ವಿವಿಧ ಬೇಡಿಕೆ ಈಡೆರಿಸುವಂತೆ ಎ.ಆಯ್.ಯು.ಟಿ.ಯು.ಸಿ ತಾಲೂಕ ಘಟಕ ದಿಂದ ಪ್ರಧಾನಿಗೆ ಮನವಿ

Source: sonews | By Staff Correspondent | Published on 18th January 2018, 1:08 AM | Coastal News |

ಮುಂಡಗೋಡ : ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಮುಂಡಗೋಡ ಘಟಕ ವಿವಿಧ ಬೇಡಿಕೆಗಳು ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ ಮುಖಾಂತರ ಮಾನ್ಯ ಪ್ರಧಾನಮಂತ್ರಿ ಯವರಿಗೆ ಮನವಿ ಸಲ್ಲಿಸಿತು
ಆಶಾ, ಂಗನವಾಡಿ, ಬಿಸಿಯೂಟ ಕಾರ್ಯಕತೆಯರನ್ನು ‘ವರ್ಕರ್ಸ್’ ಅಥವಾ ಕಾರ್ಮಿಕರಂದು ಪರಿಣಿಸಬೇಕು ತಿಂಗಳಿಗೆ18,000 ರೂ ಕ್ಕೆ ಕಡಮೆ ಇರದಂತೆ ವೇತನ ನೀಡಬೇಕು ಮತ್ತು ಮಾಸಿ ರೂ 3000 ಪೆನ್ಷನ್ ಜೊತೆಗೆ ಸಾಮಾಜಿಕ ಭದ್ರತೆ ನೀಡಬೇಕು ಎಂದು 45ನೇ ‘ ಭಾರತ ಕಾರ್ಮಿಕ ಸಮ್ಮೇಳನ’(ಐಎಲ್‍ಸಿ) ವು ಮಾಡಿರುವ ಶಿಫಾರಸ್ಸುಗಳನ್ನು ಕೂಡಲೇ ಜಾರಿಗೊಳಿಸಬೇಕು
ಕನಿಷ್ಠ ವೇತನದ ಸರಿಸಮ ವೇತನ ನೀಡಲು ಮತ್ತು ಐಸಿಡಿಎಸ್-ಎನ್‍ಎಚ್‍ಎಂ-ಎಂಎಸ್‍ಎ ಮತ್ತಿತರ ಕೇಂದ್ರ ಸರಕಾರದ ಪ್ರಾಯೋಜಿತ ಯೋಜನೆಗಳ ಉತ್ಮ ಗುಣಮಟ್ಟ ಮತ್ತು ಸಮರ್ಪಕ ಅನುಷ್ಠಾನಕ್ಕೆ ಅಗತ್ಯ ಮೂಲ ಸೌಕರ್ಯಗಲನ್ನು ಅಭಿವೃದ್ದಿ ಪಡಿಸಲು ಹಾಗೂ  ಯೋಜನೆಯನ್ನು ಸಾರ್ವತ್ರಿಕರಿಸಲು ಬೇಕಾಗುವ ಖರ್ಚು-ವೆಚ್ಚಗಳನ್ನು ಸರಿದೂಗಿಸುವಷ್ಟು ಹಣವನ್ನು ಮುಂಬರುವ 201819 ನೇ ಸಾಲಿನ ಕೇಂದ್ರ ಬಜೆಟ್ ನಲ್ಲಿ ಈ ಯೋಜನೆಗಳನ್ನು ಒದಗಿಸಬೇಕು
ಯೋಜನೆಯನು ನಗದು ಹಣ ವರ್ಗಾವಣೆಯಂತಹ ಯಾವುದೇ ರೀತಿಯಲ್ಲಿ ಮಾಡರ್ಪಡಿಸುವುದು, ಬದಲಾಯಿಸುವುದು ಮತ್ತು ಖಾಸಗಿಯವರಿಗೆ ವಹಿಸುವುದು ಮಾಡಬಾರದು ಎಂದು ಮನವಿಯಲ್ಲಿ ತಿಳಿಸಿದ್ದಾರೆ
ಸಂಘದ ಅಧ್ಯಕ್ಷೆ ಕಸ್ತೂರಿ ಬಿ.ಎಚ್, ಜಿಲ್ಲಾ ಕಾರ್ಯದರ್ಶಿ ಈರಮ್ಮ ವಿರಕ್ತಮಠ, ತಾ. ಉಪಾಧ್ಯಕ್ಷೆ ಗೀತಾ ಶೇಟ ಸೇರಿದಂತೆ ಕೇಂದ್ರ ಕಾರ್ಮಿಕ ಸಂಘಟನೆ ಆಲ್ ಇಂಡಿಯಾ ಯುನೇಟೆಡ್ ಟ್ರೇಡ್, ಯೂನಿಯನ್ ಸೆಂಟರ್ ಮತ್ತು ಅದಕ್ಕೆ ಸಂಯೋಜಿವಾದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಹಾಗೂ ಕರ್ನಾಟಕ ರಾಜ್ಯ ಸಂಯುಕ್ತ ಅಂಗನವಾಡಿ ನೌಕರರ ಸಂಘ ಮತ್ತು ಕರ್ನಾಟಕ ರಾಜ್ಯ ಸಂಯುಕ್ತ ಅಕ್ಷರದಾಸೋಹ ಕಾರ್ಮಿಕ ರ ಸಂಘಗಳ ಕಾರ್ಮಿಕರು ಉಪಸ್ಥಿತರಿದ್ದರು

Read These Next