ಮುಂಡಗೋಡ: ದುಸ್ಥಿತಿಯಲ್ಲಿ ಅಂಗನವಾಡಿ ಕೇಂದ್ರ

Source: sonews | By sub editor | Published on 12th August 2018, 11:55 PM | State News | Don't Miss |

ಮುಂಡಗೋಡ : ತಾಲೂಕಿನ ಕಲಕೇರಿ ಹೊನ್ನಿಕೊಪ್ಪ ಗ್ರಾಮದಲ್ಲಿ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ ಜಾಗದ ಸಮಸ್ಯೆಯಿಂದ ಕೊಟ್ಟಿಗೆಯಂಥ ಸ್ಥಳದಲ್ಲಿ  ಮಕ್ಕಳ ಆಟ ಪಾಠ ಊಟ ಎಲ್ಲ ಒಂದೇ ಸ್ಥಳದಲ್ಲಿ. ಜವುಳು ಹಿಡಿದ ನೆಲ ಕುಳಿತು ಕೊಳ್ಳಲು ಕಟ್ಟಿಗೆ ಬಾಕ್ ಗಳನ್ನು ಹಾಕಲಾಗಿದೆ. ಮಕ್ಕಳ ಕಾಲುಗಳು ನೆಲಕ್ಕೆ ತಾಕುತ್ತಿರುವುದರಿಂದ ಮಕ್ಕಳ ಆರೋಗ್ಯ ದ ಮೇಲೆ ಪರಿಣಾಮ ಬಿಳಲಿದೆ.

ಈ ಗ್ರಾಮದಲ್ಲಿ ಜಾಗದ ಸಮಸ್ಯೆಯಿಂದ ಅಂಗನವಾಡಿ ಕೇಂದ್ರಕ್ಕೆ ಸ್ವಂತ ಕಟ್ಟಡ ಇಲ್ಲದಂತಾಗಿದ್ದು, ಕಟ್ಟಡದ ಕೊರತೆಯಿಂದ ಕಂದಮ್ಮಗಳು ಕುಳಿತುಕೊಳ್ಳಲು ಸರಿಯಾದ ಜಾಗವಿಲ್ಲ ಆಟ ಆಡಲು ಸ್ಥಳವಿಲ್ಲದೆ ಮೂಲ ಸೌಕರ್ಯಗಳ ಕೊರತೆಯಿಂದ ಕೇಂದ್ರ ನರಳುತ್ತಿರುವುದರ ಜೊತೆಗೆ ಸೋರುತ್ತಿರುವ ಕಟ್ಟಡದಲ್ಲಿ ಮಕ್ಕಳು ಈಗ ಕಲಿಯುವಂತಹ ಪರಿಸ್ಥಿತಿ ಇಲ್ಲಿ ನಿರ್ಮಾಣಗೊಂಡಿದೆ.

ತಾಲೂಕಿನ ಕಲಕೇರಿ ಗ್ರಾಮದಲ್ಲಿ ಮಹಿಳಾ ಮತ್ತು ಮಕ್ಕಳು ಕಲ್ಯಾಣ ಇಲಾಖೆ ವತಿಯಿಂದ 2004ರಿಂದ ಈ ಗ್ರಾಮದ ದೇವಸ್ಥಾನದ ಪಕ್ಕದಲ್ಲಿ ಚಿಕ್ಕ ಕೊಣೆಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿವರಗೆ 14 ವರ್ಷಗಳು ಗತಿಸಿದರು ಇಲ್ಲಿನ ಮಕ್ಕಳಿಗೆ ಕಟ್ಟಡದ ಭಾಗ್ಯದೊರಕಿಲ್ಲ. ಮತ್ತು ಈ ಕೇಂದ್ರದಲ್ಲಿ ಸಹಾಯಕಿ ಇಲ್ಲದೇ ಕಾರ್ಯಕರ್ತೆ ಒಬ್ಬರೆ ಎಲ್ಲವನ್ನು ನೋಡುತ್ತಿದ್ದಾರೆ. ಈ ಹಿಂದೆ ಸರ್ಕಾರದಿಂದ ಕಟ್ಟಡಕ್ಕೆಂದು ಮೂರು ವರ್ಷದ ಹಿಂದೆ ಹಣ ಮಂಜೂರಾಗಿದ್ದರು ಊರಿನಲ್ಲಿ ಯಾರು ಜಾಗ ನೀಡದೆಯಿದ್ದಾಗ ಮಂಜೂರಾದ ಹಣ ವಾಪಸಾಗಿದೆ ಎನ್ನಲಾಗಿದೆ.
ಈ ಅಂಗನವಾಡಿ ಕೇಂದ್ರವು ಈ ಚಿಕ್ಕ ಕೋಣೆಯಲ್ಲಿ  16 ಕ್ಕೂ ಹೆಚ್ಚು ಮಕ್ಕಳು ಕಲೆಯುತ್ತಿದ್ದು, ಇಲ್ಲಿ ಸರಿಯಾಗಿ ಗಾಳಿ-ಬೆಳಕು ಇಲ್ಲದ ಕಾರಣ ಕತ್ತಲಲ್ಲಿ ಆಟ-ಪಾಠ ಮಾಡುವಂತಾಗಿದೆ. ಮತ್ತು ಶೌಚಾಲಯ, ಆಟದ ಮೈದಾನ, ಹೀಗೆ ಇಲ್ಲಿ ಮೂಲ ಸೌಲಭ್ಯದಕೊರತೆಯೆ ಎದ್ದು ಕಾಣುತ್ತಿದೆ. ಇನ್ನು ಮಕ್ಕಳಿಗೆ ಆಹಾರವನ್ನು ಒದಗಿಸಿರುವುದು ಬಿಟ್ಟರೆ ಈ ಅಂಗನವಾಡಿಗೆ ಯಾವುದೇ ಮೂಲಭೂತ ಸೌಲಭ್ಯಗಳು ಇಲ್ಲದಂತಾಗಿದೆ. ಈ  ಒಂದೇ ಕೋಣೆಯಲ್ಲಿ ಮಕ್ಕಳ ವಿದ್ಯಾಭ್ಯಾಸ, ಆಹಾರ ಸಾಮಗ್ರಿಗಳ ದಾಸ್ತಾನು, ಅಡುಗೆ, ವಿಶ್ರಾಂತಿ ಎಲ್ಲವೂ ನಡೆಯುತ್ತಿವೆ. 
ಇಷ್ಟೆಲ್ಲಾ ಸಮಸ್ಯೆ ಇದ್ದರೂ ಈ ಭಾಗದ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸದೆ ಇರುವುದು ಮಕ್ಕಳ ಪಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಸಂಬಂಧ ಪಟ್ಟ  ಇಲಾಖೆಯವರು ಹಾಗೂ ಜನಪ್ರತಿನಿಧಿಗಳು ಈ ಬಗ್ಗೆ ಗ್ರಾಮಸ್ಥರನ್ನು ಮನವೋಲಿಸಿ ಅಂಗನವಾಡಿ ಕಟ್ಟಡಕ್ಕೆ ಜಾಗ ತೆಗೆದುಕೊಂಡು  ಅಲ್ಲಿನ ಮೂಲಭೂತ ಸಮಸ್ಯೆ ಪರಿಹರಿಸುತ್ತಾರೋ ಕಾದು ನೋಡಬೇಕಿದೆ. 

