ಕಾಡನೆಗಳ ದಾಳಿ ಬಾಳೆ ಬತ್ತ ನಾಶ

Source: sonews | By Staff Correspondent | Published on 25th November 2018, 11:29 PM | Coastal News | Don't Miss |

ಮುಂಡಗೋಡ: ತಾಲೂಕಿನ ಚವಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರವಳ್ಳಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡು ತೋಟ ಮತ್ತು ಗದ್ದೆಗಳಿಗೆ ನುಗ್ಗಿ ಬಾಳೆಯನ್ನು ನಾಶ ಮಾಡಿರುವುದಲ್ಲದೇ ಗದ್ದೆಗಳಲ್ಲಿನ ಭತ್ತದ ಪೈರು ನಾಶ ಮಾಡಿವೆ. ಮುಂದುವರೆದ ಕಾಡಾನೆಗಳ ದಾಳಿಯಿಂದ ಸುತ್ತಮುತ್ತಲಿನ ಗ್ರಾಮದ ರೈತರು ಮತ್ತಷ್ಟು ಆತಂಕಕ್ಕೀಡಾಗಿದ್ದಾರೆ. 

ಮೂರು ಕಾಡಾನೆಗಳ ಗುಂಪು ಸೇರಿ ಕರವಳ್ಳಿಯ ಎನ್.ವಿ.ಫಿಲಿಪ್ ಎಂಬುವರಿಗೆ ಸೇರಿದ ತೋಟದಲ್ಲಿ ಸುಮಾರು 200ಬಾಳೆಗಿಡಗಳನ್ನು ನೆಲಕ್ಕುರುಳಿಸಿ ನಾಶ ಮಾಡಿವೆ. ಇದಲ್ಲದೇ ಇದೇ ಗ್ರಾಮದ ನಂದಾ ಬೆಂಡಲಗಟ್ಟಿ ಎಂಬುವರ ಸುಮಾರು ಒಂದೂವರೆ ಎಕರೆಯಷ್ಟು ಭತ್ತದ ಗದ್ದೆಯನ್ನು ತಿಂದು ತುಳಿದು ನಾಶ ಮಾಡಿವೆ. ಈ ರೀತಿ ಪ್ರತಿ ವರ್ಷ ನಡೆಯುತ್ತಿರುವ ಕಾಡಾನೆಗಳ ದಾಳಿಯಿಂದ ತಮ್ಮ ಬೆಳೆಯು ನಾಶವಾಗುತ್ತಿರುವುದನ್ನು ಕಂಡ ರೈತರು ರೋಸಿ ಹೋಗಿದ್ದಾರೆ. 

ನಮ್ಮ ಭಾಗದಲ್ಲಿಯೂ ಶುಕ್ರವಾರ ರಾತ್ರಿ ಸುಮಾರು 13ಕಾಡಾನೆಗಳ ಹಿಂಡು ರೈತರೊಬ್ಬರ ಕಟಾವು ಮಾಡುವ ಹಂತದಲ್ಲಿದ್ದ ಅರ್ಧ ಎಕರೆಯಷ್ಟು ನಾಟಿ ಭತ್ತದ ಗದ್ದೆ ನಾಶ ಮಾಡಿವೆ ಮತ್ತು ಇತ್ತೀಚಿನ ದಿನಗಳಲ್ಲಿ ತಾಲೂಕಿನ ಚವಡಳ್ಳಿ, ಗುಂಜಾವತಿ, ಮೈನಳ್ಳಿ ಮತ್ತು ನಾಗನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ದಾಳಿ ಹೆಚ್ಚಾಗುತ್ತಿದ್ದು ಇದನ್ನು ನಿಯಂತ್ರಿಸುವಲ್ಲಿ ಅರಣ್ಯ ಇಲಾಖೆಯವರು ವಿಫಲರಾಗಿದ್ದಾರೆ ಎಂದು ಮೈನಳ್ಳಿ ರೈತ ಸಿ.ಕೆ.ಅಶೋಕ ಪತ್ರಿಕೆಗೆ ತಿಳಿಸಿ ಅರಣ್ಯ ಇಲಾಖೆಯಿಂದ ಇದಕ್ಕೊಂದು ಶಾಶ್ವತ ಪರಿಹಾರವಾಗಬೇಕು ಎಂದು ಆಗ್ರಹಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಬಿಜೆಪಿ ಕುರುಬ ಸಮಾಜದ ಒಬ್ಬರಿಗೂ ಟಿಕೆಟ್ ಕೊಟ್ಟಿಲ್ಲ, ಒಬ್ಬೇ ಒಬ್ಬ ಮರಾಠರಿಗೂ, ಒಬ್ಬ ಮುಸ್ಲಿಂಗೂ ಟಿಕೆಟ್ ಕೊಟ್ಟಿಲ್ಲ: ಸಿ ಎಂ ಸಿದ್ದರಾಮಯ್ಯ

ಬೀದರ್ : ಅಧಿಕಾರ, ಅವಕಾಶ, ಸಂಪತ್ತು‌ ಎಲ್ಲ ಸಮುದಾಯಗಳಿಗೂ ಹಂಚಿಕೆ ಆದರೆ ಮಾತ್ರ ದೇಶದ ಪ್ರಗತಿ ಸಾಧ್ಯ ಎಂದು ಮುಖ್ಯಮಂತ್ರಿ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...