ಮೋದಿ ಹೆಸರಲ್ಲಿ ಮತಕೇಳದೆ ತನ್ನ ಹೆಸರಿನಲ್ಲಿ ಮತಕೇಳಲಿ ಬಂಡವಾಳ ಹೊರಬರುತ್ತದೆ : ಅಸ್ನೋಟಿಕರ

Source: sonews | By Staff Correspondent | Published on 23rd March 2019, 6:45 PM | Coastal News | Don't Miss |

ಮುಂಡಗೋಡ : ಅನಂತಕುಮಾರ ಹೆಗಡೆ ಮೋದಿ ಹೆಸರಿನಲ್ಲಿ ಮತ ಕೇಳುವುದನ್ನು ಬಿಟ್ಟು ತನ್ನ ಹೆಸರಿನಲ್ಲಿ ಮತ ಕೇಳಲಿ ಆಗಲೇ ಈತನ ಬಂಡವಾಳ ಹೊರ ಬರುತ್ತದೆ ಎಂದು ಜೆಡಿಎಸ್ ಸಂಭವನಿಯ ಲೋಕಸಭಾ ಅಭ್ಯರ್ಥಿ ಆನಂದ ಅಸ್ನೋಟಿಕರ ಹೇಳಿದರು ಅವರು ಪಟ್ಟಣದ ಖಾಸಗಿ ಹೋಟಲ್ ನಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು

25ವರ್ಷಗಳಲ್ಲಿ ತಾಲೂಕಿನ ಹಾಗೂ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಸಂಸತ್‍ನಲ್ಲಿ ಎದ್ದು ನಿಂತು ಒಂದು ಬಾರಿಯೂ ಮಾತನಾಡಲಿಲ್ಲ ಆದರೆ ಒಂದು ಬಾರಿ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿ ದೇಶದಲ್ಲಿ ವಿರೋಧ ವ್ಯಕ್ತವಾದಾಗ ಸಂಸತ್ ಕಲಾಪದಲ್ಲಿ ಎದ್ದು ನಿಂತು ಕ್ಷಮೆ ಕೇಳಿದ್ದಾನೆ. ಇದರಿಂದ ಪಕ್ಷದ ಹಾಗೂ ಜಿಲ್ಲೆಯ ಹೆಸರನ್ನು ಕೆಡಿಸಿದ್ದಾನೆ. ರಾಜಕಾರಣಕ್ಕಾಗಿ ಏನು ಬೇಕಾದರೂ ಮಾಡುತ್ತಾನೆ. ವಿರೋಧ ಪಕ್ಷದ ಯಾವೊಬ್ಬ ನಾಯಕರಿಗೂ ಮೋದಿ ಹಗುರವಾಗಿ ಮಾತನಾಡುವುದಿಲ್ಲ. ಆದರೆ ಮೇಲ್ಜಾತಿಯಿಂದ ಬಂದು ಹಿಂದುಳಿದ ವರ್ಗಗಳಿಗೆ ಸಂಸ್ಕøತ ಕಲಿಸಬೇಕಾದ ಈತ ಸಮಾಜದಲ್ಲಿ ಒಂದು ಕೆಟ್ಟ ಹುಳುವಾಗಿದ್ದಾನೆ. ಜಿಲ್ಲೆಗೇ ಒಂದು ಕ್ಯಾನ್ಸರ್ ರೋಗವಾಗಿದ್ದಾನೆ
ಪ್ರಧಾನಿ ಮೋದಿಯವರು ಭಾರತದ 130 ಕೋಟಿ ಜನರಿಗೆ ಯೋಜನೆಗಳನ್ನು ತರುತ್ತಿದ್ದೇನೆ ಎಂದು ಹೇಳುತ್ತಾರೆ. ಅವರೆಂದು ವಿರೋಧ ಪಕ್ಷದವರಿಗೆ ಕೆಳಮಟ್ಟದ ಮಾತನಾಡುವುದಿಲ್ಲ. ಆದರೆ ಅನಂತಕುಮಾರ ದಿನ ನಿತ್ಯ ಕೆಳಮಟ್ಟದಲ್ಲಿ ಮಾತನಾಡುತ್ತಾರೆ ಇವರ ಕೆಟ್ಟದಾಗಿ ನಡುವಳಿಕೆಯಿಂದ ಸಮಾಜದಲ್ಲಿ ಹುಳು ಇದ್ದಂತಾಗಿದೆ ಹಾಗೆ ನಮ್ಮ ಜಿಲ್ಲೆಗೆ ಕ್ಯಾನ್ಸರ  ಇದ್ದಹಾಗೆ ಇವರನ್ನ ತಿರಸ್ಕರಿಸಿ ಬದಲಾವಣೆ ತನ್ನಿ. ತಮಗೆ ಒಂದು ಅವಕಾಶ ಮಾಡಿಕೊಟ್ಟರೆ ಪ್ರತಿ 40 ದಿವಸಕ್ಕೊಮ್ಮೆ ತಾಲೂಕಿಗೆ ಭೇಟಿ ನೀಡಿ ಜನಸ್ಪಂದನ ಕಾರ್ಯಕ್ರಮ ಇಟ್ಟಿಕೊಳ್ಳುತ್ತೇನೆ ನಾನೇನು ಹಾಗೆ ಮಾಡದೇ ಇದ್ದರೆ ಮುಂದಿನ ಸಲ ನನ್ನನ್ನು ತಿರಸ್ಕರಿಸಿ