ಈ ಕುರಿತು ತಾಲೂಕಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಮಾತನಾಡಿ, ಈ ಗ್ರಾಮಕ್ಕೆ ಮೂರು ವರ್ಷದ ಹಿಂದೆಯೇ ಕಟ್ಟಡಕ್ಕೆ ಹಣ ಮಂಜೂರಾಗಿತ್ತು. ಮೊದಲು ಜಾಗ ನೀಡಲು ಮುಂದಾಗಿದ್ದರು ನಂತರ ದಿನದಲ್ಲಿ ಜಾಗ ನೀಡಲು ತಕರಾರು ಮಾಡಿದರಿಂದ  ಬಂದ ಹಣ ಸರ್ಕಾರಕ್ಕೆ ವಾಪಸಾಗಿದೆ. ಈ ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಬೇಟಿ ನೀಡಿ ಪರಿಶೀಲಿಸಿದ್ದೆನೆ. ಅಂಗನವಾಡಿ ಮುಂದೆಯೇ ಒಳ್ಳೆಯ ಬಾಡಿಗೆ ಮನೆ ನೋಡಲಾಗಿದೆ ಎರಡ್ಮೂರು ದಿನದಲ್ಲಿ ಸ್ಥಳಾಂತಿರಸಲಾಗುವದು. ಮುಂದಿನ ದಿನದಲ್ಲಿ ಈ ಗ್ರಾಮದಲ್ಲಿ ಯಾರಾದರೂ ಜಾಗ ನೀಡಲು ಮುಂದೆ ಬಂದರೆ ಇಲಾಖೆಯಿಂದ ಹಣ ಮಂಜೂರ ಮಾಡಿಸಲು ಪ್ರಯತ್ನಿಸುತ್ತೆನೆ ಎಂದರು. 

ಈ ಭಾಗದ ಮೇಲ್ವಾಚಾರಿಕಿ ಮಾತನಾಡಿ,  ನಮ್ಮ ಇಲಾಖೆಯಿಂದ ಯಾವದೇ ತಪ್ಪಾಗಿಲ್ಲಾ. ಈ ಭಾಗದ ಮೇಲ್ವಾಚಾರಿಕೆಯಾಗಿ ನಾನು ಪ್ರಾಮಾಣಿಕ ಕೆಲಸ ಮಾಡುತ್ತಿದ್ದೆನೆ. ಕೆಲವು ಗ್ರಾಮಸ್ಥರು ಕಟ್ಟಡಕ್ಕೆ ಜಾಗ ನೀಡಲು ನಿರಾಕರಿಸಿದರಿಂದ ಈ ಸಮಸ್ಯೆ ಉದ್ಬವಾಗಿದೆ. ಈ ಬಗ್ಗೆ ಗ್ರಾಮಸ್ಥರಲ್ಲಿ ಜಾಗ ನೀಡುವಂತೆ ಹಲವು ಬಾರಿ ಮನವಿ ಮಾಡಿದ್ದೆವೆ ಆದರೆ ಈ ವರೆಗೂ ಜಾಗ ಸಿಕ್ಕಿಲಾ ಎಂದು ತಮ್ಮ ಅಸಹಾಯಕತೆಯನ್ನು ಹೊರಹಾಕಿದರು. 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...