾಡಿದರೆ. ರಾಷ್ಟ್ರೀಕೃತ ಬ್ಯಾಂಕುಗಳು ಅರ್ಹ ಫಲಾನಿಭವಿಗಳಿಗೆ ಸಾಲ ಮಂಜೂರಿಸದೆ ಫಲಾನುಭವಿಗಳಿಗೆ ಸಕಾರಣ ವಲ್ಲದ ಕಾರಣವನ್ನು ತೋರಿಸುತ್ತಾ ಸಾಲದ ಅರ್ಜಿಗಳನ್ನು ತೀರಸ್ಕರಿಸುತ್ತಿರುವದು ಕಂಡು ಬರುತ್ತಿದೆ. ಫಲಾನುಭವಿಗಳಿಗೆ ಬ್ಯಾಂಕುಗಳ ವ್ಯವಸ್ಥಾಪಕರು ಮತ್ತು ಕ್ಷೇತ್ರಾಧಿಕಾರಿಗಳು ಮಹಿಳಾ ಫಲಾನುಭವಿಗಳಿಗೆ ಅಪಮಾನ ಮಾಡುತ್ತಾ ಸರ್ಕಾರದ ಮಾರ್ಗಸೂಚಿಗಳನ್ನು ಹಾಗೂ ಆರ್.ಬಿ.ಆಯ ಗಳ ಆದೇಶಗಳನ್ನು ಉಲ್ಲಘಂನೆ ಮಾಡುತ್ತಿರುವ ಬ್ಯಾಂಕ ವ್ಯವಸ್ಥಾಪಕರು ಹಾಗೂ ಕ್ಷೇತ್ರಾಧಿಕಾರಿಗಳ ಮೇಲೆ ಎಸಿ/ಎಸ್ಟಿ ದೌರ್ಜನ್ಯ ಅಧಿನಿಯಮ  ಅಡಿಯಲ್ಲಿ  ಕ್ರಮಕ್ಕೆ ಒತ್ತಾಯಿಸಿ ಮಾ. ೧೩ರಂದು ಯುವರಾಜ ಕಲಾಲ ವ್ಯವಸ್ಥಾಪಕರು ಎಸ್.ಬಿ.ಆಯ. ಮುಂಡಗೋಡ ಇವರ ಮೇಲೆ ಕೊಟ್ಟ ದೂರಿನ ಬಗ್ಗೆ ಪ್ರಕರಣ ದಾಖಲಿಸುವಂತೆ ಮುಂಡಗೋಡ ಪೋಲಿಸ್ ಠಾಣೆ ಎದರು ಕೆಲ ಹೊತ್ತು ಧರಣಿ ಮಾಡಿದರು.
ಸರ್ಕಾರಗಳು ವಿವಿದ ಇಲಾಖೆಗಳ ಅಡಿಯಲ್ಲಿ ಅನೇಕ ಯೋಜನೆಗಳನ್ನು ಇಲಾಖೆಗಳ ಯೋಜನೆಗಳ ಅಡಿಯಲ್ಲಿ ಸಾಲ ಮತ್ತು ಸಹಾಯಧನವನ್ನು ಪಡೆದು ಉದ್ಯೋಗ, ವ್ಯಾಪಾರ ಮಾಡಿ ಆರ್ಥಿಕ ಉನ್ನತಿ ಹೊಂದಲು ಸರ್ಕಾರ ಸಾವಿರಾರು ಕೋಟಿ ಹಣವನ್ನು ಬಿಡುಗಡೆ ಮಾಡಿ ಯೋಜನೆಗಳನ್ನು ಸಿದ್ದಪಡಿಸಿ ಫಲಾನುಭವಿಗಳಿಂದ ಅರ್ಜಿ ಪಡೆದು ಅರ್ಹ ಫಲಾನುಭವಿಗಳನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿ ಸಾಲದ ಅರ್ಜಿಗಳನ್ನು ಬ್ಯಾಂಕಗಳಿಗೆ ಶಿಫಾರಸ್ಸು ಮಾಡಿ ಸಬಂದ ಪಟ್ಟ ಇಲಾಖಾ ಅಧಿಕಾರಿಗಳು ಕಳಿಸುತ್ತಾರೆ. ಬ್ಯಾಂಕ್ ವ್ಯವಸ್ಥಾಪಕರು ಸಕಾರಣವಲ್ಲದ ಕಾರಣ ಹೇಳಿ  ಸಾಲ ನೀಡಿಕೆ ನಿಯಮಗಳು ಮತ್ತು ಸರ್ಕಾರದ ಯೋಜನೆಗಳ ಅಡಿಯಲ್ಲಿ ಸಾಲ ಮಂಜೂರಿಸಲು ಬ್ಯಾಂಕುಗಳು ಮಾಡಿಕೊಂಡ ಒಪ್ಪಂದ ನಿಯಮಗಳನ್ನು ಉಲ್ಲಂಘನೆ ಮಾಡಿ  ಎಸ್/ಎಸ್ಟಿ. ಮತ್ತು ಒ.