ಅನಂತಕುಮಾರ ಮೊದಲ ಬಾರಿ ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಿ, ಎರಡನೇ ಬಾರಿ ವಾಜಪೇಯಿ ಹೆಸರಿನಲ್ಲಿ, ಮೂರನೇ ಬಾರಿ ಬಂಗಾರಪ್ಪ ಬಿಜೆಪಿ ಸೇರಿದಾಗ, ನಾಲ್ಕನೇ ಬಾರಿ ಮೋದಿಯ ಅಲೆಯಿಂದ ಆಯ್ಕೆಯಾಗಿದ್ದಾನೆ. ಜಿಲ್ಲೆಯ ಯುವಕರು ಮತ್ತು ಸಾರ್ವಜನಿಕರು ಅನಂತಕುಮಾರ ಬಗ್ಗೆ ಒಮ್ಮೆ ಯೋಚಿಸಿ. ಸತತವಾಗಿ 5ಬಾರಿ ಆಯ್ಕೆಯಾಗಿ ಜಿಲ್ಲೆಗೆ ಮತ್ತು ತಾಲೂಕಿಗೆ ಈತನ ಕೊಡುಗೆ ಏನು? ಹಿಂದೂ ಧರ್ಮದ ಬಗ್ಗೆ ಅಷ್ಟು ಅಭಿಮಾನವಿದ್ದರೆ ಮತ್ತು ಗಂಡಸುತನವಿದ್ದರೆ ಕಾಶಿಯಲ್ಲಿರುವ ಎಲ್ಲ ಹಿಂದೂ ಗುರುಗಳನ್ನು ಒಗ್ಗೂಡಿಸಿ ನಮ್ಮ ಜಾತಿಯ ಪದ್ಧತಿಗಳನ್ನು ನಿರ್ಮೂಲನೆ ಮಾಡಿ ಒಂದೇ ಧರ್ಮ ಮಾಡಲಿ. ಹಿಂದೂ ಸನಾತನ ಧರ್ಮದ ಬಗ್ಗೆ ಮಾತನಾಡುವ ಈತ ದಲಿತ ಮತ್ತು ಹಿಂದುಳಿದ ವರ್ಗದ ಮಹಿಳೆಯರ ಮೇಲೆ ಅತ್ಯಾಚಾರವಾದಾಗ ಒಂದು ದಿನವಾದರೂ ಇದರ ಬಗ್ಗೆ ಮಾತನಾಡಿದ್ದಾನೆಯೇ?  ಉತ್ತರಪ್ರದೇಶ ಮತ್ತು ಬಿಹಾರ ರಾಜ್ಯಗಳಲ್ಲಿ ನಡೆದ ಅತ್ಯಾಚಾರದ ಬಗ್ಗೆಯೂ ಮಾತನಾಡಲಿಲ್ಲ ಎಂದು ಅನಂತಕುಮಾರ ವಿರುದ್ಧ ಹರಿಹಾಯ್ದರು
