ಅಜಾತ್ ಶತ್ರು ಭಾರತ ರತ್ನ ಅಟಲ್ ಬಿಹಾರಿ ವಾಜಪೆಯವರಿಗೆ ಶೃದ್ಧಾಂಜಲಿ

Source: sonews | By Staff Correspondent | Published on 17th August 2018, 11:08 PM | Coastal News |

ಮುಂಡಗೋಡ : ಭಾರತದ ಮಾಜಿ ಪ್ರಧಾನ ಮಂತ್ರಿ, ಅಜಾತ ಶತ್ರು, ದೇಶಕಂಡ ಅಪ್ರತಿಮ ಜನನಾಯಕ ಭಾರತ ರತ್ನ ಅಟಲ್ ಬಿಹಾರಿ ವಾಜಪೆ ಯವರ ನಿಧನಕ್ಕೆ ತಾಲೂಕಿನ ವಿವಿಧಡೆಯಲ್ಲಿ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಶುಕ್ರವಾರ ಪಟ್ಟಣದ ಬಸವಣ್ಣ ದೇವಸ್ಥಾನದಲ್ಲಿ  ವಾಜಪೆಯವರ ಶ್ರದ್ಧಾಂಜಲಿ ಕಾರ್ಯಕರ್ಮ ಹಮ್ಮಿಕೊಳ್ಳಲಾಗಿತ್ತು. ವಾಜಪೆಯವರ  ಭಾವಚಿತ್ರಕ್ಕೆ ಪುಷ್ಪ ನಮನ ಹಾಗೂ ಅಶ್ರುತರ್ಪಣ ಸಲ್ಲಿಸಿ ಒಂದು ನಿಮಿಷದ ಮೌನ ಪ್ರಾರ್ಥನೆ ಮಾಡಲಾಯಿತು. ತದನಂತರ ಹಾಜರಿದ್ದ ಗಣ್ಯರು ವಾಜಪೇ ಯವರ ಕುರಿತು ಗುಣಗಾನ ಮಾಡಿ ನುಡಿನಮನ ಸಲ್ಲಿಸಿದರು

ನಂತರ ಶಿವಾಜಿ ಸರ್ಕಲ್ ನಲ್ಲಿ ವಾಜಪೆಯವರ ಭಾವಚಿತ್ರಕ್ಕೆ ಮಾಲರ್ಪಣೆಮಾಡಿ ಪುಷ್ಟನಮನ ಸಲ್ಲಿಸಿ ಶೃದ್ಧಾಂಜಲಿ ಅರ್ಪಿಸಲಾಯತು.

ಮಾಜಿ ಶಾಸಕ ವಿ.ಎಸ್.ಪಾಟೀಲ್, ಜಿ.ಪಂ ಸದಸ್ಯ ಎಲ್.ಟಿ.ಪಾಟೀಲ್, ಬಸವರಾಜ ಓಶಿಮಠ, ಗುಡ್ಡಪ್ಪ ಕಾತೂರ, ಮಹ್ಮದಗೌಸ ಅತ್ತಾರ, ಶರೀಫ ಕರಿಮಸಾಬನವರ, ಗಣೇಶ ಶಿರಾಲಿ, ಅಶೋಕ ಚಲವಾದಿ, ಕೆಂಜೋಡಿಗಲಿಬಿ, ಉಮೇಶ ಬಿಜಾಪುರ, ಅನಿಸ್ ಅತ್ತಾರ, ನಾಗಭೂಷಣ ಹಾವಣಗಿ, ನಾಗರಾಜ ಕುನ್ನೂರ, ಟಿಬೇಟಿಯನ್ ಬೌದ್ಧಬಿಕ್ಕುಗಳು, ಬಸವರಾಜ ಹರಿಜನ, ಮಹೇಶ ಹೊಸಕೊಪ್ಪ ಸೇರಿದಂತೆ ಮುಂತಾದವರು ವಾಜಪೆಯವರಿಗೆ ಶೃದ್ಧಾಂಜಲಿ ಅರ್ಪಿಸುವ ಸಂದರ್ಭದಲ್ಲಿ ಉಪಸ್ಥಿತರಿದ್ದರು.
 

Read These Next

ಪೂರ್ವಾನುಮತಿ ಇಲ್ಲದೆ ಕೇಂದ್ರಸ್ಥಾನ ತೊರೆದ ಮುಖ್ಯಾಧಿಕಾರಿಗಳಿಗೆ ಡಿಸಿ ನೋಟಿಸ್; ಹೊನ್ನಾವರ ಮುಖ್ಯಾಧಿಕಾರಿಗೆ ಕರ್ತವ್ಯದಿಂದ ಬಿಡುಗಡೆ

ಭಟ್ಕಳ ಪುರಸಭೆ ಮುಖ್ಯಾಧಿಕಾರಿ ಡಿ.ದೇವರಾಜು, ಕುಮಟಾ ಪುರಸಭೆ ಮುಖ್ಯಾಧಿಕಾರಿ ಸುರೇಶ್ ಎಂ.ಕೆ., ಅಂಕೋಲಾ ಪುರಸಭೆ ಮುಖ್ಯಾದಿಕಾರಿ ...