ಅರಣ್ಯ ಅತಿಕ್ರಮಣ ಸಾಗುವಳಿ ಜಮೀನಿಗೆ ಅಕ್ರಮ ಪ್ರವೇಶ;  ದೂರು ಪ್ರತಿದೂರು

Source: sonews | By sub editor | Published on 11th January 2018, 5:58 PM | Coastal News | Don't Miss |

ಮುಂಡಗೋಡ : ಅರಣ್ಯ ಅತಿಕ್ರಮಣ ಸಾಗುವಳಿ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ ಸಂಬಂದ ಪೊಲೀಸ ಠಾಣೆಯಲ್ಲಿ ದೂರು ಪ್ರತಿದೂರ ಪ್ರಕರಣ ದಾಖಲಾಗಿದೆ.

ತಾಲೂಕಿನ ಗೊಟಗೋಡಿಕೊಪ್ಪದ ಬಾಷಾ ಕೊಳಗಿ, ಸೋಮಣ್ಣ ನೆಗಳೂರ ಹಾಗೂ ಸುಧಾಕರ ಪನ್ನೇರ ಮೇಲೆ ಶಿವಪ್ಪ ಉತ್ತುಂಗಿ ದೂರು ನೀಡಿ ತಾಲೂಕಿನ ಗೊಟಗೋಡಿಕೊಪ್ಪದ ಸರ್ವೇನಂ 17 ರ ಪ್ಲಾಟ್ ನಂ 6ರಲ್ಲಿರುವ ಉತ್ತುಂಗಿಯವರ ಜಮೀನಿಗೆ ಮೇಲ್ಕಾಣಿಸಿದ ಆರೋಪಿತರು ಅಕ್ರಮವಾಗಿ ಪ್ರವೇಶಿಸಿ ಗುದ್ದು ತೆಗೆಯಲು ಪ್ರಯತ್ನಿಸಿದಾಗ ಇದನ್ನು ಪ್ರಶ್ನೆಸಿದ ಹೊಲದ ಮಾಲಿಕ ಶಿವಪ್ಪ ಗದಿಗೆಪ್ಪ ಉತ್ತಂಗಿ ಮತ್ತು ಈತನ ಪತ್ನಿ ಮಕ್ಕಳು ಹಾಗೂ ಅಳಿಯ ಬಸಪ್ಪನಿಗೆ ಅವಾಚ್ಯವಾಗಿ ಬೈದು ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ್ದಾರೆಂದು ದೂರು ದಾಖಲಾಗಿದೆ.

ಸುಧಾಕರ ಪನ್ನೇರ ಪ್ರತಿದೂರು ನೀಡಿ  ನಾವು ಉತ್ತಂಗಿಯ ಹೊಲಕ್ಕೆ ಹೋದಾಗ ಶಿವಪ್ಪ ಉತ್ತಂಗಿ, ಗದಿಗೆಪ್ಪ ಉತ್ತಂಗಿ ಶೇಕಪ್ಪ ಉತ್ತಂಗಿ, ಚೆನ್ನಮ್ಮ ಉತ್ತಂಗಿ  ಹಾಗೂ ಬಸವರಾಜ ನೆಗಳೂರ ಎಲ್ಲರೂ ಸೇರಿ ಬಾಷಾ ಕೊಳಗಿ, ಸೋಮಣ್ಣ ನೆಗಳೂರ ಹಾಗೂ ಸುಧಾಕರ ಪನ್ನೇರ ನಮ್ಮ ಮೇಲೆ ಹಲ್ಲೇ ಮಾಡಿ ಜೀವ ಬೇದರಿಕೆ ಹಾಕಿ ನಮ್ಮ ಜೀವ ಹೋದರೂ ನಿಮಗೆ ಹೊಲ ಬಿಟ್ಟಿಕೊಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆ  ಎಂದು ಪ್ರಕರಣ ಸುಧಾಕರ ಪನ್ನೇರ ದೂರು ದಾಖಲಿಸಿದ್ದಾರೆ  ಎರಡೂ ಪ್ರತ್ಯೇಕ ದೂರಗಳ ಮೇಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ
 

Read These Next

ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಗೋಕರ್ಣ ದೇವಸ್ಥಾನ ಮತ್ತೆ ಸರ್ಕಾರದ ಸುಪರ್ದಿಗೆ

ಕಾರವಾರ : ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಮಟಾ ತಾಲೂಕಿನ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಶ್ರೀರಾಮಚಂದ್ರಾಪುರ ಮಠದ ...

ಹೆದ್ದಾರಿ ಅಗಲೀಕರಣ; ಶಿರಾಲಿಯಲ್ಲಿ ತುರ್ತು ಸಭೆ; ಅಧಿಕಾರಿಗಳ ಗೈರು; ಸಾರ್ವಜನಿಕರಿಂದ ತೀವ್ರ ಆಕ್ರೋಶ

ಭಟ್ಕಳ: ತಾಲೂಕಿನ ಶಿರಾಲಿ ಗ್ರಾ.ಪಂ. ವ್ಯಾಪ್ತಿಯ ರಾ.ಹೆ.66 ರ ಅಗಲೀಕರಣ ವಿಷಯಕ್ಕೆ ಸಂಬಂಧಿಸಿದಂತೆ ಸೋಮವಾರದಂದು ನಡೆದ ತುರ್ತು ಸಭೆಗೆ ...

ಕೋಲಾರ ನಗರಸಭೆಗೆ ಮತ್ತೆ ವಕ್ಕರಿಸಿದ ಭ್ರಷ್ಠ ಆಯುಕ್ತ ; ನಗರಸಭಾ ಸದಸ್ಯ ಮುರಳಿಗೌಡ ಆರೋಪ

ಕೋಲಾರ : ಕೋಲಾರ ನಗರಸಭೆಯ ಹಿಂದಿನ ಪೌರಾಯುಕ್ತರಾಗಿ ಕಾರ್ಯ ನಿರ್ವಹಿಸದ್ದ ಭ್ರಷ್ಠ ಪೌರಾಯಕ್ತ ರಾಮ್‍ಪ್ರಕಾಶ್ ಹಲವಾರು ಆರೋಪಗಳನ್ನು ...

ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಗೋಕರ್ಣ ದೇವಸ್ಥಾನ ಮತ್ತೆ ಸರ್ಕಾರದ ಸುಪರ್ದಿಗೆ

ಕಾರವಾರ : ಪುರಾಣ ಪ್ರಸಿದ್ಧ ಶ್ರೀಕ್ಷೇತ್ರ ಕುಮಟಾ ತಾಲೂಕಿನ ಗೋಕರ್ಣದ ಶ್ರೀಮಹಾಬಲೇಶ್ವರ ದೇವಸ್ಥಾನವನ್ನು ಶ್ರೀರಾಮಚಂದ್ರಾಪುರ ಮಠದ ...