ವಿವಿಧ ಬೇಡಿಕೆಗಳು ಈಡೆರಿಸುವಂತೆ ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ 

Source: S O News service | By Staff Correspondent | Published on 20th January 2017, 3:17 PM | Coastal News | Don't Miss |

ಮುಂಡಗೋಡ : ವಿವಿಧ ಬೇಡಿಕೆಗಳು ಈಡೆರಿಸುವಂತೆ ಒತ್ತಾಯಿಸಿ sಸಿ‌ಐಟಿಯು ಸಂಯೋಜಿತ ಅಂಗನವಾಡಿ ಕಾರ್ಯಕರ್ತೆಯರು ಶುಕ್ರವಾರ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗಳಿಗೆ ತಹಶೀಲ್ದಾರ ಮುಖಾಂತರ ಮನವಿ ಅರ್ಪಿಸಿ, ಅಂಗನವಾಡಿಗಳಿಗೆ ಸಂಬಂದ ಪಡುವ  ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಿಗೆ, ಅಕ್ಷರದಾಸೋಹ ಇಲಾಖೆಗೆ ಮನವಿ ಅರ್ಪಿಸಿದರು
ಪ್ರತಿಭಟನೆಯು ಪಟ್ಟಣದ ಪ್ರವಾಸಿಮಂದಿರದಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಾಲೂಕ ದಂಡಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ೩೦ ಬೇಡಿಕೆಗಳನ್ನು ಇಟ್ಟಿರುವ ಅವರು ಸಮಗ್ರ ಶಿಶು ಅಭಿವೃದ್ದಿ ಯೋಜನಗೆ ಕೇಂದ್ರ ಸರ್ಕಾರವು ೨೦೧೬-೧೭ ನೇ ಸಾಲಿನಲ್ಲಿ ಕಡಿತ ಮಾಡಿರುವ ಅನುದಾನವನ್ನು ಸರ್ಕಾರ ವಾಪಸ್ ಕೊಡಬೇಕು. ಸುಪ್ರೀಂ ಕೊರ್ಟ ಇತ್ತಿಚಿಗೆ ನೀಡಿರುವ ತೀರ್ಪಿನಂತೆ ಸಮಾನ ಕಲಸಕ್ಕೆ ಸಮಾನ ವೇತನ ನಿಯಮವನ್ನು ಅಂಗನವಾಡಿ ಕಾರ್ಯಕರ್ತೆರಿಗೆ ಅನ್ವಯಿಸಬೇಕು. ಅಂಗನವಾಡಿ ನೌಕರರ  ಕೂಲಿಯನ್ನು ಗ್ರಾಹಕರ ಬೆಲೆ ಸೂಚ್ಯಂಕಕ್ಕೆ ಹೊಂದಿಸಬೇಕು. ಯಾವುದೆ ಹೆಸರಿನ ರೂಪದಲ್ಲಿ ಸಮಗ್ರ ಶಿಶು ಅಭಿವೃದ್ದಿ ಯೋಜನೆಯ ಖಾಸಗೀಕರಣಗೊಳಿಸುವುದನ್ನು ನಿಲ್ಲಿಸಬೇಕು. ಮೂರನೇ ಹಾಗೂ ನಾಲ್ಕನೇ ದರ್ಜೆ ನೌಕರರಂತೆ ಅಂಗನವಾಡಿ ಕಾರ್ಯಕರ್ತೆರನ್ನು ಪರಿಗಣಿಸಬೇಕು. ಸಣ್ಣಪುಟ್ಟ ದೋಷಗಳಿಗೆ ಕೆಲಸದಿಂದ ಅಮಾನ್ಯ ಮಾಡದೇ  ಕಾರ್ಯಕರ್ತೆ ಹಾಗೂ ಸಹಾಯಕರಿಗೆ ಪ್ರತ್ಯೇಕ ಸೇವಾ ನಿಯಮಾವಳಿ ರೂಪಿಸಬೇಕು. ಕೆಲಸದಿಂದ ವಜಾಗೊಂಡಿರುವ ಕಾರ್ಯಕರ್ತೆಯರನ್ನು ಪುನಃ ಸೇವೆಗೆ ತೆಗೆದುಕೊಳ್ಳಬೇಕು. ಅಂಗನವಾಡಿ ಕೇಂದ್ರಗಳ ಬಾಡಿಗೆ ಇರುವ ಮಾನದಂಡ ಬದಲಾವಣೆ ಮಾಡಬೇಕು. ಅಂಗನವಾಡಿಗೆ ಬೇಕಾಗಿರುವ ಗ್ಯಾಸ್, ಸೌದೆ, ವಿದ್ಯುತ್ ಬಿಲ್ ಕಟ್ಟಡದ ಬಾಡಿಗೆ ನಿಯಮಿತವಾಗಿ ನೀಡಬೇಕು.  ಅಂಗನವಾಡಿ ಕಾರ್ಯಕರ್ತೆಯರ ಹಾಗೂ ಸಹಾಯಕರ ಇರುವ ಕೆಲಸ ಏನೆಂಬುದನ್ನು ನಿಚ್ಚಳ ಪಡಿಸಿ ಇಲಾಖೇತರ ಕೆಲಸ ಮಾಡಿಸುವುದು ನಿಲ್ಲಿಸಬೇಕು. ಮಿನಿ ಕೇಂದ್ರಗಳನ್ನು ಪೂರ್ಣ ಕೇಂದ್ರಗಳಾಗಿ ಪರಿವರ್ತಿಸಬೇಕು. ಮೇಲ್ವಿಚಾರಕ ಹುದ್ದೆ ೧೦೦% ರಷ್ಟು ಕಾರ್ಯಕರ್ತೆಗೆ ನೀಡಬೇಕು ಸೇವಾ ಜೇಷ್ಠತಾ ಆಧಾರದ ಮೇಲೆ ಮುಂಬಡ್ತಿ ನೀಡಬೇಕು. ಅಂಗನವಾಡಿಗಳಿಗೆ ಉತ್ತಮ ಗುಣಮಟ್ಟದ ಪೌಷ್ಠಕ ಆಹಾರ ಸಾಮಗ್ರಿಗಳನ್ನು ಸಾಕಷ್ಟು ಪ್ರಮಾಣದಲ್ಲಿ ಪೊರೈಸಬೇಕು. ವರ್ಗಾವಣೆ ಹಾಗೂ ಪದೋನ್ನತಿಯನ್ನು ಸಮರ್ಪಕವಾಗಿ ಮಾಡಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ
ತಾಲೂಕ ಅಧ್ಯಕ್ಷೆ ನೇತ್ರಾವತಿ ಭರ್ತನಳ್ಳಿ, ಕಾರ್ಯದರ್ಶಿ ಧರ್ಮಾವತಿ, ಖಜಾಂಚಿ ವಿಜಯಲಕ್ಷ್ಮೀ, ಉಪಾಧ್ಯಕ್ಷರಾದ ಮುಕ್ತಾ ಪಿಸೆ, ಅಮೀನಾ ಸೇರಿದಂತೆ ತಾಲೂಕಿನ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಉಪಸ್ಥಿತರಿದ್ದರು
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...