ಮುಂಡಗೋಡ : ಪಟ್ಟಣ ಪಂಚಾಯತ ಚುನಾವಣೆ, 88 ನಾಮಪತ್ರಗಳಲ್ಲಿ 5 ನಾಮಪತ್ರಗಳು ತಿರಸ್ಕೃತ

Source: sonews | By Staff Correspondent | Published on 20th August 2018, 11:10 PM | Coastal News |

ಮುಂಡಗೋಡ : ಇಲ್ಲಿನ ಪಟ್ಟಣ ಪಂಚಾಯತ 19 ವಾರ್ಡಿನ ಚುನಾವಣೆಗೆ ಒಟ್ಟು 88 ನಾಮಪತ್ರದಲ್ಲಿ 5 ನಾಮಪತ್ರ ತಿರಸ್ಕೃತಗೊಂಡಿದೆ. 

ಚುನಾವಣೆ ಅಧಿಕಾರಿಗಳು ಸೋಮವಾರ 86 ಅಭ್ಯರ್ಥಿಗಳ 88 ನಾಮಪತ್ರ ಪರಿಶೀಲನೆ ವೇಳೆ 5 ನಾಮಪತ್ರ ತಿರಸ್ಕೃತಗೊಂಡಿದೆ.  1ರಿಂದ 10 ವಾರ್ಡಿನ್ ನಾಮಪತ್ರಗಳನ್ನು ತಹಶೀಲ್ದಾರ ಅಶೋಕ ಗುರಾಣಿ ಪರಿಶಿಲಿಸಿದರು ಹಾಗೂ 11 ರಿಂದ 19 ವಾರ್ಡಿನ ನಾಪತ್ರಗಳನ್ನು ಅಕ್ಷರದಾಸೋಹ ಅಧಿಕಾರಿ ಮಂಜುನಾಥ ಸಾಳೊಂಕೆ ನಾಮಪತ್ರ ಪರಿಶೀಲಿದರು.  ನಾಮಪತ್ರ ತಿರಸ್ಕೃತಗೊಂಡ ಅಭ್ಯರ್ಥಿಗಳಾದ ವಾರ್ಡ್ ನಂ 9ರ ಗೀತಾ ಕಲಾಲ ಕಾಂಗ್ರೆಸ್ ಗೆ ಅಭ್ಯರ್ಥಿಯಾಗಿ ನಾಮಪತ್ರಸಲ್ಲಿಸಿದ್ದರು ಆದರೆ ಬಿ ಫಾರಂ ಲಗ್ಗತ ಇಟ್ಟರದೇ ಇರುವುದರಿಂದ ನಾಮಪತ್ರ ತೀರಸ್ಕೃತಗೊಂಡಿದೆ  ವಾರ್ಡನಂ 13 ಶಿವಸೇನಾ ಅಭ್ಯರ್ಥಿ  ಸಂತೋಷ ಪೂಜಾರ, ಮತ್ತು 17 ನೇ ವಾರ್ಡಿನ ರೇಣುಕಾ ಬೋವಿಯವರ  ನಾಮಪತ್ರ ತಿರಸ್ಕೃತಗೊಂಡರೆ ಇನ್ನು 2ನೇ ವಾರ್ಡಿನ ಅಭ್ಯರ್ಥಿ ಜಮೀರ ದರ್ಗಾವಾಲೆ ಒಂದು ಕಾಂಗ್ರೆಸ್ ಹಾಗೂ ಪಕ್ಷೆÃತರ  ಎಂದು ಎರಡು ನಾಮತ್ರಗಳು ಸಲ್ಲಿಸಿದ್ದರು ಕಾಂಗ್ರೆಸ್ ನಾಮಪತ್ರ ತಿರಸ್ಕೃತಗೊಂಡಿದೆ 19 ನೇ ವಾರ್ಡಿನ ಪಕ್ಷೆÃತರ ರಾಮಚಂತ್ರ ಬೆಳವತ್ತಿ ನಾಮಪತ್ರ ತಿರಸ್ಕೃತಗೊಂಡಿದೆ.

ಒಟ್ಟಿನಲ್ಲಿ 88 ನಾಮಪತ್ರದಲ್ಲಿ 5 ನಾಮಪತ್ರ ತಿರಸ್ಕೃತಗೊಂಡಿದೆ ಆ.23 ರಂದು ಉಮೇದಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೆ ದಿನವಾಗಿದೆ. 


 

Read These Next