ಮುಂಡಗೋಡ;ದರೋಡೆಕೋರರ ಬಂಧನ; ಪೊಲೀಸ್ ವರಿಷ್ಠಾಧಿಕಾರಿಯಿಂದ ಶ್ಲಾಘನೆ

Source: sonews | By Staff Correspondent | Published on 25th January 2019, 10:46 PM | Coastal News | Don't Miss |

ಮುಂಡಗೋಡ : ಟಿಬೇಟ್ ಕ್ಯಾಂಪ್ ನ ಮನೆಯೊಂದಕ್ಕೆ ನುಗ್ಗಿ ಲಕ್ಷಂತಾರ ನಗನಾಣ್ಯ ದರೋಡೆಮಾಡಿದ್ದ ದರೋಡೆಕೋರರನ್ನು ಪೊಲೀಸರು ಶುಕ್ರವಾರ  4 ಆರೋಪಿಗಳನ್ನು ಬಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಜನವೇರಿ 19 ರಂದು ಟಿಬೇಟ್ ಕ್ಯಾಂಪ್ ನಂ 1 ರಲ್ಲಿ ಜಾನ್‍ಚುಪ್ ರಿಚನ್ ತೆನಜಿಂಗ್ ಮನೆಗೆ ಡಕಾಯಿತರು ನುಗ್ಗಿ ಸುಮರು 7 ಲಕ್ಷ ನಗದು, 4 ಲಕ್ಷ ರೂ ಬೆಲೆಬಾಳುವ ಚಿನ್ನಾಭರಣ ಹಾಗೂ ಬೆಲೆ ಬಾಳುವ ಮೊಬೈಲ್, 1 ಐ ಪ್ಯಾಡ್, 1 ಸಿ.ಸಿ ಟಿವಿ  ದರೋಡಕೊರರು ದರೋಡೆ ಮಾಡಿಕೊಂಡು ಹೋಗಿದ್ದರು. ಈ ಕುರಿತು ಜಾನ್‍ಚುಪ್ ರಿಚನ್ ತೆನಜಿಂಗ್ ಪೊಲೀಸ ಠಾಣೆಯಲ್ಲಿ ದೂರು ದಾಖಸಿದ್ದರು.

ಪೊಲೀಸ ಇಲಾಖೆ ಇದನ್ನು ಗಂಭೀರವಾಗಿ ತೆಗೆದುಕೊಂಡು ದರೋಡೆಕೋರನ್ನು ಹಿಡಿಯಲು ಜಿಲ್ಲಾ ಎಸ್.ಪಿ ವಿನಯಕುಮಾರ ಪಾಟೀಲ ಮಾರ್ಗದರ್ಶನದಲ್ಲಿ ಶಿರಸಿ ಡಿಎಸ್‍ಪಿ ನೇತೃತ್ವದಲ್ಲಿ 4 ತಂಡಗಳನ್ನು ರಚಿಸಿದ್ದರು. ತಂಡದಲ್ಲಿ ಪಿಆಯ್ ಮುಂಡಗೋಡ, ಸಿಪಿಆಯ್ ಶಿರಸಿ, ಸಿಪಿಆಯ್ ಜೋಯಿಡಾ ಹಾಗೂ ಪಿಎಸ್‍ಆಯ್ ಅಂಕೋಲಾ ತಂಡ ಒಳಗೊಂಡಿತ್ತು.
ಹಗಲು ರಾತ್ರಿಯನ್ನದೆ ಪೊಲೀಸರು ದರೋಡೆಕೋರರನ್ನು ಪತ್ತೆಹಚ್ಚಲು ನಿರತರಾದರು
ಜನವೇರಿ 25 ರಂದು ದರೋಡಕೋರರು ಮುಂಡಗೋಡದಲ್ಲಿ ಇರುವ  ಖಚಿತ ಮಾಹಿತಿ ಪಿಆಯ್ ಶಿವಾನಂದ ಚಲವಾದಿಯವರಿಗೆ ದೊರೆಯುತ್ತಿದ್ದಂತೆ ಕಾರ್ಯಪ್ರರ್ವತರಾದ ಅವರು  ಕ್ಷೀಪ್ರ ಕಾರ್ಯಾಚರಣೆ ನಡೆಸಿ ದರೋಡ ಕೋರರನ್ನು ಬಂದಿಸಿದ್ದಾರೆ
ಬಂದಿತ ದರೋಡೆಕೊರರು ಎಲ್ಲರೂ ಮುಂಡಗೋಡಿನ ನಿವಾಸಿಗಳಾಗಿದ್ದಾರೆ  ಗಾಂಧಿನಗರ ನಿವಾಸಿ ವಸಂತ ಕರಿಯಪ್ಪ ಕೊರವರ(28), ಆನಂದನಗರದ  ಮಂಜು ಅರ್ಜುನ್ ನವಲೆ(23), ಆನಂದ ನಗರದ ಕಿರಣ ಪ್ರಕಾಶ(23), ಬಸಾಪುರ ಗ್ರಾಮದ ಮಧುಸಿಂಗ್ ಗಂಗಾರಾಮಸಿಂಗ್ ರಜಪೂತ(24) ಐದನೇ ಆರೋಪಿ ಪರಾರಿಯಾಗಿದ್ದಾನೆ ಎಂದು ಹೇಳಲಾಗಿದೆ.