 ಜಿಲ್ಲೆಯ ಬದಲಾವಣೆಮಾಡಿ ಅಭಿವೃದ್ದಿಮಾಡಿ ಉದ್ಯೋಗ ಸೃಷ್ಠಿಸಲು ವಿಫಲ ಅವಕಾಶವಿದೆ ಇದರಿಂದ  ಯುವಕರಿಗೆ ಉದ್ಯೋಗವಕಾಶಗಳು ಸಿಗುತ್ತವೆ. ಪರಿಸರವಾದಿಗಳಿಂದ ನಮ್ಮ ಜಿಲ್ಲೆ ಬದಲಾವಣೆಯಾಗುತ್ತಿಲ್ಲ ಅಭಿವೃದ್ದಿಯಾಗುತ್ತಿಲ್ಲಾ ಎಂಬ ದಾಟಿಯಲ್ಲಿ ಮಾತನಾಡಿದ ಅವರು ಪರಿಸರವಾದಿಗಳು ಅನಂತಕುಮಾರ ಹೆಗಡೆ ಸಂಬಂದಿಗಳು ಆದ್ದರಿಂದ ಬದಲಾವಣೆಯಾಗುತ್ತಿಲ್ಲ ಆದ್ದರಿಂದ ರೇಲ್ವೆ ಯೋಜನೆಗಳು ಕಾರ್ಯಗತವಾಗುತ್ತಿಲ್ಲ. ಮಂಗಳೂರ ಉಡುಪಿ ಹಾಗೂ ಕೆರಳದಲ್ಲಿ ಬದಲಾವಣೆಯಾಗುತ್ತಿವೆ ಗುಜರಾತನಲ್ಲಿ 18-20  ಬಂದರರುಗಳಾಗಿವೆ. ನಮ್ಮ ಜಿಲ್ಲೆಗೆ ಒಂದು ಬಂದರ ಬೇಕಾಗಿದೆ ಜಿಲ್ಲೆಯಲ್ಲಿ ಅಭಿವೃದ್ದಿಮಾಡಲು ವಿಫಲ ಅವಕಾಶವಿದೆ. ಸಿಬರ್ಡ್,  ಕೈಗಾ ದ ಐದು ಮತ್ತು ಆರನೇ ರಿಯಾಕ್ಟರ ಬರುತ್ತಿದೆ  15-20 ಸಾವಿರ ಉದ್ಯೋಗ ಸೃಷ್ಟಿಯಾಗುವ ಅವಕಾಶವಿದೆ ಮುಂಡಗೋಡ ತಾಲೂಕಿನ ಯುವಕರಿಗೆ ಸುಮಾರು 1000 ಉದ್ಯೋಗಗಳು ಸಿಗುವ ಅವಕಾಶವಿದೆ ಲೋಕಸಭಾ ಸದಸ್ಯರಾಗಿ ಹೋರಾಟ ಮಾಡಬಹುದು ಕಾನೂನತ್ಮಕವಾಗಿ ಸ್ಥಳಿಯರಿಗೆ ಮೋದಲು ಉದ್ಯೋಗ ನೀಡಿ ನಂತರ ರಾಜ್ಯದ ಜನರಿಗೆ ನಂತರ ಹೊರಜನರಿಗೆ ಆದರೆ ಈ ಕುರಿತು ಲೋಕಸಭಾ ಸದಸ್ಯರು ಹೋರಾಟ ಮಾಡಬೇಕಲ್ಲಾ   
ಕೇಂದ್ರ ಕೌಶಲ್ಯಾಭಿವೃದ್ಧಿ ಸಚಿವರಾಗಿ ಯುವಕರಿಗೆ ಎಷ್ಟು ಉದ್ಯೊಗ ಸೃಷ್ಠಿ ಮಾಡಿಕೊಟ್ಟಿದ್ದಾರೆ ಎಂಬುದು ಹೇಳಲಿ 

