ಎಪಿ‌ಎಮ್‌ಸಿ ಚುನಾವಣೆ; ಕಾಂಗ್ರೆಸ್ ಭರ್ಜರಿ ಗೆಲವು; ಬಿಜೆಪಿ ಮುಖಭಂಗ

Source: S O News service | By Staff Correspondent | Published on 22nd March 2017, 6:01 PM | Coastal News | Don't Miss |

ಮುಂಡಗೋಡ : ಎಪಿ‌ಎಮ್‌ಸಿ ಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಜಯಗಳಿಸಿ ಬಿಜೆಪಿ ಮುಖಭಂಗ ಅನುಭವಿಸಿದೆ
ಮಾ.೧೯ ರಂದು ನಡೆದ ನಡೆದ ಎಪಿ‌ಎಮ್‌ಸಿ ಚುನಾಣೆಗೆ ಇಂದು ಫಲಿತಾಂಶ ಹೊರಬಿದ್ದಿದೆ. ೧೧ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ೮ ಹಾಗೂ ಬಿಜೆಪಿ ೩ ಸ್ಥಾನಗಳನ್ನು ಪಡೆದುಕೊಂಡಿದೆ.


ಕಾಂಗ್ರೆಸ್ ಜಯಗಳಿಸಿದ ಕ್ಷೇತಗಳು ವಿಜಯಲಕ್ಷ್ಮೀ ಹೀರೆಮಠ (ಹುನಗುಂದ),ಅಶೋಕ ತಡಸದ (ಇಂದೂರ), ದೇವು ಪಾಟೀಲ(ಮೈನಳಿ),ಬಾಬಣ್ಣ ಲಾಡನವರ (ಚಿಗಳ್ಳಿ), ಬಾಬಣ್ಣ ಕೋಣನಕೇರಿ(ಪಾಳಾ), ಲಿಂಗನಗೌಡ ಪಾಟೀಲ(ಕಾತೂರ),ಕಲ್ಮೇಶಿ ವಾಲ್ಮೀಕಿ (ಸಾಲಗಾಂವ) ಹಾಗೂ ಮಂಜುನಾಥ ವರ್ಣೇಕರ(ಮುಂಡಗೋಡ).
ಬಿಜೆಪಿ ಜಯಗಳಿಸಿದ ಕ್ಷೇತ್ರಗಳು ನಿಂಗಪ್ಪ ಕವಟೆ (ನಂದಿಗಟ್ಟಾ), ಶಿವಪ್ಪ ನಾಯಕ್(ಬೆಡಸ್‌ಗಾಂವ) ಹಾಗೂ ಸುಧಾ ಪಾಟೀಲ(ಮಳಗಿ)
ಕಾಂಗ್ರೆಸ್ ಎಂಟು ಸ್ಥಾನಗಳನ್ನು ಪಡೆದುಕೊಂಡು ಎಪಿ‌ಎಮ್‌ಸಿ ಅಧಿಕಾರ ಗದ್ದುಗೆ ಏರಲಿದೆ
ಗೆಲುವಿನಿಂದ ಬೀಗಿದ ಕಾಂಗ್ರೆಸ್ ಕಾರ್ಯಕರ್ತರು ಸಿಡಿಮದ್ದು ಸಿಡಿಸಿ ಎಪಿ‌ಎಮ್‌ಸಿ ಚುನಾಯಿತ ಅಭ್ಯರ್ಥಿಗಳು ಹಾಗೂ ಕಾಂಗ್ರೆಸ ಹಿರಿಯ ಧುರಿಣರು ಸೇರಿದಂತೆ ಮೇರವಣಿಗೆ ನಡೆಸಿದರು
ಮೇರವಣೆಗೆಯಲ್ಲಿ ಚುನಾಯಿತ ಎಪಿ‌ಎಮ್‌ಸಿ ಸದಸ್ಯರು,ಕಾಂಗ್ರೆಸ್ ಅಧ್ಯಕ್ಷ ರವಿಗೌಡಾ ಪಾಟೀಲ, ಎಲ್.ಟಿ.ಪಾಟೀಲ, ರಫೀಕ ಇನಾಮದಾರ, ಮಹ್ಮದಗೌಸ ಮಕಾನದಾರ, ಕೃಷ್ಣಾ ಹಿರೇಹಳ್ಳಿ, ಪಿ.ಎಸ್.ಸಂಗೂರಮಠ, ಲತೀಫ ನಾಲಬಂದ, ಅಲ್ಲಿಖಾನ ಪಠಾಣ, ರಾಮಕೃಷ್ಣ ಮೂಲಿನಿ ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...