ಮುಂಡಗೋಡ : ಹಸಿರು ಹುಲ್ಲು ತಿಂದು ೧೦ ಜಾನವಾರು ಸಾವು, ೨೦ಕ್ಕೂ ಅಧಿಕ ಜಾನವಾರು ಅಸ್ವಸ್ಥ

Source: sonews | By Staff Correspondent | Published on 19th July 2017, 4:12 PM | Coastal News | State News | Special Report | Don't Miss |

ಮುಂಡಗೋಡ: ಗೋವಿನಜೋಳ ಗದ್ದೆಯಲ್ಲಿ ಬೆಳದಿರುವ ಹುಲ್ಲು ( ಹಸಿರು ಮೇವು) ತಿಂದು ಸುಮಾರು ೨೨ ಜಾನುವಾರಗಳು ಅಸ್ವಸ್ಥಗೊಂಡಿದ್ದು ಅವುಗಳಲ್ಲಿ ಹತ್ತ ಜಾನುವಾರಗಳು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ತಾಲೂಕಿನ ಇಂದೂರ, ಕೊಪ್ಪ, ಇಂದಿರಾನಗರ, ಮಜ್ಜಿಗೇರಿ, ನ್ಯಾಸರ್ಗಿ ಗ್ರಾಮದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ಹತ್ತರಷ್ಟು ಎತ್ತುಗಳು, ಕಳೆನಾಶಕ ಸಿಂಪಡಿಸಿದ ಮೇವು ತಿಂದು ಮೃತಪಟ್ಟಿದ್ದು, ಇಂದೂರ-೨, ಇಂದಿರಾನಗರ-೨, ಮಂಜ್ಜಿಗೇರಿ-೩, ನ್ಯಾಸರ್ಗಿ-೨, ನಂದಿಗಟ್ಟಿ-೧. ಒಟ್ಟೂ ೧೦ ಹಸುಗಳು ಸಾವನ್ನಪ್ಪಿವೆ. ೨೫ಕ್ಕೂ ಹೆಚ್ಚು ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಗಿದೆ.

ತಾಲೂಕಿನ ಮುಂಡಗೋಡ ಹೋಬಳಿಯ ಕೆಲವೆಡೆ ಗೋವಿನಜೋಳ ಬೆಳೆಯಲಾಗಿದ್ದು, ಅದರಲ್ಲಿ ಬೆಳದಿರುವ ಹುಲ್ಲು ನಶಿಸಲಿ ಎಂದು ರೈತರು ಲಾಡಸ್, ಸ್ಟಿಜರ್(ಕಳೆನಾಶಕ ಔಷಧಿ) ಎಣ್ನೆಯನ್ನು ಸಿಂಪರಣೆ ಮಾಡಿದ್ದು, ಸಿಂಪರಣೆ ಮಾಡಿ ಐದಾರು ದಿನಗಳವರಗೆ ಹುಲ್ಲು ಹಸಿರಾಗಿಯೇ ಇರುತ್ತದೆ. ನಂತರ ಒಣಗುತ್ತಾ ಹೋಗುತ್ತದೆ. ಆದರೆ ಕಳೆನಾಶಕ ಸಿಂಪಡಿಸಿದ ಮೇವನ್ನು ಜಾನಿವಾರು ತಿಂದು ಅಸ್ವಸ್ಥಗೊಂಡು ಸಾಯುತ್ತಿವೆ. ಇದರಿಂದ ಇಲ್ಲಿನ ರೈತರು ಆತಂಕಗೊಂಡಿದ್ದಾರೆ.
ರೈತರಲ್ಲಿ ಜಾಗೃತಿ..  
ಗೋವಿನಜೋಳ ಜಮೀನಿನಲ್ಲಿ ಕಳೆನಾಶಕ ಸಿಂಪರಣೆ ಮಾಡಿ ಅದೆ ಹುಲ್ಲನ್ನು ಜಾನುವಾರುಗಳಿಗೆ ಮೇವಿನ ರೂಪದಲ್ಲಿ ಹಾಕುವುದಾಗಲಿ. ಗದ್ದೆಯಲ್ಲಿ ಮೇಯಿಸುವುದಾಗಲಿ ಮಾಡಬಾರದು ಎಂದು ಇಂದೂರ ಗ್ರಾಮದ ಸುತ್ತ-ಮುತ್ತಲಿನ ಗ್ರಾಮಗಳಲ್ಲಿ ಡಂಗುರ ಮೂಲಕ  ಜಾಗೃತಿ ಮೂಡಿಸಲಾಗುತ್ತಿದೆ.
ಪಶು ವೈದ್ಯರ ಹೇಳಿಕೆ...
ಗೋವಿನಜೋಳದ ಗದ್ದೆಯಲ್ಲಿ ಬೆಳೆದಿರುವ ಹಸಿರು ಹುಲ್ಲನ್ನು ತಿಳಿಯದೇ, ಕೆಲವರು ಕೊಯ್ಲು ಮಾಡಿಕೊಂಡು ಜಾನುವಾರುಗಳಿಗೆ ಹಾಕುವುದರಿಂದ ಇಂತಹ ಘಟನೆಗಳು ಜರುಗುತ್ತಿವೆ. ಕಳೆನಾಶಕ ಸಿಂಪಡಿಸಿದ ಹಸಿರು ಮೇವು ತಿನ್ನುವುದರಿಂದ, ಜಾನುವಾರುಗಳ ಬಾಯಲ್ಲಿ ಜೊಲ್ಲು ಜೋರುವುದು, ನಡುಕ ಉಂಟಾಗುವುದು, ಹೊಟ್ಟೆ ಉಬ್ಬುವುದು, ದೇಹದ ಉಷ್ಣತೆಯಲ್ಲಿ ಏರಿಳಿತ ಉಂಟಾಗಿ ಸಾಯುತ್ತಿವೆ. ಬೆಳಿಗ್ಗೆಯಿಂದ ಮೇಯ್ದು ಸಂಜೆಯ ವೇಳೆಗೆ ಮೇಲಕು ಹಾಕುವ ಸಂಸರ್ಭದಲ್ಲಿ ರಸ ಒಡೆದು,  ರಕ್ತದಲ್ಲಿ ವಿಷದ ಅಂಶ ಸೇರುತ್ತದೆ ಇದರಿಂದ ಏಕಾ‌ಏಕಿ ಸಾವನ್ನಪ್ಪುತ್ತವೆ ಎಂದು ವೈದ್ಯರು ತಿಳಿಸಿದರು.