ಅರಣ್ಯ ಅತಿಕ್ರಮಣ ಕುರಿತು ಮಾತನಾಡುವುದಿಲ್ಲ.  ಪಕ್ಕದ ಯಲ್ಲಾಪುರ ತಾಲೂಕಿನ ಅವರದೇ ಸಮಾಜದ ಜನರಿಗೆ ಕೇಳಿ ಅಡಕೆ ಬೆಳೆಹಾನಿ ರೈತ ಸಾಲಮನ್ನಾ ಸಂಬಂದಿಸಿ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ. ಲೋಕಸಭಾ ಸದಸ್ಯನಾಗುವುದು ದೊಡ್ಡ ಮಾತಲ್ಲ ಜನರ ಅಶೋತ್ತರಗಳಿಗೆ ಸ್ಪಂದಿಸುವಂತಾಗಿರಬೇಕು. ನನಗೆ ಅವಕಾಶ ಮಾಡಿಕೊಟ್ಟರೆ ನನ್ನ ಧ್ಯೆಯ ಅಭಿವೃದ್ದಿ ಅಭಿವೃದ್ಧಿ ಅಭಿವೃದ್ಧಿ  ಎಂದರು

ಈ ವೇಳೆ ಡಾ. ಶಶಿಭೂಷಣ ಹೆಗಡೆ, ಜಿಲ್ಲಾಧ್ಯಕ್ಷ ಜಿ. ಆರ್. ನಾಯ್ಕ, ರಾಜ್ಯ ಪ್ರಧಾನ ಕಾರ್ಯದರ್ಶಿ ಮುನಾಫ್ ಮಿರ್ಜಾನಕರ, ಎಂ.ಕೆ.ಗಡವಾಲೆ ಕ್ಷೇತ್ರಾಧ್ಯಕ್ಷ ಅರುಣಕುಮಾರ ಗೊಂದಳೆ, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಕುಟ್ರಿ, ತುಕಾರಾಮ ಗುಡಕರ, ಹಸನ ಶೇಖ, ಬಶೀರ ಅತ್ತಾರ ಇತರರಿದ್ದರು. ನಂತರ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಯಿತು.  

         
    

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಕಾರವಾರ: ಚುನಾವಣಾ ವೀಕ್ಷಕರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ವೀಕ್ಷಣೆ; 17 ನಾಮಪತ್ರಗಳು ತಿರಸ್ಕೃತ

ಲೋಕಸಭಾ ಸಾರ್ವತ್ರಿಕ ಚುನಾವಣೆ-2024 ಕ್ಕೆ ಸಂಬಂಧಿಸದಂತೆ ಜಿಲ್ಲೆಗೆ ಭಾರತ ಚುನಾವಣಾ ಆಯೋಗದಿಂದ ವೀಕ್ಷಕರಾಗಿ ನೇಮಕಗೊಂಡಿರುವ ರಾಜೀವ್ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಉತ್ತರಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 19 ಅಭ್ಯರ್ಥಿಗಳಿಂದ 36 ನಾಮಪತ್ರ ಸಲ್ಲಿಕೆ.

ಕಾರವಾರ :12- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ , ನಾಮಪತ್ರಗಳ ಸಲ್ಲಿಕೆಗೆ ಕೊನೆಯ ದಿನವಾದ ...

ಭಟ್ಕಳ : ಈದುಲ್ ಫಿತ್ರ್ ನಿಮಿತ್ತ ಒಂದು ಲಕ್ಷ ಇಪ್ಪತ್ತು ಸಾವಿರಕ್ಕೂ ಅಧಿಕ ಫೀತ್ರ್ ಅಕ್ಕಿ ವಿತರಣೆ

ಭಟ್ಕಳ: ಈದುಲ್ ಫಿತ್ರ್ ಸಂದರ್ಭದಲ್ಲಿ ಪ್ರತಿಯೊಬ್ಬ ಮುಸ್ಲಿಮನು ತನ್ನ ಈದ್ ಹಬ್ಬಕ್ಕೆ ಒಂದು ಮುಂಚೆ ಕಡ್ಡಾಯವಾಗಿ ನೀಡುವ ಫಿತ್ರ್ ...

ಭಟ್ಕಳ ಸ್ಪೋರ್ಟ್ಸ್ ಅಕಾಡೆಮಿ ಮತ್ತು BMYF ಸಹಯೋಗದೊಂದಿಗೆ ಎ.20-21 ರಂದು ಯುವ ಪ್ರತಿಭೆಗಳಿಗಾಗಿ ಇಂಟರ್-ಕ್ರಿಕೆಟ್ ಲೀಗ್ ಆಯ್ಕೆ

ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಉದಯೋನ್ಮುಖ ಕ್ರಿಕೆಟ್ ಪ್ರತಿಭೆಗಳನ್ನು ಗುರುತಿಸುವ ಮತ್ತು ಪೋಷಿಸುವ ಪ್ರಯತ್ನದಲ್ಲಿ, ಭಟ್ಕಳ ...