ಬಿ.ಸಿ. ಫಲಾನಿಭವಿಗಳಿಗೆ ೩ ರಿಂದ ೬ ತಿಂಗಳುಗಳ ಕಾಲ ಬ್ಯಾಂಕಿಗೆ ಅಲೆದಾಡಿಸಿ ಕೆಲವು ಅರ್ಜಿಗಳನ್ನು ತೀರಸ್ಕರಿಸುತ್ತಾರೆ. ಮತ್ತು ಕೆಲವು ಅರ್ಜಿಗಳನ್ನು ಮಾರ್ಚ ತಿಂಗಳು ಅಥವಾ ಎಪ್ರಿಲ್ ತಿಂಗಳಲ್ಲಿ ಸಾಲ ಮಂಜೂರಿ ಪತ್ರ ಕಳಿಸುತ್ತಾರೆ ಆದರೆ ಮಾರ್ಚ ೩೧ ಕ್ಕೆ ಆರ್ಥಿಕ ವರ್ಷ ಮುಕ್ತಾಯವಾಗುವುದರಿಂದ ಫಲಾನುಭವಿಗಳಿಗೆ ಸರ್ಕಾರದ ಸಹಾಯಧನ/ಅಂಚಿನ ಹಣ ಭಾರೆದೆ ಈ ಸೌಲ್ಯಭಗಳಿಂದಾ ಬ್ಯಾಂಕುಗಳು ಫಲಾನುಭವಿಗಳನ್ನು ಹಾನಿಗೆ ಒಳಪಡಿಸಿ ಆರ್ಥಿಕ ಹಿನ್ನಡೆ ಅನುಭವಿಸುವಂತೆ ಮಾಡುತ್ತಿದ್ದಾರೆ.               
ಎಸಿ/ಎಸ್ಟಿ ಫಲಾನಿಭವಿಗಳಿಗೆ ಆರ್.ಬಿ.ಆಯ. ಮತ್ತು ಸರ್ಕಾರದ ಕಾನೂನಿನ ಅಡಿಯಲ್ಲಿ ನಿಗದಿ ಪಡಿಸಿದ ಸೌಲಭ್ಯಗಳನ್ನು ಕೊಡೆದೆ ಎಸಿ/ಎಸ್ಟಿ. ಅಲ್ಲದೆ ಅಧಿಕಾರಿ, ನೌಕರ ತಾನು ನೆರವೇರಿಸಬೇಕೆಂದು ಅಗತ್ಯ ಪಡಿಸಿದ ಅವನ ಕರ್ತವ್ಯಗಳನ್ನು ಉದ್ದೇಶ ಪೂರ್ವವಾಗಿ ನಿರ್ಲಕ್ಷಸಿದರೆ  ಎಸಿ/ಎಸ್ಟಿ ದೌರ್ಜನ್ಯ ಅಧಿನಿಯಮ ಪ್ರಕಾರ ಅಪರಾದ ವಾಗುತ್ತದೆ ಸಾಲ ಮಂಜೂರಿಸದ ಬ್ಯಾಂಕ ವ್ಯವಸ್ಥಾಪಕರು,ನೌಕರರ ಮೇಲೆ ಕಾನೂನು ಕ್ರಮ ಕೈಗೂಳ್ಳ ಬೇಕೆಂದು ಮನವಿ ಒತ್ತಾಯಿಸಿದ್ದಾರೆ.
ಮನವಿ ಸಲ್ಲಿಸಿ ವೇಳೆ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕರು ಎಸ್.ಫಕ್ಕೀರಪ್ಪ, ಬಸವರಾಜ ಹಳ್ಳೆಮ್ಮನವರ ಪಿ.ಎಸ್.ದಾನಪ್ಪನವರ, ಹನಮಂತ ಎಲ್ ಮೇತ್ರಿ, ಬಸವರಾಜ ಹರಿಜನ, ,ಬಸವಂತ ಮಡ್ಲಿ           ಗುರುನಾಥ.ಎಂ.ಮೇತಿ, ರಾಘವೇಂದ್ರ ಹರಿಜನ,  ಹನಮಂತ ವಾಯ್. ಕಟ್ಟಿಮನಿ. ನಾಗರಾಜ ಮಾಡಳ್ಳಿ,   ಭಾಸ್ಕರ ಭೋವಿ ಇಮಾಮಸಾಬ ಸಿದ್ಧಿ ಸೇರಿದಂತೆ ಮುಂತಾದ ಡಿ.ಎಸ್.ಎಸ್.ಕಾರ್ಯಕರ್ತರು ಉಪಸ್ಥಿತರಿದ್ದರು.


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...