ಮಜ್ಜಿಗೇರಿ ಗ್ರಾಮದಲ್ಲಿ ಮೂರು ಹಸಿರು ಜಾನುವಾರು ಹಸಿರು ಮೇವು ತಿಂದು ಮೃತಪಟ್ಟಿವೆ. ಇದಲ್ಲದೆ ನ್ಯಾಸರ್ಗಿ, ಇಂದಿರಾನಗರ, ಇಂದೂರು, ನಂದಿಗಟ್ಟಿ ಗ್ರಾಮದಲ್ಲಿ ಇಂತಹ ಘಟನೆಗಳು ಜರುಗಿವೆ. ಈ ಬಗ್ಗೆ ರೈತರಲ್ಲಿ ತಿಳುವಳಿಕೆ ಮೂಡಿಸಲಾಗುತ್ತಿದ್ದು, ಗೋವಿನಜೋಳ ಗದ್ದೆಯಲ್ಲಿರುವ ಹಸಿರು ಹುಲ್ಲನ್ನು ಜಾನುವಾರುಗಳಿಗೆ ಹಾಕದಂತೆ ಸೂಚಿಸಲಾಗುತ್ತಿದೆ. ಈ ಬಗ್ಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಡಂಗುರ ಹೊಡೆಸಿ ಜಾಗೃತಿ ಮೂಡಿಸಲಾಗುತ್ತದೆ ಎಂದು ತಾಲ್ಲೂಕು ಪಶು ವೈದ್ಯಾಧಿಕಾರಿ ಅರವಿಂದ ಹುಜರಿತ್ತಿ ಹೇಳಿದರು.
‘ಗೋವಿನಜೋಳ ಹೊ ಬೀಡುವ ವರಗೆ ರೈತರು ಗೋವಿನಜೋಳ ಸೇರಿದಂತೆ ಕಳೆನಾಶಕ ಸಿಂಪರಣೆ ಮಾಡಿದ ಹುಲ್ಲನ್ನು ಜಾನುವಾರುಗಳಿಗೆ ತಿನ್ನಿಸಬಾರದು, ಕಳೆನಾಶಕ ಸಿಂಪರಣೆ ಮಾಡಿದ ಮೇವು ತಿನ್ನುವುದರಿಂದ ಎತ್ತುಗಳ ಹೊಟ್ಟೆ ಉಬ್ಬಿ ಸಾಯುತ್ತಿವೆ’
                                                       ಡಾ.ಜಯಚಂದ್ರ ಕೆಂಪಶಿ ಪಶುವೈದ್ಯ ಇಂದೂರ.


       ‘ಸಾಲಾ ಮಾಡಿ ಕಷ್ಟಪಟ್ಟು ಹಸು ತಂದಿದ್ದೆ ಆದರೆ ಪ್ರತಿ ವರ್ಷದಂತೆ ಈ ವರ್ಷವು ಗೋವಿನಜೋಳದಲ್ಲಿ ಬೆಳದಿರುವ ಮೇವನ್ನು ಹಸುಗೆ ತಿನ್ನಿಸಿದೆ, ತಿಂದು ಒಂದೆ ದಿನದಲ್ಲಿ ಹಸು ಸಾವನ್ನಪ್ಪಿದೆ ಇದರಿಂದ ಮನಸಿಗೆ ತುಂಬಾ ಆಘಾತವಾಗಿದೆ...’
                                                      ಯಲ್ಲಪ್ಪ ಓಣಿಕೇರಿ ಇಂದೂರ ರೈತ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...