ದರೋಡೆಕೋರರಿಂದ ನಾಲ್ಕುಲಕ್ಷ ಐವತ್ತು ಸಾವಿರ ನಗದು, 4 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣ ಹಾಗೂ ಜಖಂಗೋಳಿಸಿದ 3 ಮೊಬೈಲ್ ಹಾಗೂ ಒಂದು ಪ್ಯಾಡ್ ಸೇರಿದಂತೆ ದರೋಡೆ ಕೃತ್ಯಕ್ಕೆ ಬಳಸಿದ ಬಜಾಜಾ ಕಂಪನಿಯ ಮೋಟರ್ ಸೈಕಲ್, ಹಿರೋಹೊಂಡಾ ಮೋಟರ್ ಸೈಕಲ್, 1 ತಲವಾರ, 1 ಚಾಕು ಒಂದು ಕಟರ್ ಹಾಗೂ ಮಂಕಿ ಕ್ಯಾಪಗಳು  ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಜಿಲ್ಲಾ ವರಿಷ್ಠಾಧಿಕಾರಿ ವಿನಾಯಕ್ ಪಾಟೀಲ್ ಹೆಚ್ಚುವರಿ ಅಧಿಕ್ಷಕರು ಗೋಪಾಲ  ಬ್ಯಾಕೋಡ್, ಕಾರವಾರ ಇವರು ಈ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾದ ಡಿಎಸ್‍ಪಿ  ಜಿ.ಟಿ.ನಾಯಕ್, ಮುಂಡಗೋಡ ಪಿಆಯ್ ಶಿವಾನಂದ ಚಲವಾದಿ ಹಾಗೂ ಅವರ ತಂಡದ ಸಿಬ್ಬಂದಿಗಳಾದ ಪಿಎಸ್‍ಆಯ್ ಪ್ರೇಮನಗೌಡ ಪಾಟೀಲ, ಎಎಸ್‍ಆಯ್  ಎಸ್.ವಿ.ಚವ್ಹಾಣ, ಅಶೋಕ ರಾಠೋಡ, ರಾಘವೇಂದ್ರ ಜಿ. ವಿನಾಯಕ್ ಗೌಡ್, ಕುಮಾರ ಬಣಕಾರ, ಭಗವಾನ್ ಗಾಂವಕರ್, ವಿನೋದಕುಮಾರ ಜಿ.ಬಿ ಉಮೇಶ ತುಂಬರ್ಗಿ ಧರ್ಮರಾಜ ನಾಯಕ್, ಶಿವಾರಸ್ ಎಸ್, ಶಫೀ, ಚಂದು ಕೊರವರ, ಪ್ರಶಾಂತ ಪಾವಸ್ಕರ, ನಾಗಪ್ಪ ಲಮಾಣಿ ಹಾಗೂ ಚಾಲಕರಾದ ನಾರರಾಜ ಮತ್ತಿತ್ತರು ಪ್ರಕರಣದಲ್ಲಿ ಶ್ರಮ ವಹಿಸರುತ್ತಾರೆ ಇವರ ಉತ್ತಮ ಕಾರ್ಯಕ್ಕೆ ಮಾನ್ಯ ಎಸ್ಪಿ ಕಾರವಾರ ಹಗೂ ಹೆಚ್ಚುವರಿ ಎಸ್‍ಪಿ ಕಾರವಾರ ರವರು ಮೆಚ್ರಚುಗೆ ವ್ಯಕ್ತಪಡಿಸಿದ್ದ ಪತ್ತೆ ತಂಡಕ್ಕೆ ಸೂಕ್ತ ಬಹುಮಾನ ಘೋಷಿಸಿರುತ್ತಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಗುಲಬರ್ಗಾ ಲೋಕಸಭಾ (ಮೀಸಲು) ಕ್ಷೇತ್ರದ ಚುನಾವಣೆ: ಚುನಾವಣಾ ಸ್ಪರ್ಧಾ ಕಣದಲ್ಲಿ 14 ಅಭ್ಯರ್ಥಿಗಳು

ಕಲಬುರಗಿ : ಗುಲಬರ್ಗಾ ಲೋಕಸಭಾ (ಪ.ಜಾ. ಮೀಸಲು) ಕ್ಷೇತ್ರಕ್ಕೆ 2024ರ ಮೇ 7ರಂದು ನಡೆಯುವ ಚುನಾವಣೆಗಾಗಿ ನಾಮಪತ್ರಗಳನ್ನು ಹಿಂದಕ್ಕೆ ಪಡೆಯಲು ...

ಧಾರವಾಡ ಲೋಕಸಭೆ : ಉಮೇದುವಾರಿಕೆ ಹಿಂಪಡೆದ ಎಂಟು ಅಭ್ಯರ್ಥಿಗಳು; ಅಂತಿಮವಾಗಿ ಚುನಾವಣಾ ಸ್ಪರ್ಧೆಯಲ್ಲಿ 17 ಅಭ್ಯರ್ಥಿಗಳು

ಧಾರವಾಡ : 11-ಧಾರವಾಡ ಚುನಾವಣಾ ಕ್ಷೇತ್ರದಿಂದ ಲೋಕಸಭೆಗೆ ನಡೆಯುವ ಚುನಾವಣೆಗೆ ಕ್ರಮಬದ್ದವಾಗಿ ನಾಮನಿರ್ದೇಶನ ಮಾಡಲ್ಪಟ್ಟಿದ್ದ 25 ...

ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ ಪ್ರಶ್ನೆ

ಬಾಳೆಹೊನ್ನೂರು: ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ, ಮಲೆನಾಡಿನ ಅಡಕೆ, ಕಾಫಿ ಬೆಳೆಗಾರರ ಸಂಕಷ್ಟಕ್ಕೆ ...