ಎರಡು  ಬೈಕ್ ಮಧ್ಯ ಅಪಘಾತ; ಟಿಬೇಟ್ ಬೈಕ್ ಸವಾರನ ಸ್ಥಳದಲ್ಲೇ ಸಾವು

Source: S O News service | By Staff Correspondent | Published on 25th October 2016, 7:58 PM | Coastal News | State News | Don't Miss |

ಮುಂಡಗೋಡ : ಬೈಕ್‌ಗಳ ಮಧ್ಯ ಡಿಕ್ಕಿ ಸಂಭವಿಸಿ ಬೈಕ್ ಸವಾರನೋರ್ವ ಸ್ಥಳದಲ್ಲಿ ಮೃತಪಟ್ಟು ಎರಡು ಸವಾರರು ಗಾಯಗೊಂಡ  ಘಟನೆ ಮುಂಡಗೋಡ-ಕಲಘಟಗಿ ರಸ್ತೆಯ ಕೊಪ್ಪ ಗ್ರಾಮದ ಹೊರ ವಲಯದ ಕೆರೆ ಹತ್ತಿರ ಮಂಗಳವಾರ ಸಂಭವಿಸಿದೆ
ಮೃತಪಟ್ಟ ಬೈಕ್ ಸವಾರನನ್ನು ಟಿಬೇಟ್ ಕ್ಯಾಂಪ್ ನಂ ೬  ರ ನಿವಾಸಿ ಅರ್ಜನ್‌ದೊರ್ಜೆ (೩೮) ಎಂದು ತಿಳಿದು ಬಂದಿದೆ.
ಬೈಕ್ ಹಿಂದೆ ಕುಳಿತ ಗಂಭೀರವಾಗಿ ಗಾಯಗೊಂಡವನನ್ನು ಕೊಪ್ಪ ಗ್ರಾಮದ ಮೌಲಾಸಾಬ ಮಹಬೂಬಸಾಬ ಉಸ್ತಾದಿ(೩೬), ಬೈಕ್ ಅಪಘಾತ ಪಡಿಸಿದವನನ್ನು ಕೊಪ್ಪಗ್ರಾಮದ ರಾಜೇಸಾಬ ಹೈದರಲಿ ನಿರಲಗಿ(೨೭) ಎಂದು ಹೇಳಲಾಗಿದೆ.
ರಾಜೇಸಾಬ ನಿರಲಗಿ ಬೈಕ್ ಹಿಂದೆ ರಾಜೇಸಾಬ ಉಸ್ತಾದಿಯನ್ನು ಕೂರಿಸಿಕೊಂಡು  ಬೈಕ್ ಚಲಾಯಿಸುತ್ತಾ ಮುಂಡಗೋಡದಿಂದ ಕಲಘಟಗಿ ದಿಕ್ಕಿಗೆ ಹಾಗೂ ಮೃತ ಅರ್ಜನದೊರ್ಜೆ ಮುಂಡಗೋಡ ದಿಕ್ಕಿಗೆ  ಬರುತ್ತಿದ್ದಾಗ ಎದುರು ಬದರು ಬೈಕ್ ಗಳ ಡಿಕ್ಕಿ ಸಂಭವಿಸಿದೆ. ದೊರ್ಜೆ ಸ್ಥಳದಲ್ಲಿ ಮೃತಪಟ್ಟಿದ್ದಾನೆ. ರಾಜೇಸಾಬ ನಿರಲಗಿ ಬೈಕ್ ಹಿಂದೆ ಕುಳಿತಕೊಂಡ ಸವಾರ ರಾಜೇಸಾಬ ಉಸ್ತಾದಿ ಹಣೆಗೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕುರಿತು ಮುಂಡಗೋಡ ಪಿ‌ಎಸೈ ಲಕ್ಕಪ್ಪ ನಾಯಕ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಕೈಗೊಂಡಿದ್ದಾರೆ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಗದಗ: ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು; ಸುಪಾರಿ ನೀಡಿದ ಮನೆಮಗ ಸಹಿತ 8 ಮಂದಿಯ ಬಂಧನ

ಮೂರು ದಿನಗಳ ಹಿಂದೆ ಗದಗದಲ್ಲಿ ನಡೆದಿದ್ದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಎಂಟು ಮಂದಿ ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...